ಟೋಕಿಯೊ: ಟ್ಯಾಕ್ಸಿವೇಯಲ್ಲಿ ಎರಡು ವಿಮಾನಗಳು ಸಂಪರ್ಕಕ್ಕೆ ಬಂದ ನಂತರ ಟೋಕಿಯೊದ ಹನೆಡಾ ವಿಮಾನ ನಿಲ್ದಾಣದ ರನ್ ವೇ ಮುಚ್ಚಲಾಗಿದೆ ಎಂದು ಜಪಾನ್ ನ ಸಾರಿಗೆ ಸಚಿವಾಲಯ ತಿಳಿಸಿದೆ. ಘಟನೆಯಲ್ಲಿ ಯಾವುದೇ ಗಾಯಗಳು ಅಥವಾ ಹಾನಿಯ ಬಗ್ಗೆ ವರದಿಯಾಗಿಲ್ಲ.
ಶನಿವಾರ ಬೆಳಗ್ಗೆ 11 ಗಂಟೆ ಸುಮಾರಿಗೆ ಈ ಘಟನೆ ಸಂಭವಿಸಿದ್ದು, ಸಚಿವಾಲಯ ಮತ್ತು ಟೋಕಿಯೊ ಅಗ್ನಿಶಾಮಕ ಇಲಾಖೆಯ ಪ್ರಕಾರ ಥಾಯ್ ಏರ್‌ವೇಸ್ ಮತ್ತು ತೈವಾನ್ ನ ಇವಾ ಏರ್‌ವೇಸ್ ನಿರ್ವಹಿಸುವ ವಾಣಿಜ್ಯ ವಿಮಾನಗಳು ಎದುರು ಬದುರಾಗಿದೆ.
ಅಪಘಾತದ ನಂತರ ಹನೇಡಾದಲ್ಲಿನ ನಾಲ್ಕು ರನ್ ವೇಗಳಲ್ಲಿ, ‘ರನ್ ವೇ ಎ’ ಅನ್ನು ಕಾರ್ಯಾಚರಣೆಗಾಗಿ ಮುಚ್ಚಲಾಗಿದೆ.
ಎನ್ ಎಚ್ ಕೆ ಪ್ರಸಾರ ಮಾಡಿದ ದೃಶ್ಯಗಳಲ್ಲಿ, ಅಗ್ನಿಶಾಮಕ ಇಲಾಖೆ ಅಧಿಕಾರಿಗಳು ಮತ್ತು ಇತರ ಸಿಬ್ಬಂದಿ ಟ್ಯಾಕ್ಸಿವೇಯಲ್ಲಿ ಜಮಾಯಿಸುತ್ತಿದ್ದಂತೆ ರನ್ ವೇಯಲ್ಲಿ ಎರಡು ವಿಮಾನಗಳು ನಿಂತವು. ವಿಮಾನಗಳ ಬಳಿ ನೆಲದ ಮೇಲೆಯೂ ಗುರುತಿಸಲಾಗದ ಅವಶೇಷಗಳು ಕಂಡುಬರುತ್ತವೆ ಎಂದು ವರದಿಯಾಗಿದೆ.
Related Articles
ಟೋಕಿಯೊ ವಿಮಾನ ನಿಲ್ದಾಣದಲ್ಲಿ ವಿಮಾನ ಕಾರ್ಯಾಚರಣೆಯಲ್ಲಿ ವಿಳಂಬವಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿದೆ.