Advertisement

Pok-ಪಾಕ್ ವಿರುದ್ಧ ಭಾರೀ ಪ್ರತಿಭಟನೆ, ಲಾಠಿಚಾರ್ಜ್, ಅಶ್ರುವಾಯು ಪ್ರಯೋಗ; ಇಬ್ಬರು ಬಲಿ

09:16 AM Oct 24, 2019 | Team Udayavani |

ಮುಜಾಫರಾಬಾದ್: ವಿವಿಧ ರಾಜಕೀಯ ಪಕ್ಷಗಳು ಸ್ವಾತಂತ್ರ್ಯಕ್ಕಾಗಿ ಆಗ್ರಹಿಸಿ ಪಾಕ್ ಆಕ್ರಮಿತ ಕಾಶ್ಮೀರ(ಪಿಒಕೆ)ದ ಮುಜಾಫರಾಬಾದ್ ನಲ್ಲಿ ನಡೆದ ಭಾರೀ ಪ್ರತಿಭಟನೆ ವೇಳೆ ಪೊಲೀಸರು ಮಂಗಳವಾರ ಲಾಠಿ ಚಾರ್ಜ್ ನಡೆಸಿದ್ದು ಈ ಘಟನೆಯಲ್ಲಿ ಇಬ್ಬರು ಸಾವನ್ನಪ್ಪಿದ್ದು, 80ಕ್ಕೂ ಅಧಿಕ ಜನರು ಸಾವನ್ನಪ್ಪಿದ್ದಾರೆ ಎಂದು ವರದಿ ತಿಳಿಸಿದೆ.

Advertisement

ಪಕ್ಷೇತರ ಪಕ್ಷಗಳ ಒಕ್ಕೂಟ(ಎಐಪಿಎ) ನೇತೃತ್ವದಲ್ಲಿ ಮಂಗಳವಾರ ವಿವಿಧ ರಾಜಕೀಯ ಪಕ್ಷಗಳು ಸ್ವಾತಂತ್ರ್ಯ ಪರ ರಾಲಿಗೆ ಕರೆ ನೀಡಿದ್ದು, ಮಂಗಳವಾರ ಬ್ಲ್ಯಾಕ್ ಡೇ ಎಂದು ಘೋಷಣೆ ಕೂಗಿದ್ದವು. 1947ರ ಅಕ್ಟೋಬರ್ 22ರಿಂದ ಪಾಕಿಸ್ತಾನಿ ಪಡೆಗಳು ಜಮ್ಮು-ಕಾಶ್ಮೀರದ ಮೇಲೆ ಆಕ್ರಮಣ ನಡೆಸುತ್ತಲೇ ಬಂದಿದೆ. ಈ ಹಿನ್ನೆಲೆಯಲ್ಲಿ ಪಿಒಕೆ ಮತ್ತು ಗಿಲ್ಗಿಟ್ ಬಾಲ್ಟಿಸ್ತಾನ್ ಜನರು ಅಕ್ಟೋಬರ್ 22ನ್ನು ಪ್ರತಿ ವರ್ಷ ಬ್ಲ್ಯಾಕ್ ಡೇ ಎಂದು ಆಚರಿಸುತ್ತಿದ್ದು, ಪಾಕಿಸ್ತಾನದಿಂದ ಪ್ರತ್ಯೇಕವಾಗುವ ಬೇಡಿಕೆಯ ಹೋರಾಟ ನಡೆಸುತ್ತಲೇ ಬಂದಿರುವುದಾಗಿ ಎಐಪಿಎ ವಿವರಿಸಿದೆ.

72ನೇ ವರ್ಷದ ಅತಿಕ್ರಮಣ ದಿನಾಚರಣೆಯನ್ನು ಪ್ರತಿಭಟಿಸಿ ಮಂಗಳವಾರ ಪಿಒಕೆಯಲ್ಲಿ ಜನರು ಭಾರೀ ಪ್ರತಿಭಟನೆ ನಡೆಸಿದರು. ಈ ವೇಳೆ ಪೊಲೀಸರು ಅಶ್ರುವಾಯು ದಾಳಿ, ಲಾಠಿಚಾರ್ಜ್ ನಡೆಸಿದ್ದರು. ನಾವು ಶಾಂತಿಯುತ ಪ್ರತಿಭಟನೆ ನಡೆಸಲು ಸಿದ್ದರಾಗಿದ್ದೇವು. ಒಂದು ವೇಳೆ ಪಾಕ್ ಆಡಳಿತ ನಮ್ಮನ್ನು ಹತ್ತಿಕ್ಕಲು ಯತ್ನಿಸಿದರೆ ನಾವು ನಮ್ಮ ಧ್ವನಿಯನ್ನು ಮತ್ತಷ್ಟು ಗಟ್ಟಿಗೊಳಿಸುತ್ತೇವೆ ಎಂದು ಪ್ರತಿಭಟನಾಕಾರರು ಎಎನ್ ಐಗೆ ತಿಳಿಸಿದ್ದಾರೆ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next