Advertisement

ದೋಸ್ತಿ ಯುಎಇ ನೆರವಿಗೆ ಇನ್ನಷ್ಟು ವೈದ್ಯಕೀಯ ಸಿಬಂದಿ ಕಳಿಸಿದ ಭಾರತ

04:32 PM Jun 02, 2020 | sudhir |

ಹೊಸದಿಲ್ಲಿ: ಕೋವಿಡ್‌-19 ಸಂಕಷ್ಟ ಕಾಲದಲ್ಲಿ ಮಧ್ಯಪ್ರಾಚ್ಯಗಳಿಗೆ ಭಾರತದ ನೆರವು ಇನ್ನಷ್ಟು ವಿಸ್ತಾರಗೊಂಡಿದೆ. ಅದರಲ್ಲೂ ಭಾರತದ ಆಪ್ತ ದೇಶಗಳಲ್ಲೊಂದಾದ ಯುಎಇಗೆ ವೈದ್ಯಕೀಯ ಸಿಬಂದಿಗಳನ್ನು ಕಳಿಸಿಕೊಡಲಾಗುತ್ತಿದ್ದು, ಎರಡನೇ ಹಂತದಲ್ಲಿ 172 ಮಂದಿಯನ್ನು ದಿಲ್ಲಿಯ ಯುಎಇ ರಾಯಭಾರ ಕಚೇರಿ ಮೂಲಕ ಕಳಿಸಿಕೊಡಲಾಗಿದೆ.

Advertisement

ಭಾರತೀಯ ಅಧಿಕಾರಿಗಳ ನೆರವಿನೊಂದಿಗೆ ಯುಎಇ ರಾಯಭಾರ ಕಚೇರಿ ಈ ವ್ಯವಸ್ಥೆ ಮಾಡಿದ್ದು, ಜೂ.2ರಂದು ಅವರು ಯುಎಇಗೆ ಪ್ರಯಾಣ ಬೆಳೆಸಿದ್ದಾರೆ.

ಇದಕ್ಕೂ ಮುನ್ನ ಮೇ 10ರಂದು 88 ಮಂದಿಯನ್ನು ಯುಎಇಗೆ ಕಳಿಸಿಕೊಡಲಾಗಿತ್ತು.
ವೈದ್ಯಕೀಯ ಸಿಬಂದಿಗಳ ತಂಡದಲ್ಲಿ ನರ್ಸ್‌ಗಳು, ವೈದ್ಯಕೀಯ ನಿರ್ವಾಹಕರು ಮುಂತಾದವರಿದ್ದಾರೆ. ಇವರನ್ನು ಬೆಂಗಳೂರು ವಿಮಾನ ನಿಲ್ದಾಣ ಮೂಲಕ ವಿಶೇಷ ವಿಮಾನದಲ್ಲಿ ಕರೆಸಿಕೊಳ್ಳಲಾಗಿದೆ. ಕೇರಳ, ಕರ್ನಾಟಕ, ಮಹಾರಾಷ್ಟ್ರದಲ್ಲಿರುವ ಏಸ್ತರ್‌ ಡಿಎಮ್‌ ಹಾಸ್ಪಿಟಲ್‌ ಸಮೂಹ ವೈದ್ಯಕೀಯ ಸಿಬಂದಿಯನ್ನು ಆಯ್ಕೆ ಮಾಡಿದೆ. ಮೊದಲ ಎರಡು ವಾರಗಳ ಕಾಲ ಇವರನ್ನು ಕ್ವಾರಂಟೈನ್‌ನಲ್ಲಿರಿಸಿ ಬಳಿಕ ವಿವಿಧ ಆಸ್ಪತ್ರೆಗಳಲ್ಲಿ ಕೆಲಸಕ್ಕೆ ನಿಯೋಜಿಸಲಾಗುತ್ತದೆ.

ಎರಡೂ ರಾಷ್ಟ್ರಗಳ ಗಟ್ಟಿಯಾದ ಬಾಂಧವ್ಯದಿಂದ ಈ ಕೆಲಸ ಸಾಧ್ಯವಾಗಿದೆ. ಸಮುದಾಯಕ್ಕೆ ನಿರಂತರ ಸೇವೆ ಸಲ್ಲಿಸುವ ಬದ್ಧತೆಯನ್ನು ಹೊಂದಿರುವ ಈ ವೈದ್ಯಕೀಯ ಸಿಬಂದಿಗೆ ನಾವು ಅಭಾರಿಗಳಾಗಿದ್ದೇವೆ ಎಂದು ದುಬಾಯಿ ಆರೋಗ್ಯ ಪ್ರಾಧಿಕಾರದ ಡಿ.ಜಿ. ಹುಮೈದ್‌ ಅಲ್‌ ಖತಾಮಿ ಅವರು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next