Advertisement

ಟಿಎಂಸಿ ಬ್ಯಾಂಕ್‌ಗೆ 19.14 ಲಕ್ಷ ರೂ. ನಿವ್ವಳ ಲಾಭ

03:12 PM Jul 25, 2022 | Team Udayavani |

ದೊಡ್ಡಬಳ್ಳಾಪುರ: ನಗರದ ಗಾಂಧಿನಗರದಲ್ಲಿರುವ ಟೆಕ್ಸ್‌ಟೈಲ್‌ ಮ್ಯಾನುಫ್ಯಾಕ್ಚರ್ ಕೋ-ಆಪರೇಟಿವ್‌ ಬ್ಯಾಂಕ್‌ ಲಿ.ನ 58ನೇ ವಾರ್ಷಿಕ ಹಾಗೂ 2021-22ನೇ ಸಾಲಿನ ಸರ್ವ ಸದಸ್ಯರ ಮಹಾಸಭೆ ನಗರದದತ್ತಾತ್ರೇಯ ಕಲ್ಯಾಣ ಮಂದಿರದಲ್ಲಿ ನಡೆಯಿತು.

Advertisement

ಟಿಎಂಸಿ ಬ್ಯಾಂಕ್‌ನ ಅಧ್ಯಕ್ಷ ಕೆ.ಪಿ. ವಾಸುದೇವ್‌ ಮಾತನಾಡಿ, ಟಿಎಂಸಿ ಬ್ಯಾಂಕ್‌ ಮಾರ್ಚ್‌ 2022ರಅಂತ್ಯಕ್ಕೆ 19.14 ಲಕ್ಷ ರೂಗಳ ನಿವ್ವಳ ಲಾಭ ಗಳಿಸಿದೆ.ಬ್ಯಾಂಕ್‌ ಅಭಿವೃದ್ಧಿ ಹೊಂದುತ್ತಿದೆ. ಆದರೆ,ಕೋವಿಡ್‌ ನಂತರ ಸಾಲ ವಿತರಣೆ ಪ್ರಮಾಣಕಡಿಮೆಯಾಗಿರುವುದರಿಂದ ಲಾಭಂಶ ಕಡಿಮೆಯಾಗಿದೆ ಎಂದರು.

ಶೇ.10ರಷ್ಟು ಡಿವಿಡೆಂಡ್‌: ಮಾರ್ಚ್‌ 2022ರ ಪ್ರಗತಿಯಂತೆ ಷೇರು ಮೊತ್ತ 41.58ಲಕ್ಷ ರೂ.ಠೇವಣಿ ಮೊತ್ತ 13.33 ಕೋಟಿ ರೂ ದಾಟಿದ್ದು,3.11 ಕೋಟಿ ರೂ ಸಾಲ ವಸೂಲಾತಿಯಾಗಿದೆ.ಅನುತ್ಪಾದಕ ಆಸ್ತಿಗಳು ಈಗ ಶೇ.1.79ಕ್ಕೆಇಳಿಕೆಯಾಗಿದ್ದು, ಆಡಿಟ್‌ ವರದಿಯಲ್ಲಿ ಎ ಶ್ರೇಣಿಪಡೆದಿದೆ. ಡಿವಿಡೆಂಡ್‌ ಪ್ರಮಾಣ ಹೆಚ್ಚಿಸಲುರಿಸರ್ವ್‌ ಬ್ಯಾಂಕ್‌ನ ನಿಯಮಗಳು ಅಡ್ಡಿಯಾಗಿವೆ.ಆದರೂ ಸಹ ಈ ಬಾರಿ ಸದಸ್ಯರ ಕೋರಿಕೆಯಮೇರೆಗೆ ಶೇ.10ರಷ್ಟು ಡಿವಿಡೆಂಡ್‌ ನೀಡಲಾಗುತ್ತಿದೆ.ಠೇವಣಿ ಹಣ 5 ಕೋಟಿ ರೂ. ಹೆಚ್ಚಾಗಿದ್ದು, ಶೇ. 90ಕ್ಕೂ ಹೆಚ್ಚು ಸಾಲ ವಸೂಲಾಗುತ್ತಿದೆ ಎಂದರು.

