ಗದಗ: ಇಲ್ಲಿನ ಬಿಂಕದಕಟ್ಟಿ ಸಾಲುಮರದ ತಿಮ್ಮಕ್ಕ ಸಸ್ಯೋದ್ಯಾನದಲ್ಲಿ ನಡೆಯುತ್ತಿರುವ17ನೇ ರಾಷ್ಟ್ರೀಯ ಮೌಂಟೇನ್ ಬೈಕ್ ಸೈಕ್ಲಿಂಗ್‌ಚಾಂಪಿಯನ್‌ಶಿಪ್‌ನಲ್ಲಿ ಕರ್ನಾಟಕ ಸೈಕ್ಲಿಸ್ಟ್‌ಗಳ ಪದಕಗಳ ಬೇಟೆ ಮುಂದುವರಿದಿದೆ.
2 ದಿನಗಳಿಂದ ಅತೀ ಹೆಚ್ಚು ಪದಕ ಪಡೆಯುವ ಮೂಲಕ ಕರ್ನಾಟಕ ಸಮಗ್ರ ವೀರಾಗ್ರಣಿಯತ್ತಮುನ್ನುಗ್ಗುತ್ತಿದ್ದು, ಕರ್ನಾಟಕದ ಸ್ಪರ್ಧಾಳುಗಳು ಪದಕ ಬೇಟೆಯಲ್ಲಿ ಅಗ್ರ ಸ್ಥಾನದಲ್ಲಿದ್ದಾರೆ. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಜಿಲ್ಲಾಡಳಿತ, ಜಿಪಂ ಹಾಗೂ ಸೈಕ್ಲಿಂಗ್ ಫೆಡರೇಶನ್ ಆಫ್ ಇಂಡಿಯಾ, ಕರ್ನಾಟಕ ರಾಜ್ಯ ಸೈಕ್ಲಿಂಗ್ ಸಂಸ್ಥೆ ಆಶ್ರಯದಲ್ಲಿ ಶುಕ್ರವಾರ ಆರಂಭಗೊಂಡ ರಾಷ್ಟ್ರೀಯ ಸೈಕ್ಲಿಂಗ್ ಚಾಂಪಿಯನ್ ಶಿಪ್‌ನಲ್ಲಿ ಮೊದಲ ದಿನವೇ ಕರ್ನಾಟಕದ ಸೈಕ್ಲಿಸ್ಟ್‌ಗಳು 3 ಚಿನ್ನ, ತಲಾ 2 ಬೆಳ್ಳಿ ಮತ್ತು ಕಂಚಿನ ಪದಕಗಳನ್ನು ಬಾಚಿಕೊಂಡರು.
ಸ್ಪರ್ಧೆಯ ಎರಡನೇ ದಿನವಾದ ಶನಿವಾರವೂ ಪದಕಗಳ ಗಳಿಕೆ ಮುನ್ನಡೆದಿದೆ. ಶನಿವಾರ ಆರರಲ್ಲಿಮೂರು ಸ್ಪರ್ಧೆಗಳ ಫಲಿತಾಂಶ ಪ್ರಕಟಗೊಂಡಿದ್ದು, ಕರ್ನಾಟಕದ ಸೈಕ್ಲಿಸ್ಟ್‌ಗಳಿಗೆ 1ಚಿನ್ನ, 2ಬೆಳ್ಳಿ ಹಾಗೂ1 ಕಂಚಿನ ಪದಕಗಳು ಒಲಿದು ಬಂದಿವೆ. ಎರಡು ದಿನಗಳಲ್ಲಿ ಒಟ್ಟು 4 ಚಿನ್ನ, 4 ಬೆಳ್ಳಿ ಮತ್ತು 3 ಕಂಚಿನಪದಕಗಳು ಕನ್ನಡಾಂಬೆಯ ಮುಡಿಗೇರಿವೆ. ಇತರೆರಾಜ್ಯಗಳಿಗೆ ಹೋಲಿಸಿದರೆ, ಕರ್ನಾಟಕದ ಪದಕಗಳೇ ಹೆಚ್ಚಿದ್ದು, ರವಿವಾರ ನಡೆಯುವ ಸ್ಪರ್ಧೆಗಳು ಕುತೂಹಲ ಕೆರಳಿಸಿದೆ.
