Advertisement

ಭಾರತದಲ್ಲಿ 2.38 ಲಕ್ಷ ಕೋವಿಡ್ ಪ್ರಕರಣ ಪತ್ತೆ,ಪಾಸಿಟಿವಿಟಿ ದರ ಶೇ.20ರಿಂದ ಶೇ.14ಕ್ಕೆ ಇಳಿಕೆ

10:28 AM Jan 18, 2022 | Team Udayavani |

ನವದೆಹಲಿ:ಭಾರತದಲ್ಲಿ ಕಳೆದ 24ಗಂಟೆಯಲ್ಲಿ 2.38 ಲಕ್ಷ ಕೋವಿಡ್ ಪ್ರಕರಣಗಳು ಪತ್ತೆಯಾಗಿದ್ದು, ಇದರೊಂದಿಗೆ ಶೇ.7ರಷ್ಟು ಪ್ರಕರಣ ಇಳಿಕೆ ಕಂಡಿದೆ. ಪಾಸಿಟಿವಿಟಿ ದರ ಶೇ.19.65ರಿಂದ 14.43ಕ್ಕೆ ಇಳಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಂಗಳವಾರ (ಜನವರಿ 18) ಬಿಡುಗಡೆಗೊಳಿಸಿರುವ ಅಂಕಿಅಂಶದಲ್ಲಿ ತಿಳಿಸಿದೆ.

Advertisement

ಇದನ್ನೂ ಓದಿ:ಚಿಕ್ಕಮಗಳೂರು: ಚಲಿಸುತ್ತಿದ್ದ ಕಾರಿನ ಟೈರ್ ಸ್ಪೋಟಗೊಂಡು ಇಬ್ಬರು ದುರ್ಮರಣ

ಜಾಗತಿಕವಾಗಿ ಕೋವಿಡ್ 3ನೇ ಅಲೆ ಹೆಚ್ಚಳವಾಗುತ್ತಿರುವ ನಡುವೆ ಭಾರತದಲ್ಲಿ ಒಟ್ಟು 8,891 ಕೋವಿಡ್ ನ ನೂತನ ರೂಪಾಂತರ ತಳಿ ಒಮಿಕ್ರಾನ್ ಪ್ರಕರಣ ವರದಿಯಾಗಿದೆ. ಸೋಮವಾರಕ್ಕಿಂತ ಶೇ.8.31ರಷ್ಟು ಒಮಿಕ್ರಾನ್ ಪ್ರಕರಣ 24ಗಂಟೆಯಲ್ಲಿ ಹೆಚ್ಚಳವಾಗಿದೆ.

ಭಾರತದಾದ್ಯಂತ ಈವರೆಗೆ ಸಕ್ರಿಯ ಕೋವಿಡ್ ಪ್ರಕರಣಗಳ ಸಂಖ್ಯೆ 17.36ಕ್ಕೆ ಏರಿಕೆಯಾಗಿದೆ. ಸಚಿವಾಲಯ ಬಿಡುಗಡೆಗೊಳಿಸಿರುವ ಅಂಕಿ ಅಂಶದ ಪ್ರಕಾರ, 24ಗಂಟೆಯಲ್ಲಿ 1.57 ಲಕ್ಷ ಮಂದಿ ಕೋವಿಡ್ ನಿಂದ ಚೇತರಿಸಿಕೊಂಡಿದ್ದಾರೆ. ದೇಶಾದ್ಯಂತ ಒಟ್ಟು 3 ಕೋಟಿಗೂ ಅಧಿಕ ಮಂದಿ ಗುಣಮುಖರಾಗಿದ್ದಾರೆ.

ಒಂದು ದಿನದಲ್ಲಿ ಕೋವಿಡ್ ನಿಂದ 310 ಮಂದಿ ಸಾವನ್ನಪ್ಪಿದ್ದಾರೆ. ಸೋಮವಾರ ಕೋವಿಡ್ ಸೋಂಕಿನಿಂದ 385 ಮಂದಿ ಸಾವನ್ನಪ್ಪಿದ್ದರು ಎಂದು ಅಂಕಿಅಂಶ ತಿಳಿಸಿದೆ. 24ಗಂಟೆಯಲ್ಲಿ 3.35ಲಕ್ಷಕ್ಕೂ ಅಧಿಕ ಮಂದಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದೆ.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next