Advertisement

ನಾಪತ್ತೆ ಆದ ಇಬ್ಬರು ಸೂಫಿ ಸಂತರು ಪಾಕ್ ನ ಐಎಸ್ಐ ವಶದಲ್ಲಿ: ವರದಿ

03:05 PM Mar 18, 2017 | Team Udayavani |

ಇಸ್ಲಾಮಾಬಾದ್‌/ನವದೆಹಲಿ: ಪಾಕಿಸ್ತಾನದ ಪ್ರವಾಸದ ವೇಳೆ ನಾಪತ್ತೆ ಆಗಿದ್ದ ದೆಹಲಿಯ ಹಜರತ್‌ ನಿಜಾಮುದ್ದೀನ್‌ನ ದರ್ಗಾದ ಇಬ್ಬರು ಸೂಫಿ ಸಂತರು ಪಾಕಿಸ್ತಾನದ ಐಎಸ್ಐ ವಶದಲ್ಲಿದ್ದಾರೆ ಎಂದು ಹೆಸರು ಹೇಳಲು ಇಚ್ಚಿಸದ ಅಧಿಕಾರಿಗಳ ಮೂಲಗಳು ತಿಳಿಸಿರುವುದಾಗಿ ಪಿಟಿಐ ಶನಿವಾರ ವರದಿ ಮಾಡಿದೆ. 

Advertisement

ಹಿರಿಯ ಸೂಫಿ ಸಂತ ಸೈಯದ್‌ ಆಸಿಫ್ ಅಲಿ ನಿಝಾಮಿ (80), ಅವರ ಸೋದರ ನಾಝಿಮ್‌ ಅಲಿ ನಿಝಾಮಿ (65) ಅವರು ಮಾರ್ಚ್‌ 8ರಂದು ಪಾಕಿಸ್ತಾನಕ್ಕೆ ತೆರಳಿದ್ದರು. ಸೈಯದ್‌ ಆಸಿಫ್ ಕರಾಚಿಯ ತಮ್ಮ ಸೋದರಿಯ ಮನೆಯಲ್ಲಿ ತಂಗಿದರೆ, ನಾಝಿಮ್‌ ಅಲ್ಲಿಯೇ ಸಂಬಂಧಿಕರ ಮನೆಯಲ್ಲಿ ಉಳಿದುಕೊಂಡಿದ್ದರು. ಮಾ.13, 14ರಂದು ಲಾಹೋರ್‌ನ ಬಾಬಾ ಫ‌ರೀದ್‌ ಮತ್ತು ದಾತಾ ದರ್ಬಾರ್‌ಗೆ “ಚಾದರ್‌’ ಹೊದಿಸಲು ಅವರು ಹೋಗಿದ್ದರು. ಆದರೆ, ವಾಪಸು ಕರಾಚಿಯ ವಿಮಾನ ಹತ್ತಿರುವ ಮಾಹಿತಿ ಸಂಬಂಧಿಕರಿಗೆ ಸಿಕ್ಕಿದ್ದರೂ, ಅವರಿಬ್ಬರೂ ಏರ್ ಪೋರ್ಟಿಗೆ ವಾಪಸಾಗಲೇ ಇಲ್ಲವಾಗಿತ್ತು.

ನಾಪತ್ತೆ ಆದ ಇಬ್ಬರ ಶೋಧಕ್ಕೆ ಪಾಕ್‌ ಸರ್ಕಾರ ಶೀಘ್ರವೇ ಮುಂದಾಗ ಬೇಕೆಂದು ಭಾರತದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ ಮನವಿ ಮಾಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next