ಹೈದರಾಬಾದ್: ಕೆ.ಚಂದ್ರಶೇಖರ ರಾವ್ ಮುಖ್ಯಮಂತ್ರಿಯಾಗಿರುವ ತೆಲಂಗಾಣ ಸರ್ಕಾರ ಮಹತ್ವದ ನಿರ್ಧಾರವೊಂದನ್ನು ಮಾಡಿದೆ.
ಆ ರಾಜ್ಯದ 18 ಸರ್ಕಾರಿ ಆಸ್ಪತ್ರೆಗಳಲ್ಲಿ ಕೇವಲ 5 ರೂ.ಗೆ ಊಟ ನೀಡಲು ತೀರ್ಮಾನಿಸಿದೆ.
ಇಲ್ಲಿಗೆ ಊಟ ಪೂರೈಸುವ ಜವಾಬ್ದಾರಿಯನ್ನು ಇಸ್ಕಾನ್ ಸಂಸ್ಥೆ ಹೊತ್ತುಕೊಂಡಿದೆ.
ಇದಕ್ಕಾಗಿಯೇ ತೆಲಂಗಾಣ ಸರ್ಕಾರ 40 ಕೋಟಿ ರೂ. ಅನುದಾನ ಮೀಸಲಿಟ್ಟಿದೆ. ಇದರಲ್ಲಿ ಸರ್ಕಾರ 21.25 ರೂ.ಗಳನ್ನು ತನ್ನ ಪಾಲಾಗಿ ಭರಿಸಲಿದೆ. ಉಳಿದ 5 ರೂ.ಗಳನ್ನು ಜನರು ನೀಡಬೇಕಿದೆ.
ಇದರಿಂದ ಪ್ರತೀದಿನ 20,000 ಮಂದಿ ಲಾಭ ಪಡೆಯಲಿದ್ದಾರೆ.ಈ ಯೋಜನೆಗೆ ಒಸ್ಮಾನಿಯಾ ಸರ್ಕಾರಿ ಆಸ್ಪತ್ರೆಯಲ್ಲಿ ಆರೋಗ್ಯ ಸಚಿವ ಟಿ.ಹರೀಶ್ ರಾವ್ ಚಾಲನೆ ನೀಡಿದರು.