Advertisement
3ಕ್ಕೆ 399 ರನ್ ಗಳಿಸಿದಲ್ಲಿಂದ ದಿನದಾಟ ಮುಂದುವರಿಸಿದ ಭಾರತ ಭರ್ತಿ 600 ರನ್ನಿಗೆ ಆಲೌಟ್ ಆಯಿತು. ಜವಾಬು ನೀಡತೊಡಗಿದ ಶ್ರೀಲಂಕಾ 5 ವಿಕೆಟ್ ಉರುಳಿಸಿಕೊಂಡು ಕೇವಲ 154 ರನ್ ಮಾಡಿದೆ. ಫಾಲೋ ಆನ್ ಗಡಿ 400 ರನ್. ಅಸೇಲ ಗುಣರತ್ನೆ ಗಾಯಾಳಾದ್ದರಿಂದ ಉಳಿದ 4 ವಿಕೆಟ್‌ಗಳಿಂದ 246 ರನ್ ಗಳಿಸಬೇಕಿದೆ. ಆದರೆ ಸದ್ಯದ ಒಟ್ಟು ಹಿನ್ನಡೆಯೇ 446 ರನ್ ಆಗಿರುವುದರಿಂದ ಲಂಕಾ ಈ ಪಂದ್ಯದಲ್ಲಿ ಮೇಲೆದ್ದು ಬರುವ ಯಾವ ಮಾರ್ಗವೂ ಗೋಚರಿಸುತ್ತಿಲ್ಲ.
ಈವರೆಗೆ ವೇಗದ ಬೌಲರ್‌ಗಳೇ ಮೇಲುಗೈ ಸಾಧಿಸಿದ್ದಾರೆ. ಲಂಕೆಯ ನುವಾನ್ ಪ್ರದೀಪ್ ಜೀವನಶ್ರೇಷ್ಠ ಬೌಲಿಂಗ್ ಪ್ರದರ್ಶನದ ಮೂಲಕ 132ಕ್ಕೆ 6 ವಿಕೆಟ್ ಉರುಳಿಸಿ ದ್ವಿತೀಯ ದಿನದ ಹೀರೋ ಎನಿಸಿಕೊಂಡರು. ಪ್ರದೀಪ್ ಮೊದಲ ದಿನದ ಮೂರೂ ವಿಕೆಟ್‌ಗಳನ್ನು ಬುಟ್ಟಿಗೆ ಹಾಕಿಕೊಂಡಿದ್ದರು. 2ನೇ ದಿನ ಮತ್ತೆ 3 ವಿಕೆಟ್ ಹಾರಿಸಿದರು. ಅವರು ಇನ್ನಿಂಗ್ಸ್ ಒಂದರಲ್ಲಿ 5 ಪ್ಲಸ್ ವಿಕೆಟ್ ಉರುಳಿಸಿದ್ದು ಇದೇ ಮೊದಲು. ಇವರ ಜತೆಗಾರ ಲಹಿರು ಕುಮಾರ 3 ವಿಕೆಟ್ ಕಿತ್ತರು. ಘಾತಕ ಎಂದು ಭಾವಿಸಲಾಗಿದ್ದ ರಂಗನ ಹೆರಾತ್‌ಗೆ ಸಿಕ್ಕಿದ್ದು ಒಂದೇ ವಿಕೆಟ್, ಅದೂ 159 ರನ್ನಿಗೆ! ಲಂಕಾ ಬ್ಯಾಟಿಂಗ್ ಸರದಿಯ ಮೇಲೆ ಭಾರತದ ಮಧ್ಯಮ ವೇಗಿಗಳು ಘಾತಕ ದಾಳಿ ನಡೆಸಿದರು. ಉಮೇಶ್ ಯಾದವ್ ಆರಂಭಿಕ ಜೋಡಿಯನ್ನು ತಮ್ಮ ಮೊದಲ ಓವರಿನಲ್ಲೇ ಬೇರ್ಪಡಿಸಿದರೆ, ಮೊಹಮ್ಮದ್ ಶಮಿ ಒಂದೇ ಓವರಿನಲ್ಲಿ 2 ವಿಕೆಟ್ ಉಡಾಯಿಸಿದರು. ಸ್ಪಿನ್ನರ್ ಅಶ್ವಿನ್ ಬುಟ್ಟಿಗೂ ಒಂದು ವಿಕೆಟ್ ಬಿತ್ತು. ಅರ್ಧ ಶತಕ ಬಾರಿಸಿ ಮುನ್ನುಗ್ಗುತ್ತಿದ್ದ ಆರಂಭಕಾರ ಉಪುಲ್ ತರಂಗ ರನೌಟ್ ಕಂಟಕಕ್ಕೆ ಸಿಲುಕಿದರು.
