Advertisement

ಮಾತಿಗಿಂತ ಮೌನವೇ ಲೇಸು. ಆಕಸ್ಮಿಕ ಧನಾನುಕೂಲ: ಹೇಗಿದೆ ನಿಮ್ಮ ಇಂದಿನ ಗ್ರಹಬಲ ?

07:33 AM Feb 17, 2021 | Team Udayavani |

ಮೇಷ: ನೂತನ ಕಾರ್ಯಾರಂಭ, ವ್ಯಾಪಾರ, ವ್ಯವಹಾರಗಳ ಚಿಂತನೆ ಕಾರ್ಯಗತವಾಗುತ್ತದೆ. ಸಾಂಸಾರಿಕವಾಗಿ ಗೃಹಿಣಿಯ ಸಹಕಾರ ಸುಪ್ರಸನ್ನತೆಯಿಂದ ಸುಖ, ಶಾಂತಿ ಅನುಭವಕ್ಕೆ ಬರುವುದು. ಸಹನೆಯ ಅಗತ್ಯವಿದೆ.

Advertisement

ವೃಷಭ: ವಿದ್ಯಾರ್ಥಿಗಳ ಮನೋಕಾಮನೆ ಪೂರ್ಣಗೊಂಡಾವು. ಆರ್ಥಿಕವಾಗಿ ಎಷ್ಟೇ ಖರ್ಚು-ವೆಚ್ಚಗಳಿದ್ದರೂ ನಿರಂತರ ಧನಾಗಮನದಿಂದ ತೊಂದರೆ ಕಂಡುಬಾರದು. ಮನಸ್ಸಲ್ಲಿ ಎಣಿಸಿದ ಕಾರ್ಯಗಳೆಲ್ಲಾ ನೆರವೇರಲಿದೆ.

ಮಿಥುನ: ಅನಿರೀಕ್ಷಿತವಾಗಿ ಕಾರ್ಯಸಾಧನೆಯಾಗಿ ನಿಮಗೆ ಅಚ್ಚರಿ ತಂದೀತು. ಅವಿವಾಹಿತರ ವೈವಾಹಿಕ ಸಂಘಟನೆಗೆ ಪೂರಕವಾದ ಪ್ರಚೋದನೆ ಲಭಿಸೀತು. ಆಕಸ್ಮಿಕ ಧನಾನುಕೂಲವು ಕಂಡುಬರುವುದು.

ಕರ್ಕ: ಕೊಟ್ಟ ಸಾಲ ಮರಳುವಿಕೆಯಾಗಿ ವೃತ್ತಿರಂಗದ ಮಜಲನ್ನು ಬದಲಿಸಲಿದೆ. ನಿರುದ್ಯೋಗಿಗಳಿಗೆ ಉದ್ಯೋಗ ಅವಕಾಶಗಳು ತೋರಿಬಂದು ಸಮಾಧಾನವಾದೀತು. ಆರ್ಥಿಕವಾಗಿ ಹಲವು ಖರ್ಚುವೆಚ್ಚಗಳು ತೋರಿಬಂದಾವು.

ಸಿಂಹ: ಗೃಹದಲ್ಲಿ ಬಂಧುಗಳ ಆಗಮನ ಹಾಗೂ ಕುಟುಂಬದಲ್ಲಿ ದೇವತಾ ಕಾರ್ಯಗಳು ನಡೆದು ಸಂತಸವಾದೀತು. ನಿರುದ್ಯೋಗಿಗಳಿಗೆ ಈಗ ಉದ್ಯೋಗವು ದೊರಕಲಿದೆ. ಸ್ವಲ್ಪ ಪ್ರಯತ್ನ ಮಾಡಿರಿ. ಮುಂದಿನ ಯೋಜನೆಗೆ ನಾಂದಿ.

Advertisement

ಕನ್ಯಾ: ಉದ್ಯೋಗರಂಗದಲ್ಲಿ ನಿಮ್ಮ ದುಡಿಮೆಗೆ ಪ್ರಶಂಸೆ ಸಲ್ಲಲಿದೆ. ಆದರೂ ಸಹೋದ್ಯೋಗಿಗಳೊಂದಿಗೆ ತುಂಬಾ ಜಾಗ್ರತೆಯಿಂದ ವ್ಯವಹರಿಸಿರಿ. ಅವಿವಾಹಿತರಿಗೆ ವಿವಾಹ ಪ್ರಸ್ತಾಪಗಳು ಕೂಡಿಬಂದು ಶುಭಕಾರ್ಯ ನಡೆಯಲಿದೆ.

