ದಾವಣಗೆರೆ: ಜಿಲ್ಲೆಯಲ್ಲಿ ಸೋಮವಾರ 178 ಜನರಲ್ಲಿ ಹೊಸದಾಗಿ ಕೋವಿಡ್-19 ಸೋಂಕು ಪ್ರಕರಣಗಳು ಪತ್ತೆಯಾಗಿವೆ.
ಸೋಂಕಿನಿಂದ ಗುಣಮುಖರಾದ 108 ಜನರು ಡಿಸ್ಚಾರ್ಜ್ ಆಗಿದ್ದಾರೆ.
ದಾವಣಗೆರೆ ನಗರ ಮತ್ತು ತಾಲೂಕಿನ ಇತರೆ ಭಾಗದ 103, ಹರಿಹರದ 31, ಜಗಳೂರಿನ 9, ಚನ್ನಗಿರಿಯ 14, ಹೊನ್ನಾಳಿಯ 20 ಹಾಗೂ ಹೊರ ಜಿಲ್ಲೆಯ ಒಬ್ಬರು ಸೇರಿದಂತೆ 178 ಜನರು ಸೋಂಕಿಗೆ ಒಳಗಾಗಿದ್ದಾರೆ.
ದಾವಣಗೆರೆ ನಗರ ಮತ್ತು ತಾಲೂಕಿನ 52, ಹರಿಹರದ 29, ಜಗಳೂರಿನ 6, ಚನ್ನಗಿರಿಯ 11, ಹೊನ್ನಾಳಿಯ 8 ಹಾಗೂ ಹೊರ ಜಿಲ್ಲೆಯ ಇಬ್ಬರು ಸೇರಿದಂತೆ 108 ಜನರು ಕೋವಿಡ್ 19 ಸೋಂಕಿನಿಂದ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ.
ಜಿಲ್ಲೆಯಲ್ಲಿ ಒಟ್ಟು 16879 ಪ್ರಕರಣಗಳಲ್ಲಿ ಈವರೆಗೆ 15147 ಜನರು ಡಿಸ್ಚಾರ್ಜ್ ಆಗಿದ್ದಾರೆ. 243 ಜನರು ಮೃತಪಟ್ಟಿದ್ದಾರೆ. 1489 ಸಕ್ರಿಯ ಪ್ರಕರಣಗಳಿವೆ.