ಪಾಟ್ನಾ: ಮೂವರು ಶಸ್ತ್ರಸಜ್ಜಿತ ದರೋಡೆಕೋರರು ಬಲವಂತವಾಗಿ ಬ್ಯಾಂಕ್ ಗೆ ನುಗ್ಗಲು ಪ್ರಯತ್ನಿಸಿದಾಗ ಇಬ್ಬರು ಮಹಿಳಾ ಪೊಲೀಸ್ ಕಾನ್ಸ್ ಟೇಬಲ್ ಗಳು ಒಂದು ಕ್ಷಣವೂ ಹಿಂಜರಿಯದೆ ಹೋರಾಡಿ ಅವರನ್ನು ತಡೆದ ಘಟನೆ ಬಿಹಾರದ ಹಾಜಿಪುರದಲ್ಲಿ ಬುಧವಾರ ನಡೆದಿದೆ.
ಸದರ್ ಪೊಲೀಸ್ ಠಾಣೆ ವ್ಯಾಪ್ತಿಯ ಸೆಂಡುರಿ ಚೌಕ್ ನಲ್ಲಿರುವ ಉತ್ತರ ಬಿಹಾರ ಗ್ರಾಮೀಣ ಬ್ಯಾಂಕ್ ನಲ್ಲಿ ಜೂಹಿ ಕುಮಾರಿ ಮತ್ತು ಶಾಂತಿ ಕುಮಾರ್ ಕಾವಲಿಗಿದ್ದರು. ಈ ವೇಳೆ ಪ್ರವೇಶದ್ವಾರದಲ್ಲಿ ಮೂವರು ವ್ಯಕ್ತಿಗಳು ಪ್ರವೇಶಿಸಲು ಪ್ರಯತ್ನಿಸಿದಾಗ ತಡೆದಿದ್ದಾರೆ. ಈ ಘಟನೆಯು ಸಿಸಿ ಕ್ಯಾಮರಾದಲ್ಲಿ ದಾಖಲಾಗಿದೆ.
ತಮ್ಮ ದಾಖಲೆಗಳನ್ನು ತೋರಿಸಲು ಕೇಳಿದಾಗ ಒಬ್ಬ ವ್ಯಕ್ತಿ ಪಿಸ್ತೂಲ್ ತೆಗೆದನು. ಕೂಡಲೇ ಜೂಹಿ ಮತ್ತು ಶಾಂತಿ ಇಬ್ಬರೂ ಅವರ ಮೇಲೆರಗಿದರು.
“ಮೂವರಿಗೂ ಬ್ಯಾಂಕ್ ನಲ್ಲಿ ಕೆಲಸವಿದೆಯೇ ಎಂದು ನಾನು ಕೇಳಿದೆ, ಮೊದಲು ಅವರು ಹೌದು ಎಂದು ಹೇಳಿದರು. ನಾನು ಪಾಸ್ ಬುಕ್ ತೋರಿಸಲು ಕೇಳಿದೆ ಆದರ ಅವರು ಬಂದೂಕನ್ನು ಹೊರತೆಗೆದರು” ಎಂದು ಜೂಹಿ ಹೇಳಿದರು.
Related Articles
ನಂತರದ ಗಲಾಟೆಯಲ್ಲಿ ಜೂಹಿ ಗಾಯಗೊಂಡರು ಆದರೆ ದರೋಡೆಕೋರರು, ಅಷ್ಟರೊಳಗೆ ಹೆದರಿದರು. ಪೊಲೀಸರು ಇದೀಗ ಪರಾರಿಯಾದ ಆರೋಪಿಗಳ ಪತ್ತೆಗೆ ಮುಂದಾಗಿದ್ದು, ದರೋಡೆ ಯತ್ನದ ಕುರಿತು ತನಿಖೆ ನಡೆಸುತ್ತಿದ್ದಾರೆ.