Advertisement

ಅಮೆರಿಕದಲ್ಲಿ ಬಾಬಾ ಸಾಹೇಬರ 19 ಅಡಿ ಎತ್ತರದ ಪ್ರತಿಮೆ ಅನಾವರಣ

09:46 PM Oct 15, 2023 | Team Udayavani |

ವಾಷಿಂಗ್ಟನ್‌: ಭಾರತದ ಸಂವಿಧಾನ ಶಿಲ್ಪಿ, ಡಾ.ಬಿ.ಆರ್‌ ಅಂಬೇಡ್ಕರ್‌ ಅವರ 19 ಅಡಿ ಎತ್ತರದ “ಸಮಾನತೆ ಪ್ರತಿಮೆ’ಯನ್ನು ಅಮೆರಿಕದ ಮೇರಿಲ್ಯಾಂಡ್‌ ಉಪನಗರದಲ್ಲಿ ಭಾನುವಾರ ಉದ್ಘಾಟಿಸಲಾಗಿದೆ. ವಿದೇಶದಲ್ಲಿ ಅನಾವರಣಗೊಂಡಿರುವ ಬಾಬಾ ಸಾಹೇಬರ ಅತಿದೊಡ್ಡ ಪ್ರತಿಮೆ ಎಂಬ ಹೆಗ್ಗಳಿಕೆಯೂ ಇದಕ್ಕಿದೆ.

Advertisement

ಅಮೆರಿಕದ ವಿವಿಧ ಭಾಗಗಳಿಂದ 500ಕ್ಕೂ ಅಧಿಕ ಮಂದಿ ಭಾರತೀಯ ಅಮೆರಿಕನ್ನರು ಆಗಮಿಸಿ “ಜೈ ಭೀಮ್‌’ ಘೋಷಣೆಯೊಂದಿಗೆ ಪ್ರತಿಮೆ ಅನಾವರಣದಲ್ಲಿ ಭಾಗಿಯಾಗಿ ಸಂಭ್ರಮಿಸಿದ್ದಾರೆ. ಮಳೆಯ ನಡುವೆಯೂ ಜನರು ಉತ್ಸಾಹದಿಂದ ಬಾಬಾ ಸಾಹೇಬರನ್ನು ಸಂಭ್ರಮಿಸಿದ್ದಾರೆ.

ಖ್ಯಾತ ಶಿಲ್ಪಿ ರಾಮ್‌ ಸುತಾರ್‌ ಅವರು ಪ್ರತಿಮೆಯನ್ನು ಕೆತ್ತನೆ ಮಾಡಿದ್ದು, ಭಾರತದಲ್ಲಿನ ಸರ್ದಾರ್‌ ವಲ್ಲಭಭಾಯಿ ಪಟೇಲ್‌ ಅವರ ಏಕತಾ ಪ್ರತಿಮೆಯ ನಿರ್ಮಾತೃ ಕೂಡ ಇವರೇ ಆಗಿದ್ದಾರೆ. ಅಸಮಾನತೆ ಕೇವಲ ಭಾರತದ ಸಮಸ್ಯೆ ಅಲ್ಲ, ಜಗತ್ತಿನ ವಿವಿಧೆಡೆ ವಿವಿಧ ರೂಪದಲ್ಲಿ ಅಸಮಾನತೆ ಇದೆ. ಈ ಹಿನ್ನೆಲೆಯಲ್ಲಿ ಸಮಾನತೆಯ ಪ್ರತೀಕವಾಗಿ ಬಾಬಾ ಸಾಹೇಬರ ಪುತ್ಥಳಿ ಅನಾವರಣಗೊಳಿಸಿದ್ದೇವೆ ಎಂದು ಅಂಬೇಡ್ಕರ್‌ ಇಂಟರ್‌ನ್ಯಾಷನಲ್‌ ಸೆಂಟರ್‌ ಅಧ್ಯಕ್ಷ ರಾಮ್‌ ಕುಮಾರ್‌ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next