Advertisement

ಬಾಂಗ್ಲಾದೇಶದ ಇಬ್ಬರು ವನಿತಾ ಕ್ರಿಕೆಟಿಗರಿಗೆ ಕೋವಿಡ್‌ ಪಾಸಿಟಿವ್‌

11:02 PM Dec 06, 2021 | Team Udayavani |

ಢಾಕಾ: ಜಿಂಬಾಬ್ವೆಯಿಂದ ಇತ್ತೀಚೆಗಷ್ಟೇ ವಾಪಸಾದ ಬಾಂಗ್ಲಾದೇಶ ವನಿತಾ ಕ್ರಿಕೆಟ್‌ ತಂಡದ ಇಬ್ಬರಲ್ಲಿ ಕೊರೊನಾ ಪಾಸಿಟಿವ್‌ ದೃಢಪಟ್ಟಿದೆ.

Advertisement

ಹೀಗಾಗಿ ತಂಡದ ಐಸೊಲೇಶನ್‌ ಅವಧಿಯನ್ನು ವಿಸ್ತರಿಸಲಾಗಿದೆ ಎಂದು ಬಾಂಗ್ಲಾದೇಶ ಕ್ರಿಕೆಟ್‌ ಮಂಡಳಿ ತಿಳಿಸಿದೆ.

ಬಾಂಗ್ಲಾದೇಶ ವನಿತಾ ಕ್ರಿಕೆಟ್‌ ತಂಡ 2022ರ ಐಸಿಸಿ ವನಿತಾ ವಿಶ್ವಕಪ್‌ ಕ್ರಿಕೆಟ್‌ ಅರ್ಹತಾ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಲು ಜಿಂಬಾಬ್ವೆಗೆ ತೆರಳಿತ್ತು.

ಇದನ್ನೂ ಓದಿ:ಚಂದ್ರನ ಮೇಲೆ ಮನೆ ಕಟ್ಟಿದವರಾರು? ಚೀನಾದ ರೋವರ್‌ ಕಣ್ಣಿಗೆ ಬಿತ್ತು “ನಿಗೂಢ ಘನಾಕೃತಿ’

ಆಫ್ರಿಕಾ ರಾಷ್ಟ್ರಗಳಿಂದ ಆಗಮಿಸುವ ಪ್ರಯಾಣಿಕರಿಗೆ ಬಾಂಗ್ಲಾದೇಶ 3 ಸಲ ಕೋವಿಡ್‌ ಟೆಸ್ಟ್‌ ನಡೆಸಲು ಸೂಚಿಸಿದೆ. ಅದರಂತೆ ಒಂದೇ ಕೊಠಡಿಯಲ್ಲಿ ಉಳಿದಿದ್ದ ಇಬ್ಬರು ಆಟಗಾರ್ತಿಯರ ಡಿ. 1 ಮತ್ತು 3ರ ಫ‌ಲಿತಾಂಶ ನೆಗೆಟಿವ್‌ ಬಂದಿತ್ತು.

Advertisement

ಆದರೆ ಸೋಮವಾರದ ಟೆಸ್ಟ್‌ ವೇಳೆ ಪಾಸಿಟಿವ್‌ ಕಂಡುಬಂದಿದೆ ಎಂಬುದಾಗಿ ಬಿಸಿಬಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next