ಅಮೇರಿಕಾ: ಯುಎಸ್ ಮಿಸೌರಿ ರಾಜ್ಯದ ಓಝಾರ್ಕ್ಸ್ ಸರೋವರದಲ್ಲಿ ಮುಳುಗಿ ಭಾರತೀಯ ಮೂಲದ ಇಬ್ಬರು ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ ಎಂದು ಮಿಸೌರಿ ಪೊಲೀಸರು ತಿಳಿಸಿದ್ದಾರೆ.
ಮೃತರನ್ನು ಉತ್ತೇಜ್ ಕುಂಟಾ(24 ವರ್ಷ) ಮತ್ತು ಶಿವ ಕೆಲ್ಲಿಗರಿ(24 ವರ್ಷ) ಎಂದು ಮಿಸೌರಿ ಪೊಲೀಸರು ಗುರುತಿಸಿದ್ದಾರೆ.
ಶನಿವಾರ ಮಿಸೌರಿಯ ಓಝಾರ್ಕ್ಸ್ ಸರೋವರದ ಬಳಿ ಹೋಗಿದ್ದ ಇಬ್ಬರಲ್ಲಿ ಉತೇಜ್ ಕುಂಟಾ ಈಜಲು ನೀರಿಗೆ ಇಳಿದಿದ್ದಾನೆ ಈ ವೇಳೆ ನೀರಿನಲ್ಲಿ ಮುಳುಗಿದ್ದು ಆತನ ರಕ್ಷಣೆಗೆ ಶಿವ ಕೆಲ್ಲಿಗರಿ ನದಿಗೆ ಹಾರಿದ್ದಾನೆ ಇಬ್ಬರೂ ನೀರಿನಿಂದ ಮೇಲೆ ಬರಲಾಗದೆ ಮುಳುಗಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ವಿಚಾರ ತಿಳಿದು ರಕ್ಷಣಾ ತಂಡ ಸ್ಥಳಕ್ಕೆ ಧಾವಿಸಿ ಉತ್ತೇಜ್ ಕುಂಟಾ ಅವರ ದೇಹ ಸತತ ಎರಡು ಗಂಟೆಗಳ ಕಾರ್ಯಾಚರಣೆ ಬಳಿಕ ಪತ್ತೆಯಾಗಿದ್ದು, ಶಿವ ಕೆಲ್ಲಿಗರಿ ಮೃತ ದೇಹ ಭಾನುವಾರ ಪತ್ತೆಯಾಗಿದೆ ಎಂದು ಮೂಲಗಳು ತಿಳಿಸಿವೆ.
Related Articles
ಘಟನೆ ಕುರಿತು ತೆಲಂಗಾಣ ಸಚಿವ ಕೆ.ಟಿ.ರಾಮರಾವ್ ಮೃತ ವಿದ್ಯಾರ್ಥಿಯ ಕುಟುಂಬಕ್ಕೆ ಧೈರ್ಯ ತುಂಬಿದ್ದು, ಆದಷ್ಟು ಬೇಗ ಮೃತದೇಹಗಳನ್ನು ಭಾರತಕ್ಕೆ ಕರೆತರುವ ವ್ಯವಸ್ಥೆಗೆ ಸಹಕರಿಸುವುದಾಗಿ ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: ಕುಕ್ಕೆ: ಸ್ಕಂದ ಪಂಚಮಿಯಂದು 163 ಭಕ್ತರಿಂದ ಎಡೆಸ್ನಾನ ಸೇವೆ, ಇಂದು ಮಹಾರಥೋತ್ಸವ