Related Articles
Advertisement
ಪಾಂಡ್ಯ ಬಿರುಸಿನ ಶತಕಾರ್ಧದ್ವಿತೀಯ ದಿನದಾಟದಲ್ಲಿ ಭಾರತ ಉಳಿದ 7 ವಿಕೆಟ್‌ಗಳಿಂದ ಗಳಿಸಿದ್ದು 201 ರನ್ ಮಾತ್ರ. ಇದರಲ್ಲಿ ಚೊಚ್ಚಲ ಟೆಸ್ಟ್ ಆಡಲಿಳಿದ ಹಾರ್ದಿಕ್ ಪಾಂಡ್ಯ ಮತ್ತು ಬೌಲರ್ ಮೊಹಮ್ಮದ್ ಶಮಿ ಅವರ ಸಿಡಿಲಬ್ಬರದ ಬ್ಯಾಟಿಂಗ್ ಹೆಚ್ಚು ರಂಜನೀಯವಾಗಿತ್ತು. ಪಾಂಡ್ಯ 49 ಎಸೆತಗಳಲ್ಲಿ ಸರಿಯಾಗಿ 50 ರನ್ ಬಾರಿಸಿ ಕೊನೆಯವರಾಗಿ ಔಟಾದರು. ಸಿಡಿಸಿದ್ದು 3 ಸಿಕ್ಸರ್ ಹಾಗೂ 5 ಬೌಂಡರಿ. ಶಮಿ ಎಸೆತಕ್ಕೊಂದರಂತೆ 30 ರನ್ ಬಾರಿಸಿದರು. ಇವರಿಂದಲೂ 3 ಸಿಕ್ಸರ್ ಸಿಡಿಯಲ್ಪಟ್ಟಿತು. ಅಶ್ವಿನ್ ಕೂಡ ಆಕರ್ಷಕ ಆಟದ ಮೂಲಕ 47 ರನ್ ಕೊಡುಗೆ ಸಲ್ಲಿಸಿದರು (60 ಎಸೆತ, 7 ಬೌಂಡರಿ). ಸಾಹಾ ಗಳಿಕೆ 16 ರನ್ ಮಾತ್ರ. 144 ರನ್ ಬಾರಿಸಿ ಬ್ಯಾಟಿಂಗ್ ಕಾಯ್ದುಕೊಂಡಿದ್ದ ಚೇತೇಶ್ವರ್ ಪೂಜಾರ 153ರ ತನಕ ಸಾಗಿದರು (265 ಎಸೆತ, 13 ಬೌಂಡರಿ). 39ರಲ್ಲಿದ್ದ ಅಜಿಂಕ್ಯ ರಹಾನೆ 57ಕ್ಕೆ ಔಟಾದರು (130 ಎಸೆತ, 3 ಬೌಂಡರಿ). ಸ್ಕೋರ್‌ಪಟ್ಟಿ
ಭಾರತ ಪ್ರಥಮ ಇನ್ನಿಂಗ್ಸ್
(ನಿನ್ನೆ 3 ವಿಕೆಟಿಗೆ 399)
ಚೇತೇಶ್ವರ್ ಪೂಜಾರ ಸಿ ಡಿಕ್ವೆಲ್ಲ ಬಿ ಪ್ರದೀಪ್ 153
ಅಜಿಂಕ್ಯ ರಹಾನೆ ಸಿ ಕರುಣಾರತ್ನೆ ಬಿ ಕುಮಾರ 57
ಆರ್. ಅಶ್ವಿನ್ ಸಿ ಡಿಕ್ವೆಲ್ಲ ಬಿ ಪ್ರದೀಪ್ 47
ವೃದ್ಧಿಮಾನ್ ಸಾಹಾ ಸಿ ಪೆರೆರ ಬಿ ಹೆರಾತ್ 16
ಹಾರ್ದಿಪ್ ಪಾಂಡ್ಯ ಸಿ ಡಿ’ಸಿಲ್ವ ಬಿ ಕುಮಾರ 50
ರವೀಂದ್ರ ಜಡೇಜ ಬಿ ಪ್ರದೀಪ್ 15
ಮೊಹಮ್ಮದ್ ಶಮಿ ಸಿ ತರಂಗ ಬಿ ಕುಮಾರ 30
ಉಮೇಶ್ ಯಾದವ್ ಔಟಾಗದೆ 11
ಇತರ 16
ಒಟ್ಟು (ಆಲೌಟ್) 600
ವಿಕೆಟ್ ಪತನ: 4-423, 5-432, 6-491, 7-495, 8-517, 9-579.
