Advertisement

Chhattisgarh; ಪಿಕಪ್ ವಾಹನ ಕಂದಕಕ್ಕೆ ಪಲ್ಟಿಯಾಗಿ 18 ಮಂದಿ ದಾರುಣ ಅಂತ್ಯ

05:16 PM May 20, 2024 | Team Udayavani |

ಕವರ್ಧಾ(ಛತ್ತೀಸ್‌ಗಢ): ಛತ್ತೀಸ್‌ಗಢದ ಕವರ್ಧಾ ಪ್ರದೇಶದಲ್ಲಿ ಸೋಮವಾರ ಪಿಕಪ್ ವಾಹನ ಪಲ್ಟಿಯಾದ ಪರಿಣಾಮ ಕನಿಷ್ಠ 18 ಜನರು ಪ್ರಾಣಕಳೆದುಕೊಂಡಿದ್ದಾರೆ.

Advertisement

ಬೈಗಾ ಬುಡಕಟ್ಟು ಸಮುದಾಯದ 25-30 ಜನರ ಗುಂಪು ತೆಂಡು ಎಲೆಗಳನ್ನು ಸಂಗ್ರಹಿಸಿ ಪಿಕಪ್ ಟ್ರಕ್‌ನಲ್ಲಿ ಹಿಂತಿರುಗುತ್ತಿದ್ದ ವೇಳೆ ಬಹಪಾನಿ ಪ್ರದೇಶದ ಬಳಿ 20 ಅಡಿ ಆಳದ ಕಂದಕಕ್ಕೆ ವಾಹನ ಬಿದ್ದು ಘೋರ ದುರಂತ ಸಂಭವಿಸಿದೆ.

ಇನ್ನೂ ಕೆಲವರು ಗಾಯಗೊಂಡಿದ್ದು, ಗಾಯಾಳುಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಸಮೀಪದ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ಎಲ್ಲರೂ ಕುಯಿ ಪ್ರದೇಶದ ನಿವಾಸಿಗಳು ಎನ್ನಲಾಗಿದೆ.

ಬೈಗಾ ಬುಡಕಟ್ಟು ಸಮುದಾಯದವರು ಬೀಡಿ ತಯಾರಿಸುವ ಕಾಯಕದಲ್ಲಿ ತೊಡಗಿಸಿಕೊಂಡಿದ್ದು, ತೆಂಡು ಎಲೆಗಳನ್ನು ಸಂಗ್ರಹಿಸಲು ತೆರಳಿದ್ದರು. ತೆಂಡು ಎಲೆಗಳು ಮಾರ್ಚ್ ನಿಂದ ಮೇ ತಿಂಗಳಲ್ಲಿ ಸಂಗ್ರಹಿಸುವ ಕೆಲಸ ನಡೆಯುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next