Advertisement

ದಕ್ಷಿಣ ಆಫ್ರಿಕಾದ ನೈಟ್‌ಕ್ಲಬ್‌ನಲ್ಲಿ 17 ಮಂದಿ ಶವವಾಗಿ ಪತ್ತೆ! ಕಾರಣ ನಿಗೂಢ

04:47 PM Jun 26, 2022 | Team Udayavani |

ದಕ್ಷಿಣ ಆಫ್ರಿಕಾ : ದಕ್ಷಿಣ ಆಫ್ರಿಕಾದ ದಕ್ಷಿಣ ನಗರ ಪೂರ್ವ ಲಂಡನ್‌ನಲ್ಲಿರುವ ನೈಟ್‌ಕ್ಲಬ್‌ ವೊಂದರಲ್ಲಿ ಭಾನುವಾರ ಬೆಳಗಿನ ಜಾವಾ ಕನಿಷ್ಠ 17 ಮಂದಿ ಶವವಾಗಿ ಪತ್ತೆಯಾಗಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

Advertisement

ಈ ಕುರಿತು ಹೇಳಿಕೆ ನೀಡಿರುವ ಅಲ್ಲಿನ ಪೊಲೀಸ್ ಅಧಿಕಾರಿ ಬ್ರಿಗೇಡಿಯರ್ ಥೆಂಬಿಂಕೋಸಿ ಕಿನಾನಾ “ಪೂರ್ವ ಲಂಡನ್‌ನಲ್ಲಿರುವ ಸೀನರಿ ಪಾರ್ಕ್‌ನಲ್ಲಿರುವ ಹೋಟೆಲ್ ಒಂದರಲ್ಲಿ ಹದಿನೇಳು ಮಂದಿ ಸಾವನ್ನಪ್ಪಿದ ಬಗ್ಗೆ ವರದಿ ಸಿಕ್ಕಿದೆ” ಯಾವ ಕಾರಣದಿಂದಾಗಿ ಸಾವು ಸಂಭವಿಸಿದೆ ಎಂಬ ಕುರಿತು ತನಿಖೆ ನಡೆಯುತ್ತಿದೆ ಎಂದು ಹೇಳಿದ್ದಾರೆ.

ಇನ್ನೂ ಕೆಲವು ಮೂಲಗಳ ಪ್ರಕಾರ ನೈಟ್ ಕ್ಲಬ್ ಒಳಗೆ ವಿಷಾ ಅನಿಲ ಸೋರಿಕೆಯಾಗಿದ್ದು ಇದರಿಂದ ಸಾವನ್ನಪ್ಪಿದ್ದಾರೆ ಅಲ್ಲದೆ ಸಾವನ್ನಪ್ಪಿದ ಎಲ್ಲರೂ ಅವರು ಕುಳಿತಿರುವ ರೀತಿಯಲ್ಲೇ ಇದ್ದಾರೆ ಹಾಗಾಗಿ ಇಲ್ಲಿ ವಿಷ ಅನಿಲ ಸೋರಿಕೆಯಾಗಿರಬಹುದು ಎಂದು ಕೆಲವರ ಹೇಳಿಕೆ.

ಸಾವನ್ನಪ್ಪಿದವರೆಲ್ಲರೂ ಹದಿನೆಂಟರಿಂದ ಇಪ್ಪತ್ತು ವರ್ಷದವರು ಎಂದು ಹೇಳಲಾಗಿದ್ದು, ಪೊಲೀಸರು ಈ ಕುರಿತು ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ : ಮಂಗಳೂರು ಪೊಲೀಸ್‌ ಕಮಿಷನರೆಟ್‌ ವ್ಯಾಪ್ತಿ: ಎಲ್ಲ ಠಾಣೆಗಳಲ್ಲಿಯೂ ಯುವ ಸಮಿತಿ ಅಸ್ತಿತ್ವಕ್ಕೆ 

Advertisement
Advertisement

Udayavani is now on Telegram. Click here to join our channel and stay updated with the latest news.

Next