Advertisement

2 ಸಾವಿರ ರೂ. ನೋಟು ರದ್ದಾಗದು: ಜೇಟ್ಲಿ  ಸ್ಪಷ್ಟನೆ

03:50 AM Mar 18, 2017 | Team Udayavani |

ಹೊಸದಿಲ್ಲಿ: ಎರಡು ಸಾವಿರ ರೂ. ಮುಖಬೆಲೆಯ ಹೊಸ ನೋಟು ರದ್ದಾಗಲಿದೆ ಎಂಬ ಗಾಳಿಸುದ್ದಿಗೆ ಕೇಂದ್ರ ವಿತ್ತ ಸಚಿವ ಅರುಣ್‌ ಜೇಟ್ಲಿ ತೆರೆ ಎಳೆದಿದ್ದಾರೆ. ಹೊಸ ನೋಟನ್ನು ರದ್ದು ಮಾಡುವ ಯಾವುದೇ ಆಲೋಚನೆ ಸರಕಾರಕ್ಕಿಲ್ಲ ಎಂದು ಅವರು ಲೋಕಸಭೆಗೆ ನೀಡಿದ ಲಿಖೀತ ಉತ್ತರದಲ್ಲಿ ಸ್ಪಷ್ಟಪಡಿಸಿದ್ದಾರೆ.

Advertisement

500 ರೂ., 1 ಸಾವಿರ ರೂ. ಮುಖಬೆಲೆಯ ನೋಟುಗಳು ಅಪ ಮೌಲ್ಯಗೊಂಡ ಬಳಿಕ 2016 ಡಿ. 10ರ ವರೆಗೆ ಆರ್‌ಬಿಐನಲ್ಲಿ  ಹಳೆಯ ಮುಖಬೆಲೆಯ 12.44 ಲಕ್ಷ ಕೋಟಿ ರೂ. ಮೊತ್ತದ ನೋಟುಗಳು ಸಂಗ್ರಹವಾಗಿವೆ. ಜ. 27ರ ವರೆಗೆ 9.921 ಲಕ್ಷ ಕೋಟಿ ರೂ. ಮೌಲ್ಯದ ಹೊಸ ನೋಟುಗಳು ಚಲಾವಣೆ ಯಲ್ಲಿದ್ದವು. ಮಾ. 3ರ ವರದಿಯಂತೆ ಈಗ ಅದು 12 ಲಕ್ಷ ಕೋಟಿ ರೂ.ಗೆ ಏರಿದೆ ಎಂದು ಹೇಳಿದ್ದಾರೆ.

ಬರಲಿವೆ 10 ರೂ. ಪ್ಲಾಸ್ಟಿಕ್‌ ನೋಟುಗಳು!
ಕಾಗದದ ನೋಟಿಗಿಂತ ಪ್ಲಾಸ್ಟಿಕ್‌ ನೋಟಿಗೆ ಬಾಳಿಕೆ ಹೆಚ್ಚು ಎಂಬ ವಾದವನ್ನು ಪುರಸ್ಕರಿಸಿರುವ ಕೇಂದ್ರ, ಪ್ರಯೋಗಾರ್ಥ 10 ರೂ.ನ ಪ್ಲಾಸ್ಟಿಕ್‌ ನೋಟುಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲು ಆರ್‌ಬಿಐಗೆ ಅನುಮತಿ ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next