Advertisement

Bengaluru: 2 ದ್ವಿಚಕ್ರ ವಾಹನಕ್ಕೆ ಒಂದೇ ನಂಬರ್‌ ಪ್ಲೇಟ್‌

01:09 PM Sep 30, 2024 | Team Udayavani |

ಬೆಂಗಳೂರು: ಎರಡು ದ್ವಿಚಕ್ರ ವಾಹನಗಳಿಗೆ ಒಂದೇ ನಂಬರ್‌ ಪ್ಲೇಟ್‌ ಅಳವಡಿಸಿಕೊಂಡು ಓಡಾಡುತ್ತಿದ್ದ ಸವಾರನ ವಿರುದ್ಧ ವಿವೇಕನಗರ ಪೊಲೀಸ್‌ ಠಾಣೆಯಲ್ಲಿ ಎಫ್ಐಆರ್‌ ದಾಖಲಾಗಿದೆ.

Advertisement

ವಿವೇಕನಗರದ ಆಂಧ್ರ ಕಾಲೋನಿ ನಿವಾಸಿ ಅಜರುದ್ದೀನ್‌(30) ಎಂಬಾತನ ವಿರುದ್ಧ ಪ್ರಕರಣ ದಾಖಲಾಗಿದೆ. ಜತೆಗೆ ಒಂದೇ ನಂಬರ್‌ ಪ್ಲೇಟ್‌ ಹೊಂದಿದ್ದ

ಎರಡೂ ದ್ವಿಚಕ್ರ ವಾಹನ ಜಪ್ತಿ ಮಾಡಲಾಗಿದೆ. ಪತ್ತೆ ಯಾಗಿದ್ದು ಹೇಗೆ?: ಅಶೋಕನಗರ ಸಂಚಾರ ಠಾಣೆಯ ಹೆಡ್‌ಕಾನ್‌ಸ್ಟೇಬಲ್‌ ಎಂ.ಕೆ.ಶಿವರಾಜು ಸೆ.27ರಂದು ಗಸ್ತು ಕರ್ತವ್ಯ ನಿರ್ವಹಿಸುತ್ತಿದ್ದರು. ಆಂಧ್ರ ಕಾಲೋನಿಯ ಶಾಂತಿನಿಕೇತನ ಸ್ಕೂಲ್‌ ಬಳಿ ಒಂದೇ ನಂಬರ್‌ ಪ್ಲೇಟ್‌ನ (ಕೆಎ-01-ಎಚ್‌ಟಿ- 9039)ದ, ಒಂದೇ ಬಣ್ಣದ ಎರಡು ಆಕ್ವಿವಾ ದ್ವಿಚಕ್ರ ವಾಹನಗಳು ಪತ್ತೆಯಾಗಿವೆ. ಈ ವೇಳೆ ಅನುಮಾಗೊಂಡ ಶಿವರಾಜು, ದ್ವಿಚಕ್ರ ವಾಹನದ ಮಾಲಿಕ ಅಜರುದ್ದೀನ್‌ನನ್ನು ವಿಚಾರಣೆ ಮಾಡಿ ದ್ವಿಚಕ್ರ ವಾಹನಗಳ ದಾಖಲೆ ತೋರಿಸುವಂತೆ ಕೇಳಿದ್ದಾರೆ. ಈ ವೇಳೆ ಆತ ಯಾವುದೇ ದಾಖಲೆ ತೋರಿಸದೆ ಗೊಂದಲದ ಉತ್ತರ ನೀಡಿದ್ದಾನೆ.

