Advertisement

ಮದುವೆಯಾಗಿ 18 ವರ್ಷದ ಬಳಿಕ ಹಿಂದೂ ಸಂಪ್ರದಾಯದಂತೆ ಸಪ್ತಪದಿ ತುಳಿದ ಮುಸ್ಲಿಂ ದಂಪತಿ

03:45 PM Sep 20, 2022 | Team Udayavani |

ಉತ್ತರ ಪ್ರದೇಶ : ಭಾರತ ಪ್ರವಾಸಕ್ಕೆ ಬಂದಿದ್ದ ಅಮೆರಿಕದ ಮುಸ್ಲಿಂ ದಂಪತಿ ಇಲ್ಲಿನ ಸಂಪ್ರದಾಯಗಳಿಗೆ ಮಾರುಹೋಗಿ ಶನಿವಾರ ಉತ್ತರ ಪ್ರದೇಶದ ಜಾನ್‌ಪುರದಲ್ಲಿ ಹಿಂದೂ ಸಂಪ್ರದಾಯದ ಪ್ರಕಾರ ಸಪ್ತಪದಿ ತುಳಿದಿದ್ದಾರೆ. ವಿಶೇಷವೇನೆಂದರೆ ಈ ದಂಪತಿಗೆ 18 ವರ್ಷಗಳ ಹಿಂದೆ ಮುಸ್ಲಿಂ ಸಂಪ್ರದಾಯದಂತೆ ಮದುವೆಯಾಗಿದ್ದು ದಂಪತಿಗೆ ಒಂಬತ್ತು ಮಕ್ಕಳಿದ್ದಾರೆ.

Advertisement

ಅಮೇರಿಕನ್ ಮೂಲದ ಮುಸ್ಲಿಂ ದಂಪತಿಗಳಾದ ಕಿಯಾಮಾ ದಿನ್ ಖಲೀಫಾ ಮತ್ತು ಕೇಶ ಖಲೀಫಾ ಅವರು ಭಾರತ ಪ್ರವಾಸ ಕೈಗೊಂಡಿದ್ದು ಭಾರತಕ್ಕೆ ಬಂದ ಜೋಡಿ ಇಲ್ಲಿನ ಸಂಸ್ಕೃತಿ ಮತ್ತು ಸಂಪ್ರದಾಯಗಳಿಗೆ ಮಾರುಹೋಗಿ ಹಿಂದೂ ಸಂಪ್ರದಾಯದ ಪ್ರಕಾರ ಮದುವೆಯಾಗಲು ನಿರ್ಧರಿಸಿದ್ದಾರೆ. ಅದರಂತೆ ಜೌನ್‌ಪುರದ ತ್ರಿಲೋಚನ್ ಮಹಾದೇವ ದೇವಸ್ಥಾನದಲ್ಲಿ ವಿವಾಹ ನೆರವೇರಿತು.

ದೇವಸ್ಥಾನದ ಅರ್ಚಕ ರವಿಶಂಕರ್ ಗಿರಿ ಪ್ರಕಾರ, ದಂಪತಿಗಳು 40 ರ ಹರೆಯದವರಾಗಿದ್ದು, ಅವರು ಈಗಾಗಲೇ ಮುಸ್ಲಿಂ ಸಂಪ್ರದಾಯದ ಪ್ರಕಾರ ಮದುವೆಯಾಗಿದ್ದಾರೆ ಎಂದು ಹೇಳಿದ್ದಾರೆ. ಅಲ್ಲದೆ ತನ್ನ ಅಜ್ಜ ಭಾರತೀಯ ಮೂಲದವರು ಎಂದು ಕೇಶ ಖಲೀಫಾ ಹೇಳಿಕೊಂಡಿದ್ದಾರೆ.

ದಂಪತಿಗಳ ಆಸೆಯಂತೆ ಹಿಂದೂ ಸಂಪ್ರದಾಯದ ವಿಧಿವಿಧಾನಗಳಂತೆ ಸಪ್ತಪದಿ ತುಳಿದು ಮದುವೆ ನೆರವೇರಿದೆ ಎಂದು ಪಂಡಿತ್ ಗೋವಿಂದ ಶಾಸ್ತ್ರಿ ತಿಳಿಸಿದ್ದಾರೆ.

ಬಳಿಕ ಮದುವೆ ನೋಂದಣಿ ಪ್ರಕ್ರಿಯೆಯನ್ನು ಅಗತ್ಯ ದಾಖಲೆಗಳನ್ನು ಪಡೆದು ಪ್ರಮಾಣ ಪತ್ರವನ್ನು ದಂಪತಿಗೆ ನೀಡಲಾಯಿತು.

Advertisement

ಇದನ್ನೂ ಓದಿ : ಕಬ್ಬಡಿ ಕ್ರೀಡಾಪಟುಗಳಿಗೆ ಶೌಚಾಲಯದಲ್ಲಿ ಊಟದ ವ್ಯವಸ್ಥೆ : ವಿಡಿಯೋ ವೈರಲ್

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next