Advertisement

ಶ್ರಮಿಕ ರೈಲುಗಳಲ್ಲಿ 2.33 ಲಕ್ಷ ಕಾರ್ಮಿಕರು ಪ್ರಯಾಣ

11:56 AM May 27, 2020 | Suhan S |

ಹುಬ್ಬಳ್ಳಿ: ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಸ್ವರಾಜ್ಯಗಳಿಗೆ ತೆರಳುವ ಕಾರ್ಮಿಕರಿಗೆ ಸಾರಿಗೆ ವ್ಯವಸ್ಥೆ ಕೈಗೊಳ್ಳುವಲ್ಲಿ ರೈಲ್ವೆ ಇಲಾಖೆ ಪ್ರಮುಖ ಪಾತ್ರ ತೋರಿದ್ದು, ನೈರುತ್ಯ ರೈಲ್ವೆ ವಲಯದ ರೈಲುಗಳಲ್ಲಿ ಕಳೆದ 23 ದಿನಗಳಲ್ಲಿ ರಾಜ್ಯದಿಂದ ವಿವಿಧ ರಾಜ್ಯಗಳಿಗೆ ಸುಮಾರು 2.33ಲಕ್ಷ ಕಾರ್ಮಿಕರು ಪ್ರಯಾಣ ಕೈಗೊಂಡಿದ್ದಾರೆ.

Advertisement

ಕೋವಿಡ್ ಸೋಂಕು ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಲಾಕ್‌ಡೌನ್‌ ಘೋಷಿಸಿದ್ದರಿಂದ ರೈಲು, ವಿಮಾನ, ಬಸ್‌ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು. ಅತ್ಯವಶ್ಯ ವಸ್ತುಗಳ ಸಾಗಣೆ ರೈಲುಗಳು ಮಾತ್ರ ಕಾರ್ಯ ನಿರ್ವಹಿಸುತ್ತಿದ್ದವು.ಲಾಕ್‌ಡೌನ್‌ ನಿಯಮಗಳಲ್ಲಿ ಕೊಂಚ ಸಡಿಲಗೊಳಿಸಿ, ಕಾರ್ಮಿಕರು ತಮ್ಮ ಸ್ವರಾಜ್ಯಗಳಿಗೆ ತೆರಳಲು ಅನುವು ಮಾಡಿಕೊಡಲು ಶ್ರಮಿಕ ರೈಲು ಸಂಚಾರಕ್ಕೆ ರೈಲ್ವೆ ಇಲಾಖೆ ಮುಂದಾಗಿತ್ತು. ಕೇಂದ್ರ ಸರಕಾರ ಹಾಗೂ ರೈಲ್ವೆ ಮಂಡಳಿ ಸೂಚನೆ ಮೇರೆಗೆ ನೈರುತ್ಯ ರೈಲ್ವೆ ವಲಯ ಬಿಹಾರ, ಉತ್ತರ ಪ್ರದೇಶ, ರಾಜಸ್ಥಾನ, ಮಧ್ಯಪ್ರದೇಶ, ಜಾರ್ಖಂಡ್‌, ಪಶ್ಚಿಮ ಬಂಗಾಲ, ತ್ರಿಪುರ, ಉತ್ತರಖಂಡ, ಮಣಿಪುರ, ಜಮ್ಮು-ಕಾಶ್ಮೀರ, ಒಡಿಶಾ, ಇನ್ನಿತರ ರಾಜ್ಯಗಳಿಗೆ ಶ್ರಮಿಕ ರೈಲು ಸಂಚಾರವನ್ನು ಬೆಂಗಳೂರು, ಹುಬ್ಬಳ್ಳಿ ಇನ್ನಿತರ ಕಡೆಗಳಿಂದ ಕೈಗೊಂಡಿತ್ತು.

ಮೇ 3ರಿಂದ 26ರವರೆಗೆ ನೈರುತ್ಯ ರೈಲ್ವೆ ವಲಯ ಒಟ್ಟು 163 ಶ್ರಮಿಕ ರೈಲುಗಳ ಸಂಚಾರ ಕೈಗೊಂಡಿದ್ದು, ಇದರಲ್ಲಿ ಸುಮಾರು 2,33,180 ಕಾರ್ಮಿಕರು ಇನ್ನಿತರರು ಪ್ರಯಾಣಿಸಿದ್ದಾರೆ ಎಂದು ನೈರುತ್ಯ ರೈಲ್ವೆ ವಲಯ ಪ್ರಕಟನೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next