Advertisement

ದೆಹಲಿ ಆಪ್ ಶಾಸಕ ಅಮಾನತುಲ್ಲಾ ಖಾನ್ ವಿರುದ್ಧ 18 ಎಫ್‌ಐಆರ್‌ಗಳು ದಾಖಲು

04:16 PM May 13, 2022 | Team Udayavani |

ನವದೆಹಲಿ :ದೆಹಲಿಯ ಎಎಪಿ ಶಾಸಕ ಅಮಾನತುಲ್ಲಾ ಖಾನ್ ವಿರುದ್ಧ ಇಲ್ಲಿಯವರೆಗೆ 18 ಎಫ್‌ಐಆರ್‌ಗಳು ದಾಖಲಾಗಿವೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ. ಎಸ್‌ಡಿಎಂಸಿ ಅತಿಕ್ರಮಣ-ವಿರೋಧಿ ಪ್ರತಿಭಟನೆ ಯನ್ನು ನಡೆಸಿದ ಕಾರಣ ಗುರುವಾರ ಮದನ್‌ಪುರ ಖಾದರ್ ಪ್ರದೇಶದಲ್ಲಿ ದೆಹಲಿ ಪೊಲೀಸರು ಖಾನ್ ಅವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದ್ದರು.

Advertisement

ದೆಹಲಿ ಪೊಲೀಸರು ಈಗಾಗಲೇ ಖಾನ್ ಅವರನ್ನು, ಬ್ಯಾಡ್ ಕ್ಯಾರೆಕ್ಟರ್ (ಕೆಟ್ಟ ವ್ಯಕ್ತಿತ್ವ) ಎಂದು ಘೋಷಿಸಿದ್ದಾರೆ. ಅಮಾನತುಲ್ಲಾ ಖಾನ್ ವಿರುದ್ಧ 18 ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ. ಭೂಕಬಳಿಕೆ ಮತ್ತು ಹಲ್ಲೆ ಪ್ರಕರಣಗಳು ದಾಖಲಾಗಿವೆ ಎಂದು ಡಿಸಿಪಿ ತಿಳಿಸಿದ್ದಾರೆ.

ಇದನ್ನೂ ಓದಿ : ಬಾಬ್ರಿ ಮಸೀದಿ ಕಳೆದುಕೊಂಡೆವು, ಈಗ ಇನ್ನೊಂದು ಮಸೀದಿ ಕಳೆದುಕೊಳ್ಳಬಾರದು: ಒವೈಸಿ

ದಕ್ಷಿಣ ದೆಹಲಿ ಮಹಾನಗರ ಪಾಲಿಕೆಯು ವಿಷ್ಣು ಗಾರ್ಡನ್ ಪ್ರದೇಶದ ಖಯಾಲಾ ರಸ್ತೆಯಲ್ಲಿ ಶುಕ್ರವಾರವೂ ಪ್ರತಿ ಭಟನೆಯ ನಡುವೆಯೂ ಅತಿಕ್ರಮಣ ವಿರೋಧಿ ಅಭಿಯಾನವನ್ನು ನಡೆಸಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next