ಬೆಂಗಳೂರು: ಟ್ರಾನ್ಸ್ ಫಾರ್ಮರ್ ಸಂಬಂಧಿತ ಅವಘಡ ತಪ್ಪಿಸುವುದಕ್ಕಾಗಿ ರಾಜ್ಯಾದ್ಯಂತ ಮೇ 5ರಿಂದ 20ರ ವರೆಗೆ ನಡೆದ ಅಭಿಯಾನದಲ್ಲಿ 2 ಲಕ್ಷ ಟಿಸಿಗಳನ್ನು ದುರಸ್ತಿ ಮಾಡಲಾಗಿದೆ.
ಮಳೆಗಾಲ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಟ್ರಾನ್ಸ್ ಫಾರ್ಮರ್ ದುರಂತ ತಪ್ಪಿಸಲು ಈ ಅಭಿಯಾನ ನಡೆಸಲಾಗಿತ್ತು. ಬೆಸ್ಕಾಂ -10,794, ಸೆಸ್ಕಾಂ -16,170, ಮೆಸ್ಕಾಂ -72,012 , ಜೆಸ್ಕಾಂ -32,112, ಹೆಸ್ಕಾಂ -71,350 ಟಿಸಿಗಳನ್ನು ನಿರ್ವಹಣೆ ಮಾಡಲಾಗಿದೆ ಎಂದು ಇಂಧನ ಸಚಿವ ವಿ. ಸುನಿಲ್ ಕುಮಾರ್ ತಿಳಿಸಿದ್ದಾರೆ.
ರಾಜ್ಯದಲ್ಲಿ ಹದಿನೈದು ವರ್ಷಕ್ಕಿಂತ ಹಳೆಯ ಪರಿವರ್ತಕಗಳು ಸಾಕಷ್ಟು ಪ್ರಮಾಣದಲ್ಲಿದ್ದು, ಮಳೆಗಾಲದಲ್ಲಿ ಅವುಗಳ ನಿರ್ವಹಣ ಸಮಸ್ಯೆ ಉಂಟಾಗಬಾರದು. ಮಳೆಗಾಲದಲ್ಲಿ ಸಿಡಿಲು ಇತ್ಯಾದಿ ಕಾರಣಗಳಿಂದ ಪರಿವರ್ತಕಗಳ ಹಾನಿ ಸಾಧ್ಯತೆ ಇದೆ. ಜತೆಗೆ ಅಧಿಕ ಲೋಡ್ನಿಂದ ಟ್ರಾನ್ಸ್ಫಾರ್ಮರ್ ಹಾನಿಯಾಗುವ ಸಾಧ್ಯತೆ ಇದೆ.
ಈ ಹಿನ್ನೆಲೆಯಲ್ಲಿ ಪರಿಶೀಲಿಸಿ ಎಲ್ಲಿ ಅಗತ್ಯವಿದೆಯೋ ಅಲ್ಲಿ ಸೂಕ್ತ ದುರಸ್ತಿ ಕೆಲಸ ಮಾಡುವಂತೆ ಸೂಚನೆ ನೀಡಲಾಗಿತ್ತು. ಈ ಅಭಿಯಾನ ಯಶಸ್ವಿಗೊಳಿಸಿದ ಎಲ್ಲ ಅಧಿಕಾರಿಗಳು ಹಾಗೂ ಸಿಬಂದಿಗೆ ಅಭಿನಂದನೆ ಎಂದು ಹೇಳಿದ್ದಾರೆ.
Related Articles
ಅಮೃತ ಮಹೋತ್ಸವದ ಸಿದ್ಧತೆ : ಜಿಲ್ಲಾಧಿಕಾರಿಗಳ ಜತೆ ಸಚಿವ ಸುನಿಲ್ ಸಭೆ
ಬೆಂಗಳೂರು: ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಕಾರ್ಯಕ್ರಮಕ್ಕೆ ಸಿದ್ಧತೆ ನಡೆದಿದ್ದು, ಆ ಹಿನ್ನೆಲೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸುನಿಲ್ಕುಮಾರ್ ಶನಿವಾರ ಎಲ್ಲ ಜಿಲ್ಲಾಧಿಕಾರಿಗಳೊಂದಿ ವೀಡಿಯೋ ಸಂವಾದ ನಡೆಸಿದರು.
ಮೇ 28ರಂದು ಸಾವರ್ಕರ್ ಜನ್ಮ ದಿನಾಚರಣೆಯಾಗಿದ್ದು, ಅಮೃತ ಮಹೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು. “ಅಮೃತ ಭಾರತಿಗೆ ಕನ್ನಡದ ಆರತಿ’ ಎಂಬ ಘೋಷವಾಕ್ಯದೊಂದಿಗೆ ಮೂರು ಹಂತದಲ್ಲಿ ಮೂರು ತಿಂಗಳು ಕಾಲ ಈ ಕಾರ್ಯಕ್ರಮ ನಡೆಯಲಿದ್ದು, ಅಚ್ಚುಕಟ್ಟಾಗಿ ಆಯೋಜನೆ ಮಾಡುವಂತೆ ಸಚಿವರು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದರು. ಬೆಂಗ ಳೂರಿನಲ್ಲಿ ನಡೆಯುವ ಕಾರ್ಯ ಕ್ರಮಕ್ಕೆ ಮುಖ್ಯಮಂತ್ರಿ ಬೊಮ್ಮಾಯಿ ಚಾಲನೆ ನೀಡಲಿದ್ದು, ಯಾದಗಿರಿಯ ಸುರಪುರದಲ್ಲಿ ತಾನು ಭಾಗವಹಿ
ಸುವುದಾಗಿ ತಿಳಿಸಿದರು.