ಡಿಜಿಟಲೀಕರಣಕ್ಕೆ ಒತ್ತು: ಬ್ಯಾಂಕ್‌ ಈಗ ಡಿಜಿಟಲೀಕರಣಕ್ಕೆ ಒತ್ತು ನೀಡಲಾಗುತ್ತಿದ್ದು, ಬ್ಯಾಂಕ್‌ಗೆ ಫೋನ್‌ ಪೇ ಮೂಲಕ ಹಣಪಾವತಿಸಬಹುದಾಗಿದೆ. ಮಗ್ಗಗಳ ಮೇಲೆ ಸಾಲನೀಡುವ ಏಕೈಕ ಬ್ಯಾಂಕ್‌ ನಮ್ಮದಾಗಿದ್ದು, ಈಗಕಂಪ್ಯೂಟ್‌ ಜಾಕಾರ್ಡ್‌ ಹಾಕಿಕೊಳ್ಳಲು ಸಾಲನೀಡಲಾಗುತ್ತಿದೆ. ಇದರೊಂದಿಗೆ ಶೈಕ್ಷಣಿಕ ಸಾಲ,ಉದ್ಯೋಗಸ್ಥ ಮಹಿಳೆಯರಿಗೆ ಸಾಲ, ಬೆಳ್ಳಿ, ಚಿನ್ನದಸಾಲ, ಸೇರಿದಂತೆ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿನೀಡಲಾಗುವ ವಿವಿಧ ಸಾಲ ಸೌಲಭ್ಯನೀಡಲಾಗುತ್ತಿದೆ. ಸದಸ್ಯರು ಹೆಚ್ಚಿನ ಹಣ ಬ್ಯಾಂಕ್‌ನ ವಹಿವಾಟುಗಳಲ್ಲಿ ತೊಡಗಿಸಿಕೊಳ್ಳುವ ಮೂಲಕಬ್ಯಾಂಕ್‌ ಮತ್ತಷ್ಟು ಏಳಿಗೆಯಾಗುವಂತೆ ಸಹಕರಿಸುವಂತೆ ಮನವಿ ಮಾಡಿದರು.

ಷೇರು ಬೆಲೆ 2 ಸಾವಿರ ರೂ.ಗೆ ಹೆಚ್ಚಳ: ಬ್ಯಾಂಕ್‌ನಬೈಲಾ ತಿದ್ದುಪಡಿ ವಿಚಾರ ಕುರಿತಂತೆ 500 ರೂ.ಷೇರಿನ ಬೆಲೆಯನ್ನು 1 ಸಾವಿರ ರೂ. ಹೆಚ್ಚಿಸುವಂತೆತಿದ್ದುಪಡಿಯಾಗಿರುವುದನ್ನು ಅಧ್ಯಕ್ಷರು ಸದಸ್ಯರಗಮನಕ್ಕೆ ತಂದಾಗ, ಸದಸ್ಯರು ಪದೇಪದೆಹೆಚ್ಚಿಸುವುದು ಬೇಡ. ಒಂದೇ ಬಾರಿ 2 ಸಾವಿರ ರೂಹೆಚ್ಚಿಸಿ ಎಂದು ಕೆಲ ಸದಸ್ಯರು ಸಲಹೆ ನೀಡಿದಾಗ,ಷೇರು ಬೆಲೆಯನ್ನು 2 ಸಾವಿರ ರೂ.ಗೆ ಹೆಚ್ಚಿಸಲು ಸಭೆ ಬಹುಮತದಿಂದ ತೀರ್ಮಾನಿಸಿತು.

Advertisement

ಬ್ಯಾಂಕಿನ ಉಪಾಧ್ಯಕ್ಷ ಜಿ.ಮಂಜುನಾಥ್‌,ನಿರ್ದೇಶಕ ಪಿ.ಸಿ.ವೆಂಕಟೇಶ್‌, ಎ.ಆರ್‌.ಶಿವಕುಮಾರ್‌, ಎ.ಎಸ್‌.ಕೇಶವ, ಕೆ.ಜಿ.ಗೋಪಾಲ್‌,ಡಿ.ಪ್ರಶಾಂತ್‌ ಕುಮಾರ್‌, ನಾರಾಯಣ್‌.ಎನ್‌.ನಾಯ್ಡು, ಬಿ.ಆರ್‌.ಉಮಾಕಾಂತ್‌, ಎ. ಗಿರಿಜಾ, ಡಾ. ಆರ್‌. ಇಂದಿರಾ, ವೃತ್ತಿಪರ ನಿರ್ದೇಶಕಎ.ಆರ್‌.ನಾಗರಾಜನ್‌, ಕೆ.ಎಂ. ಕೃಷ್ಣಮೂರ್ತಿ,ಪ್ರಭಾರಿ ವ್ಯವಸ್ಥಾಪಕ ಎ.ಎಸ್‌. ಪುಷ್ಪಲತಾ ಹಾಗೂ ಮತ್ತಿತರರು ಇದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next