Advertisement
ಧಾರವಾಡದಲ್ಲಿ 14, ಹುಬ್ಬಳ್ಳಿಯಲ್ಲಿ 18, ಕುಂದಗೋಳದಲ್ಲಿ 2 ಪೀಠಗಳನ್ನು, ನವಲಗುಂದ ಮತ್ತು ಕಲಘಟಗಿಯಲ್ಲಿ ತಲಾ 1 ಪೀಠ ಸ್ಥಾಪಿಸಿ ಸುಮಾರು 7,009ಕ್ಕಿಂತ ಹೆಚ್ಚು ಪ್ರಕರಣಗಳನ್ನು ವಿಚಾರಣೆಗೆ ತೆಗೆದುಕೊಳ್ಳಲಾಗಿತ್ತು. ಅದರಲ್ಲಿ 1,666 ಚಾಲ್ತಿ ಇರುವ ಪ್ರಕರಣಗಳನ್ನು ಹಾಗೂ 309 ವ್ಯಾಜ್ಯ ಪೂರ್ವ ಪ್ರಕರಣಗಳನ್ನು ರಾಜಿ ಸಂಧಾನ ಮಾಡಿಸಲಾಯಿತು. ಸುಮಾರು 17 ಕೋಟಿ ಮೊತ್ತವನ್ನು ವಸೂಲು ಮಾಡಲಾಯಿತು. ಲೋಕ ಅದಾಲತ್‌ನಲ್ಲಿ ಜಿಲ್ಲೆಯ ಎಲ್ಲ ನ್ಯಾಯಾಧೀಶರು, ವಿವಿಧ ವಿಮೆ ಕಂಪನಿ ಅಧಿಕಾರಿಗಳು, ವಿಮೆ ಕಂಪನಿ ಪ್ಯಾನಲ್ ವಕೀಲರುಗಳು, ಅರ್ಜಿದಾರರ ಪರ ವಕೀಲರು, ವಾಕರಸಾಸಂ ಅಧಿಕಾರಿಗಳು, ಕಕ್ಷಿದಾರರು, ಜಿಲ್ಲೆಯ ವಕೀಲ ಸಂಘದ ಸದಸ್ಯರು ಪಾಲ್ಗೊಂಡಿದ್ದರು.
Advertisement
1975 ಪ್ರಕರಣ ರಾಜಿಯಲ್ಲಿ ಇತ್ಯರ್ಥ
02:18 PM Dec 15, 2019 | Suhan S |
Advertisement
Udayavani is now on Telegram. Click here to join our channel and stay updated with the latest news.