Advertisement

ಬೆಳಗಾವಿ: ಸಾರ್ವಜನಿಕರ ಎದುರೇ ವಿದ್ಯಾರ್ಥಿನಿ ಸಜೀವದಹನ

01:10 PM Mar 17, 2017 | Team Udayavani |

ಬೆಳಗಾವಿ: ಸಾರ್ವಜನಿಕರ ಎದುರೇ ಬೆಂಕಿಹಚ್ಚಿಕೊಂಡು ಚಲಿಸುತ್ತಿದ್ದ ರೈಲಿಗೆ ತಲೆಕೊಟ್ಟು ಯುವತಿಯೊಬ್ಬಳು ಸಾವನ್ನಪ್ಪಿರುವ ಭೀಕರ ಘಟನೆ ಬೆಳಗಾವಿಯ ಟಿಳಕವಾಡಿ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ.

Advertisement

ಬೆಳಗಾವಿಯ ಟಿಳಕವಾಡಿಯ ಒಂದನೇ ರೈಲ್ವೆ ಗೇಟ್ ಬಳಿ ಸಾರ್ವಜನಿಕರ ಎದುರೇ ಸಂಜನಾ ಅನಗೋಳಕರ್ (19) ಎಂಬ ಯುವತಿ ಮೈಮೇಲೆ ಸೀಮೆಎಣ್ಣೆ ಸುರಿದು ಕೊಂಡು, ಬೆಂಕಿಹಚ್ಚಿಕೊಂಡು ಬಳಿಕ ವೇಗವಾಗಿ ಬರುತ್ತಿದ್ದ ರೈಲಿಗೆ ತಲೆಕೊಟ್ಟು ಸಾವನ್ನಪ್ಪಿರುವುದಾಗಿ ಪೊಲೀಸ್ ಅಧೀಕಾರಿಗಳು ತಿಳಿಸಿದ್ದಾರೆ.

ಮೊದಲ ವರ್ಷದ ಬಿಇ ವಿದ್ಯಾರ್ಥಿನಿಯಾಗಿರುವ ಸಂಜನಾ ಯಾವ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂಬುದು ಇನ್ನಷ್ಟೇ ತಿಳಿಯಬೇಕಾಗಿದೆ. ಸಂಜನಾ ದೇಹ ಸಂಪೂರ್ಣವಾಗಿ ಸುಟ್ಟು ಹೋಗಿರುವುದಾಗಿ ಮಾಧ್ಯಮದ ವರದಿ ವಿವರಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next