ವಿಜೇತರ ವಿವರ: ಶನಿವಾರ ನಡೆದ 18 ವರ್ಷದೊಳಗಿನ ಬಾಲಕಿಯರ ವೈಯಕ್ತಿಕ 13.8 ಕಿ.ಮೀ. ಟೈಮ್ ಟ್ರಾಯಲ್ ವಿಭಾಗದಲ್ಲಿ ಕರ್ನಾಟಕದಅಕ್ಷತಾ ಬಿರಾದಾರ 1.04 ಗಂಟೆಯಲ್ಲಿ ಗುರಿ ತಲುಪಿಪ್ರಥಮ ಸ್ಥಾನ ಅಲಂಕರಿಸಿದರು. ಕೇರಳದ ಬಿನಿಲಾಮೊಲ್ ಗಿಬಿ 1.05 ಗಂಟೆ, ಕರ್ನಾಟಕದ ಸ್ಟಾರ್‌ನರಜರಿ1.07 ಗಂಟೆಯಲ್ಲಿ ಗುರಿ ತಲುಪಿ ಕ್ರಮವಾಗಿದ್ವಿತೀಯ-ತೃತೀಯ ಸ್ಥಾನ ಗಳಿಸಿದರು.ಪುರುಷರ 18.4 ಕಿ.ಮೀ. ಮಿಕ್ಸಡ್ ಟೀಮ್‌ರಿಲೇಯಲ್ಲಿ ಮಹಾರಾಷ್ಟ್ರದ ವಿಠಲ್ ಭೂಸಲೆ, ಭೀಮ ರೊಕಯಾ, ಪ್ರಣೀತಾ ಸೊಮನ್, ಪ್ರಿಯಾಂಕಾ ಕರಾಂಡೆ ಅವರ ತಂಡ 1.05 ಗಂಟೆಯಲ್ಲಿ ಗುರಿ ಮುಟ್ಟಿ ಪ್ರಥಮ ಸ್ಥಾನ ತಮ್ಮದಾಗಿಸಿಕೊಂಡರು. ಕರ್ನಾಟಕದ ವೈಶಾಕ ಕೆ.ವಿ., ಕೆ.ಕಿರಣ್ ಕುಮಾರ ರಾಜು, ಜೋಯಾÕ$° ನರಜರಿ, ದಾನೇಶ್ವರಿ ಪಾಯಣ್ಣವರ ತಂಡ 1.06 ಗಂಟೆ ಗುರಿ ತಲುಪಿ ದ್ವಿತೀಯ ಸ್ಥಾನ ಪಡೆದರು. ಉತ್ತರಾಖಂಡದ ರಮೇಶ ಭಾರತಿ, ಪ್ರಿಯಾಂಕಾ ಮೆಹತಾ, ಆಸ್ತಾ ಬಿಸ್ಟ್ ಮತ್ತು ಅರ್ಜುನ ರಾಠೊಡ ಅವರ ತಂಡ 1.13 ಗಂಟೆಯಲ್ಲಿ ಗುರಿ ತಲುಪಿ, ತೃತೀಯ ಸ್ಥಾನ ಗಳಿಸಿತು.
ಮಹಿಳೆಯರ 18.4 ಕಿ.ಮೀ. ವೈಯಕ್ತಿಕ ಟೈಮ್ ಟ್ರಾಯಲ್ ವಿಭಾಗದಲ್ಲಿ ಮಹಾರಾಷ್ಟ್ರದ ಪ್ರಣಿತಾ ಸೋಮನ್ 51.46 ನಿಮಿಷದಲ್ಲಿ ಮೊದಲಿಗರಾಗಿ ಗುರಿ ಮುಟ್ಟಿದರು. ಕರ್ನಾಟಕದ ಜೋಯಾ ನರಜರಿ 56.39 ನಿಮಿಷದಲ್ಲಿ, ಮಹಾರಾಷ್ಟ್ರದಪ್ರಿಯಾಂಕ ಕರಾಂಡೆ 57.06 ನಿಮಿಷದಲ್ಲಿ ಗುರಿ ತಲುಪಿ, ಕ್ರಮವಾಗಿ ದ್ವಿತೀಯ-ತೃತೀಯ ಸ್ಥಾನಕ್ಕೆ ಪಡೆದರು.
-ವೀರೇಂದ್ರ ನಾಗಲದಿನ್ನಿ