ತುಲಾ: ಇಂದಿನ ಸ್ಥಿತಿಯಲ್ಲಿ ನಿಮ್ಮ ಮನಸ್ಸನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವ ಅವಶ್ಯಕತೆ ಇದೆ. ಸಂಚಾರ ಆರೋಗ್ಯ ಜಾಗ್ರತೆ ಮಾಡುವುದು. ಹಿತೈಷಿ, ಹಿರಿಯರ ಮಾರ್ಗದರ್ಶನವನ್ನು ಪಾಲಿಸಿರಿ. ಸದುಪಯೋಗ ನಿಮ್ಮದಾಗಿರಲಿ.

ವೃಶ್ಚಿಕ: ಶೈಕ್ಷಣಿಕ ಕ್ಷೇತ್ರ ಹಾಗೂ ನ್ಯಾಯಾಲಯದ ವೃತ್ತಿಯವರಿಗೆ ವಿಶೇಷ ಲಾಭದಾಯಕ ಆದಾಯವಿರುತ್ತದೆ. ಕೃಷಿ ಕ್ಷೇತ್ರದಲ್ಲಿರುವವರಿಗೆ ಉತ್ತಮ ಆದಾಯ ಕಂಡುಬರುವುದು. ವೃತ್ತಿರಂಗದಲ್ಲಿ ಸುಧಾರಿಸಿಕೊಂಡು ಹೋಗಿರಿ.

ಧನು: ಸಾಂಸಾರಿಕವಾಗಿ ನೆಮ್ಮದಿಯ ದಿನಗಳಿವು. ಆಗಾಗ ಕಾರ್ಯವೈಫ‌ಲ್ಯದ ಅನುಭವವಾದರೂ ತಾಳ್ಮೆ ಸಮಾಧಾನದಿಂದ ಮುಂದುವರಿಯಿರಿ. ನೌಕರ ವರ್ಗಕ್ಕೆ ಹಣದ ಮುಗ್ಗಟ್ಟು ಕಂಡುಬಂದೀತು. ಅತೀ ಜಾಗ್ರತೆ ಮಾಡಿರಿ.

ಮಕರ: ವರ್ತಕ ವರ್ಗಕ್ಕೆ ಸ್ವಲ್ಪ ಬಿಡುವು ದೊರಕಲಿದೆ. ಅನಾವಶ್ಯಕವಾಗಿ ಖರ್ಚು-ವೆಚ್ಚಗಳೇ ಅಧಿಕವಾಗಲಿದೆ. ಸ್ವತಂತ್ರ ವೃತ್ತಿಯವರಿಗೆ ನಿರಂತರ ಆದಾಯವಿದ್ದರೂ ಋಣಭಾದೆ ತಪ್ಪದು. ಆರೋಗ್ಯದ ಬಗ್ಗೆ ಉದಾಸೀನತೆ ಬೇಡ.

ಕುಂಭ: ಪ್ರಯತ್ನಬಲವಿದ್ದರೂ ವಿಘ್ನದಿಂದಲೇ ಯಶಸ್ಸು ದೊರಕಲಿದೆ. ಆದಾಯದಲ್ಲಿ ಏರುಪೇರು

ಕಂಡುಬಂದೀತು. ಹೊಟೇಲ್‌ ಉದ್ಯಮದವರಿಗೆ ಸ್ವಲ್ಪ ಆದಾಯವು ಹೆಚ್ಚು ದೊರಕಲಿದೆ. ದುಡಿಮೆ ಕಠಿಣವಾದೀತು.

ಮೀನ: ಧನಾಗಮನಕ್ಕೆ ವಿಫ‌ುಲ ಅವಕಾಶಗಳಿದ್ದರೂ ನಿಮ್ಮ ಕಠಿಣ ಪ್ರಯತ್ನಬಲ, ಆತ್ಮವಿಶ್ವಾಸ ಕೂಡ ಫ‌ಲ ನೀಡಲಿದೆ. ಗೃಹದಲ್ಲಿ ಮಂಗಲಕಾರ್ಯದ ಮಾತುಕತೆ ಫ‌ಲ ನೀಡಲಿದೆ. ಮಾತಿಗಿಂತ ಮೌನವೇ ಲೇಸು.

Advertisement

Udayavani is now on Telegram. Click here to join our channel and stay updated with the latest news.

Next