Advertisement
ಶಾಸಕ ಟಿ.ಬಿ. ಜಯಚಂದ್ರ ಮತ್ತು ಧೀರಜ್ ಮುನಿರಾಜು ಕೇಳಿದ್ದ ಎರಡು ಪ್ರಶ್ನೆಗಳಿಗೆ ಉತ್ತರಿಸಿದ ಸಚಿವರು, ಕೃಷಿಕರೇ ಅಲ್ಲ ಎಂಬ ಕಾರಣಕ್ಕೆ 3,270 ಅರ್ಜಿ, ಕೆರೆ, ಶ್ಮಶಾನ, ದೇವರ ಕಾಡು ಎಂಬ ಕಾರಣಕ್ಕೆ 27,452 ಅರ್ಜಿ, ನಗರದ ಬಫರ್ವಲಯದ ವ್ಯಾಪ್ತಿಗೆ ಬಂದ 33 ಸಾವಿರಕ್ಕೂ ಹೆಚ್ಚು ಅರ್ಜಿ, ಅರಣ್ಯ ಜಮೀನಿಗೆ ಸಂಬಂಧಿಸಿದಂತೆ 12 ಸಾವಿರ ಅರ್ಜಿ ಸೇರಿ ವ್ಯವಸಾಯ ಮಾಡದ, ಬೇರೆಡೆ ವಾಸಿಸುವವರ ಮತ್ತು ಕುಟುಂಬದ ಬಳಿ ಈಗಾಗಲೇ 5 ಎಕರೆಗಿಂತ ಹೆಚ್ಚು ಜಮೀನಿದ್ದಲ್ಲಿ ಅಂತಹ ಅರ್ಜಿಗಳನ್ನು ತಿರಸ್ಕರಿಸಲಾಗಿದೆ ಎಂದು ಮಾಹಿತಿ ನೀಡಿದರು.
ರಾಜ್ಯದಲ್ಲಿ ಹೊಸದಾಗಿ ಮಂಜೂರು ಆಗಿರುವ 24 ತಾಲೂಕಿನಲ್ಲಿ 8-10 ತಾಲೂಕಿನ ತಾಲೂಕು ಕಚೇರಿ ಸ್ಥಾಪಿಸಲು ತಾಲೂಕು ಕೇಂದ್ರದಲ್ಲಿ ಜಾಗವಿಲ್ಲದಂತಾಗಿದೆ ಎಂದು ಸಚಿವರು ಮಾಹಿತಿ ನೀಡಿದರು.