Advertisement

ಸಹೋದರನನ್ನು ಬಾವಿಗೆ ಎಸೆದು ತಂಗಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ರು!

08:26 AM May 02, 2020 | Nagendra Trasi |

ಬೇತುಲ್(ಮಧ್ಯಪ್ರದೇಶ): ಸಹೋದರನ ಜತೆ ಹಳ್ಳಿಗೆ ವಾಪಸ್ ಆಗುತ್ತಿದ್ದ 18 ವರ್ಷದ ಯುವತಿ ಮೇಲೆ ಮೂವರು ಅಪ್ರಾಪ್ತರು ಸೇರಿದಂತೆ ಏಳು ಮಂದಿ ಸಾಮೂಹಿಕವಾಗಿ ಅತ್ಯಾಚಾರ ಎಸಗಿದ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

Advertisement

ಏಪ್ರಿಲ್ 29-30ರ ರಾತ್ರಿ ಸಹೋದರಿಯನ್ನು ಎಳೆದೊಯ್ಯುತ್ತಿದ್ದಾಗ ತಡೆಯಲು ಯತ್ನಿಸಿದ್ದ ಸಹೋದರನನ್ನು ಆರೋಪಿಗಳು ಬಾವಿಗೆ ಎಸೆದಿದ್ದು, ನಂತರ ಆಕೆ ಮೇಲೆ ಸಾಮೂಹಿಕವಾಗಿ ಅತ್ಯಾಚಾರ ಎಸಗಿದ್ದರು ಎಂದು ವರದಿ ಹೇಳಿದೆ.

ಮೂವರು ಅಪ್ರಾಪ್ತರು ಸೇರಿದಂತೆ ಐವರು ಆರೋಪಿಗಳನ್ನು ಬಂಧಿಸಿದ್ದೇವೆ. ಇಬ್ಬರು ನಾಪತ್ತೆಯಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ. 21ವರ್ಷದ ಸಹೋದರನ ಜತೆ ಯುವತಿ ಬೈಕ್ ನಲ್ಲಿ ಗ್ರಾಮಕ್ಕೆ ಬರುತ್ತಿದ್ದ ವೇಳೆ ಈ ಘಟನೆ ನಡೆದಿದೆ ಎಂದು ಕೋಟ್ವಾಲಿ ಪೊಲೀಸ್ ಠಾಣೆಯ ಪ್ರಭಾರ ಠಾಣಾಧಿಕಾರಿ ರಾಜೇಂದ್ರ ಧುರ್ವೆ ತಿಳಿಸಿದ್ದಾರೆ.

ಏಳು ಮಂದಿ ಆರೋಪಿಗಳು ಬೈಕ್ ಅನ್ನು ಅಡ್ಡಗಟ್ಟಿ, ಯುವತಿಯ ಸಹೋದರನನ್ನು ಬಾವಿಗೆ (ರಾತ್ರಿ 8.30ರ ಸುಮಾರಿಗೆ) ಎಸೆದಿದ್ದರು. ನಂತರ ಆರೋಪಿಗಳು ಬೆಳಗ್ಗಿನ ಜಾವ 2ಗಂಟೆವರೆಗೆ ಅತ್ಯಾಚಾರ ಎಸಗಿದ್ದರು ಎಂದು ವರದಿ ಹೇಳಿದೆ. ನಂತರ ಯುವತಿಯನ್ನು ಬಿಟ್ಟು ಆರೋಪಿಗಳು ಪರಾರಿಯಾಗಿದ್ದರು. ಬಳಿಕ ಆಕೆ ಸಹೋದರನಿಗೆ ಹಗ್ಗ ನೀಡಿ ಮೇಲಕ್ಕೆ ಬಂದ ನಂತರ ಬೆಳಗ್ಗೆ ಹಳ್ಳಿ ತಲುಪಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next