ಬೌಲಿಂಗ್:
ನುವಾನ್ ಪ್ರದೀಪ್ 31-2-132-6
ಲಹಿರು ಕುಮಾರ 25.1-3-131-3
ದಿಲುÅವಾನ್ ಪೆರೆರ 30-1-130-0
ರಂಗನ ಹೆರಾತ್ 40-6-159-1
ದನುಷ್ಕ ಗುಣತಿಲಕೆ 7-0-41-0 ಶ್ರೀಲಂಕಾ ಪ್ರಥಮ ಇನ್ನಿಂಗ್ಸ್
ದಿಮುತ್ ಕರುಣಾರತ್ನೆ ಎಲ್‌ಬಿಡಬ್ಲ್ಯು ಯಾದವ್ 2
ಉಪುಲ್ ತರಂಗ ರನೌಟ್ 64
ದನುಷ್ಕ ಗುಣತಿಲಕೆ ಸಿ ಧವನ್ ಬಿ ಶಮಿ 16
ಕುಸಲ್ ಮೆಂಡಿಸ್ ಸಿ ಧವನ್ ಬಿ ಶಮಿ 0
ಏಂಜೆಲೊ ಮ್ಯಾಥ್ಯೂಸ್ ಬ್ಯಾಟಿಂಗ್ 54
ನಿರೋಷನ್ ಡಿಕ್ವೆಲ್ಲ ಸಿ ಮುಕುಂದ್ ಬಿ ಅಶ್ವಿನ್ 8
ದಿಲುÅವಾನ್ ಪೆರೆರ ಬ್ಯಾಟಿಂಗ್ 6
ಇತರ 4
ಒಟ್ಟು (5 ವಿಕೆಟಿಗೆ) 154
ವಿಕೆಟ್ ಪತನ: 1-7, 2-68, 3-68, 4-125, 5-143.
ಬೌಲಿಂಗ್:
ಮೊಹಮ್ಮದ್ ಶಮಿ 9-2-30-2
ಉಮೇಶ್ ಯಾದವ್ 8-1-50-1
ಆರ್. ಅಶ್ವಿನ್ 18-2-49-1
ರವೀಂದ್ರ ಜಡೇಜ 9-1-22-0 ಎಕ್ಸ್‌ಟ್ರಾ ಇನ್ನಿಂಗ್ಸ್
ಭಾರತ ಡಿಸೆಂಬರ್ 2016ರ ಬಳಿಕ 5 ಸಲ ಟೆಸ್ಟ್ ಇನ್ನಿಂಗ್ಸ್ ಒಂದರಲ್ಲಿ 600 ಪ್ಲಸ್ ರನ್ ಪೇರಿಸಿತು. ಇದು ಕೇವಲ 8 ಟೆಸ್ಟ್‌ಗಳಲ್ಲಿ ದಾಖಲಾದ ಸಾಧನೆ. ಅದಕ್ಕೂ ಹಿಂದಿನ 47 ಟೆಸ್ಟ್‌ಗಳಲ್ಲಿ ಭಾರತ 600ರ ಗಡಿಯನ್ನೇ ಮುಟ್ಟಿರಲಿಲ್ಲ. ಭಾರತ ಒಟ್ಟು 28 ಸಲ ಟೆಸ್ಟ್ ಇನ್ನಿಂಗ್ಸ್ ಒಂದರಲ್ಲಿ 600ಕ್ಕೂ ಹೆಚ್ಚು ರನ್ ಬಾರಿಸಿತು. ಗಾಲೆಯಲ್ಲಿ ಭಾರತ 133.1 ಓವರ್‌ಗಳಲ್ಲಿ 600 ರನ್ ಗಳಿಸಿತು. ಇದು 600 ರನ್ನಿಗಾಗಿ ಭಾರತ ತೆಗೆದುಕೊಂಡ ಅತೀ ಕಡಿಮೆ ಓವರ್. ಭಾರತ ಅತ್ಯಧಿಕ 4.50 ರನ್‌ರೇಟ್‌ನಲ್ಲಿ 600 ರನ್ ಪೇರಿಸಿತು. ಹಿಂದಿನ ರನ್‌ರೇಟ್ ದಾಖಲೆ 4.44 ಆಗಿತ್ತು (2009-10ರ ಶ್ರೀಲಂಕಾ ಎದುರಿನ ಮುಂಬಯಿ ಟೆಸ್ಟ್). ಶ್ರೀಲಂಕಾದಲ್ಲಿ ಆಡಲಾದ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ 3ನೇ ಸರ್ವಾಧಿಕ ರನ್ ದಾಖಲಾಯಿತು. ಮೊದಲೆರಡು ಸ್ಥಾನದಲ್ಲಿ ಶ್ರೀಲಂಕಾವೇ ಕಾಣಿಸಿಕೊಂಡಿದೆ. ಲಂಕಾದಲ್ಲಿ ಆಡಲಾದ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಅತ್ಯಧಿಕ ರನ್ ಪೇರಿಸಿದ ವಿದೇಶಿ ತಂಡವೆಂಬ ದಾಖಲೆ ಭಾರತದ್ದಾಯಿತು. 