8 ಪ್ರಕರಣ ಸಂಬಂಧ 4 ಸಾವಿರ ರೂ. ದಂಡ ಬಾಕಿ: ಬಳಿಕ ಈ ದ್ವಿಚಕ್ರ ವಾಹನಗಳ ವಿರುದ್ಧ ದಾಖಲಾಗಿರುವ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳ ಪರಿಶೀಲಿ ಸಿದಾಗ 8 ಪ್ರಕರಣಗಳಲ್ಲಿ 4 ಸಾವಿರ ರೂ. ದಂಡ ಬಾಕಿಯಿ ರುವುದು ಕಂಡು ಬಂದಿದೆ. ಎರಡು ದ್ವಿಚಕ್ರ ವಾಹನಗಳಿಗೆ ಅಜರುದ್ದೀನ್‌ ಒಂದೇ ನೋಂದಣಿ ಸಂಖ್ಯೆ ಫ‌ಲಕ ಅಳವಡಿಸಿಕೊಂಡು ಸರ್ಕಾರಕ್ಕೆ ವಂಚಿಸುತ್ತಿರುವುದು ಕಂಡು ಬಂದಿದೆ.

ಅಂತೆಯೇ ಈ ದ್ವಿಚಕ್ರ ವಾಹನಗಳನ್ನು ಅಪರಾಧ ಕೃತ್ಯಗಳಿಗೆ ಬಳಸುವ ಸಾಧ್ಯತೆ ಹಿನ್ನೆಲೆಯಲ್ಲಿ ಎರಡು ದ್ವಿಚಕ್ರ ವಾಹನಗಳ ಸಮೇತ ಆತನನ್ನು ವಿವೇಕನಗರ ಪೊಲೀಸರಿಗೆ ಒಪ್ಪಿಸಿದ್ದು, ಈ ಸಂಬಂಧ ದೂರು ನೀಡಿದ್ದಾರೆ.

Advertisement

ಮತ್ತೊಂದು ದ್ವಿಚಕ್ರ ವಾಹನ ಖರೀದಿ: ಇನ್ನು ಆರೋಪಿ ವಿಚಾರಣೆಯಲ್ಲಿ ಅಜರುದ್ದೀನ್‌ ನಗರದಲ್ಲಿ ಫ‌ುಡ್‌ ಡೆಲಿವರಿ ಬಾಯ್‌ ಕೆಲಸ ಮಾಡುತ್ತಾನೆ. ಈತ 2012ರಲ್ಲಿ ಕೆಎ-01-ಎಚ್‌ಟಿ-9039 ನೋಂದಣಿ ಸಂಖ್ಯೆಯ ನೀಲಿ ಬಣ್ಣದ ಆಕ್ವೀವಾ ದ್ವಿಚಕ್ರ ವಾಹನ ಖರೀದಿಸಿದ್ದು, 2 ವರ್ಷದ ಹಿಂದೆ ದೆಹಲಿಯಲ್ಲಿ ಮತ್ತೂಂದು ಬಿಳಿ ಬಣ್ಣದ ಆಕ್ವೀವಾ ದ್ವಿಚಕ್ರ ವಾಹನ ಖರೀದಿಸಿದ್ದಾನೆ. ಬಳಿಕ ಈ ದ್ವಿಚಕ್ರ ವಾಹನದ ಬಣ್ಣವನ್ನು ನೀಲಿ ಬಣ್ಣಕ್ಕೆ ಬದಲಾಯಿಸಿದ್ದಾನೆ. ಅಲ್ಲದೆ, ತನ್ನ ಮತ್ತೂಂದು ದ್ವಿಚಕ್ರ ವಾಹನದ ನೋಂದಣಿ ಸಂಖ್ಯೆಯ ಫ‌ಲಕವನ್ನೇ ಅಳವಡಿಸಿಕೊಂಡು ಕಳೆದ ಎರಡು ವರ್ಷಗಳಿಂದ ನಗರದಲ್ಲಿ ಓಡಾಡುತ್ತಿರುವುದು ವಿಚಾರಣೆಯಿಂದ ತಿಳಿದು ಬಂದಿದೆ ಎಂದು ಸಂಚಾರ ಠಾಣೆ ಪೊಲೀಸರು ಮಾಹಿತಿ ನೀಡಿದರು.

ಈ ಸಂಬಂಧ ವಿವೇಕನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next