Advertisement

ಬಸವಸಾಗರದಿಂದ 2.16 ಲಕ್ಷ ಕ್ಯೂಸೆಕ್‌ ನೀರು ಬಿಡುಗಡೆ

05:12 PM Aug 12, 2022 | Team Udayavani |

ನಾರಾಯಣಪುರ: ಬಸವಸಾಗರ ಅಣೆಕಟ್ಟೆಯ 25 ಕ್ರಸ್ಟ್‌ ಗೇಟ್‌ಗಳನ್ನು ತೆರೆದು 2.16 ಲಕ್ಷ ಕ್ಯೂಸೆಕ್‌ನಷ್ಟು ನೀರನ್ನು ಕೃಷ್ಣಾ ನದಿಗೆ ಹರಿಬಿಟ್ಟಿದ್ದು, ನದಿ ತೀರದ ಪುರಾಣ ಪ್ರಸಿದ್ಧ ಪುಣ್ಯಕ್ಷೇತ್ರ ದಕ್ಷಿಣ ಕಾಶಿ ಶ್ರೀ ಛಾಯಾ ಭಗವತಿ ದೇಗುಲಕ್ಕೆ ಹೊಂದಿಕೊಂಡಿರುವ ಮಂಟಪಕ್ಕೆ ನೀರು ಅಪ್ಪಳಿಸುತ್ತಿವೆ.

Advertisement

ಒಂದೊಮ್ಮೆ ನದಿಯಲ್ಲಿ ನೀರಿನ ಹರಿವು ಇನ್ನೂ ಹೆಚ್ಚಾದರೆ ಛಾಯಾ ಭಗವತಿ ದೇಗುಲದ ಗರ್ಭಗುಡಿ ಒಳಗೆ ನೀರು ಹೋಗುವ ಸಾಧ್ಯತೆ ಇದೆ ಎಂದು ಪ್ರವಾಸಿಗರು ಹೇಳುತ್ತಾರೆ. ಇದೇ ಸಂದರ್ಭದಲ್ಲಿ ಶ್ರೀ ಛಾಯಾ ಭಗವತಿ ಕ್ಷೇತ್ರದ ಬಳಿ ಮೈದುಂಬಿ ಹರಿಯುವ ಕೃಷ್ಣಾ ನದಿಯ ಅಬ್ಬರವನ್ನು ವೀಕ್ಷಿಸಲು ಜನರು ತಂಡೋಪ ತಂಡವಾಗಿ ಕ್ಷೇತ್ರಕ್ಕೆ ಆಗಮಿಸುತ್ತಿದ್ದಾರೆ.

ಪ್ರವಾಸಿಗರು ದೇವಸ್ಥಾನದ ಮೆಟ್ಟಿಲುಗಳಿಂದ ನದಿಗೆ ಇಳಿದು ಹತ್ತಿರದಿಂದ ರಭಸದಿಂದ ಹರಿಯುವ ನದಿ ವೀಕ್ಷಣೆಯ ಜೊತೆಗೆ ನದಿ ತೀರದಲ್ಲೆ ಸೆಲ್ಫಿ ಕ್ಲಿಕ್ಕಿಸುವ ದುಸಾಹಸ ಮಾಡುತ್ತಿದ್ದಾರೆ. ಆಗ ಏನಾದರು ಅವಘಡಗಳು ಸಂಭವಿಸಬಹುದು ಎಂದು ಅರಿತ ಪ್ರವಾಸೋದ್ಯಮ ಇಲಾಖೆಯವರಿಂದ ನಿಯೋಜಿಸಲ್ಪಟ್ಟ ಪ್ರವಾಸಿ ಮಿತ್ರರಾದ ವೆಂಕಟೇಶ ಕುಲಕರ್ಣಿ, ರಾಮಲಿಂಗಯ್ಯ ಅವರು ಮುಂಜಾಗ್ರತಾ ಕ್ರಮವಾಗಿ ದೇಗುಲಕ್ಕೆ ಇಳಿಯುವ ಮೆಟ್ಟಲುಗಳ ಮೇಲ್ಬಾಗದಲ್ಲೇ ತಾತ್ಕಾಲಿಕ ಗೇಟ್‌ಗಳನ್ನು ಅಳವಡಿಸಿ ಪ್ರವಾಸಿಗರು ನದಿಗೆ ಇಳಿಯದಂತೆ ನಿರ್ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next