2010ರ ಗಾಲೆ ಟೆಸ್ಟ್‌ನಲ್ಲಿ ವೆಸ್ಟ್ ಇಂಡೀಸ್ 9ಕ್ಕೆ 580 ರನ್ ಗಳಿಸಿದ್ದು ಈವರೆಗಿನ ಅತ್ಯುತ್ತಮ ಸಾಧನೆಯಾಗಿತ್ತು. ಚೇತೇಶ್ವರ್ ಪೂಜಾರ ಶ್ರೀಲಂಕಾದಲ್ಲಿ 150 ಪ್ಲಸ್ ರನ್ ಬಾರಿಸಿದ ಭಾರತದ 4ನೇ ಬ್ಯಾಟ್ಸ್‌ಮನ್ ಎನಿಸಿದರು. ಉಳಿದವರೆಂದರೆ ತೆಂಡುಲ್ಕರ್ 203, ಸೆಹವಾಗ್ (ಔಟಾಗದೆ 201) ಮತ್ತು ಧವನ್ (190). ಹಾರ್ದಿಕ್ ಪಾಂಡ್ಯ ಟೆಸ್ಟ್ ಪಾದಾರ್ಪಣೆಯ ಇನ್ನಿಂಗ್ಸ್‌ನಲ್ಲಿ ಸರ್ವಾಧಿಕ 3 ಸಿಕ್ಸರ್ ಬಾರಿಸಿದ ಭಾರತದ ಕ್ರಿಕೆಟಿಗನೆನಿಸಿದರು. ಸಂಧು, ವಿಜಯ್ ಯಾದವ್, ರೈನಾ ಮತ್ತು ಧವನ್ ತಲಾ 2 ಸಿಕ್ಸರ್ ಹೊಡೆದಿದ್ದರು. ಪಾಂಡ್ಯ 8ನೇ ಅಥವಾ ಅದಕ್ಕಿಂತ ಕೆಳ ಕ್ರಮಾಂಕದಲ್ಲಿ ಆಡಲಿಳಿದು, ಚೊಚ್ಚಲ ಟೆಸ್ಟ್‌ನಲ್ಲೇ 50 ಪ್ಲಸ್ ರನ್ ಹೊಡೆದ ಭಾರತದ 7ನೇ ಆಟಗಾರ. 1952ರ ಪಾಕಿಸ್ಥಾನ ವಿರುದ್ಧದ ಕೋಲ್ಕತಾ ಟೆಸ್ಟ್‌ನಲ್ಲಿ ದೀಪಕ್ ಶೋಧನ್ 110 ರನ್ ಹೊಡೆದದ್ದು ಇಂದಿಗೂ ದಾಖಲೆಯಾಗಿ ಉಳಿದಿದೆ. ರಂಗನ ಹೆರಾತ್ 159 ರನ್ನಿತ್ತು ಒಂದು ವಿಕೆಟ್ ಕಿತ್ತರು. ಇದು ನಾಯಕನೊಬ್ಬನ 3ನೇ ಅತ್ಯಂತ ದುಬಾರಿ ಬೌಲಿಂಗ್ ಆಗಿದೆ. ಲಂಕಾ ಬೌಲಿಂಗ್ ಸರದಿಯಲ್ಲಿ 3ನೇ ಸಲ ಟಾಪ್-4 ಬೌಲರ್‌ಗಳು 130 ಪ್ಲಸ್ ರನ್ ಬಿಟ್ಟುಕೊಟ್ಟರು. ಲಂಕಾ ವೇಗಿಗಳಿಬ್ಬರು 2ನೇ ಸಲ ಟೆಸ್ಟ್ ಇನ್ನಿಂಗ್ಸ್ ಒಂದರಲ್ಲಿ 9 ವಿಕೆಟ್ ಕಿತ್ತರು (ಪ್ರದೀಪ್ 6, ಕುಮಾರ 3 ವಿಕೆಟ್). ಇದಕ್ಕೂ ಮುನ್ನ 2004ರ ದಕ್ಷಿಣ ಆಫ್ರಿಕಾ ಎದುರಿನ ಕೊಲಂಬೊ ಟೆಸ್ಟ್ ಪಂದ್ಯದ 2ನೇ ಇನ್ನಿಂಗ್ಸ್‌ನಲ್ಲಿ ವಾಸ್ (6) ಮತ್ತು ಮಾಲಿಂಗ (3 ವಿಕೆಟ್) ಈ ಸಾಧನೆ ಮಾಡಿದ್ದರು.