ಪಾಟ್ನಾ: ರೈಲ್ವೆ ಇಂಜಿನ್ ಕಳ್ಳತನ, ಸೇತುವೆ ಕಳ್ಳತನ ಮಾಡಿರುವ ಪ್ರಕರಣ ಬಳಿಕ ಕಳ್ಳರು ಸುಮಾರು ಎರಡು ಕಿಲೋಮೀಟರ್ ಉದ್ದದ ರೈಲ್ವೆ ಟ್ರ್ಯಾಕ್ ಅನ್ನೇ ಕಳವು ಮಾಡಿರುವ ಘಟನೆಯೊಂದು ಬೆಳಕಿಗೆ ಬಂದಿದೆ.
ದೇಶದಲ್ಲಿ ಎಂತೆಂಥ ಚಾಲಾಕಿ ಕಳ್ಳರು ಇರುತ್ತಾರೆ ಎಂದರೆ ನಂಬಲೂ ಅಸಾಧ್ಯ, ಕಳ್ಳರ ಕೈಚಳಕ ಯಾವ ರೀತಿ ಇದೆ ನೋಡಿ ಪಟ್ನಾದಲ್ಲೊಂದು ಪ್ರದೇಶದಲ್ಲಿ ಸುಮಾರು ಎರಡು ಕಿಲೋಮೀಟರ್ ಉದ್ದದ ರೈಲ್ವೆ ಟ್ರ್ಯಾಕ್ ಅನ್ನು ರಾತ್ರಿ ಬೆಳಗಾಗುದ್ರೊಳಗೆ ಕಳ್ಳರು ಎಗರಿಸಿದ್ದಾರೆ ಎಂದರೆ ನಂಬುತ್ತೀರಾ… ನಂಬಲೇ ಬೇಕು.
ಅಂದಹಾಗೆ ಈ ಘಟನೆ ನಡೆದಿರೋದು ಪಾಟ್ನಾದ ಸಮಸ್ತಿಪುರ ರೈಲ್ವೆ ವಿಭಾಗದಲ್ಲಿ. ಕಳ್ಳರ ತಂಡ ಬರೋಬ್ಬರಿ ಎರಡು ಕಿಲೋಮೀಟರ್ ಉದ್ದದ ರೈಲ್ವೆ ಟ್ರ್ಯಾಕ್ ಅನ್ನೇ ಕದ್ದು ಮಾರಾಟ ಮಾಡಿದ್ದಾರಂತೆ.
ಬೆಳಗಾಗುತ್ತಲೇ ರೈಲ್ವೆ ಟ್ರ್ಯಾಕ್ ಮಾಯವಾಗಿ ಬಯಲು ಭೂಮಿ ಮಾತ್ರ ಗೋಚರವಾಗಿದೆ, ಈ ವಿಚಾರವಾಗಿ ಸ್ಥಳೀಯರು ರೈಲ್ವೆ ಇಲಾಖೆಗೆ ಮಾಹಿತಿ ನೀಡಿದ್ದಾರೆ ಕೂಡಲೇ ರೈಲ್ವೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಆ ಬಳಿಕ ಈ ಕಳವು ಪ್ರಕರಣದಲ್ಲಿ ಇಲ್ಲಿನ ರೈಲ್ವೆ ಇಲಾಖೆಯ ಇಬ್ಬರು ಸಿಬ್ಬಂದಿಗಳು ಸೇರಿದ್ದಾರೆ ಎಂದುದು ಗೊತ್ತಾಗಿದೆ, ಅದರಂತೆ ಇಬ್ಬರು ಸಿಬ್ಬಂದಿಗಳನ್ನು ಕೆಲಸದಿಂದ ವಜಾ ಮಾಡಿದ್ದಾರೆ.
Related Articles
ಘಟನೆ ಕುರಿತು ಮಾತನಾಡಿದ ಸಮಸ್ತಿಪುರ ರೈಲ್ವೆ ಅಧಿಕಾರಿಗಳು ಪಾಂಡೋಲ್ ರೈಲ್ವೆ ನಿಲ್ದಾಣದಿಂದ ಲೋಹತ್ ರೈಲ್ವೆ ನಿಲ್ದಾಣದವರೆಗಿನ ಸುಮಾರು ಎರಡು ಕಿಲೋಮೀಟರ್ ಉದ್ದದ ರೈಲ್ವೆ ಟ್ರ್ಯಾಕನ್ನೇ ಕದ್ದೊಯ್ದಿದ್ದಾರೆ ಪ್ರಕರಣಕ್ಕೆ ಸಂಬಂಧಿಸಿ ಸಮಸ್ತಿಪುರ ರೈಲ್ವೆಯ ಇಲಾಖೆಯ ಇಬ್ಬರು ಸಿಬ್ಬಂದಿಗಳನ್ನು ಅಮಾನತುಗೊಳಿಸಿರುವುದಾಗಿ ತಿಳಿಸಿದ್ದಾರೆ.
ಅಂದಹಾಗೆ ಈ ರೈಲ್ವೆ ಟ್ರ್ಯಾಕ್ ಈ ಪ್ರದೇಶದ ಸಕ್ಕರೆ ಕಾರ್ಖಾನೆಗೋಸ್ಕರ ನಿರ್ಮಿಸಲಾಗಿತ್ತು ಆದರೆ ಕಳೆದ ಕೆಲವು ವರ್ಷದ ಹಿಂದೆ ಈ ಕಾರ್ಖಾನೆ ಮುಚ್ಚಲಾಗಿದ್ದು ಅಂದಿನಿಂದ ಈ ಟ್ರ್ಯಾಕ್ ಉಪಯೋಗಕ್ಕೆ ಇಲ್ಲದಾಗಿತ್ತು, ಆ ಬಳಿಕ ರೈಲ್ವೆ ಟ್ರ್ಯಾಕ್ ಅನ್ನು ಸ್ಕ್ರಾಪ್ ಹಾಕುವ ವಿಚಾರದಲ್ಲಿ ಮಾತುಕತೆ ನಡೆಯುತ್ತಿರುವ ನಡುವೆ ಇಲ್ಲಿನ ಇಬ್ಬರು ಸಿಬ್ಬಂದಿಗಳು ಸೇರಿ ಬೇರೆಯವರಿಗೆ ಮಾರಾಟ ಮಾಡಿದ್ದಾರೆ ಎಂದು ಹೇಳಲಾಗಿದೆ.
ಇದನ್ನೂ ಓದಿ: ಹಿಂದೂ-ಹಿಂದುತ್ವ ಒಂದೇ ನಾಣ್ಯದ ಎರಡು ಮುಖ : ವಿಪಕ್ಷಗಳ ವಿರುದ್ಧ ಸಿ.ಟಿ.ರವಿ ಕಿಡಿ