Advertisement

ಪಾಕ್‌ನಿಂದ 17 ಭಾರತೀಯ ಬೆಸ್ತರ ಸೆರೆ; 3 ಬೋಟ್‌ ವಶ

07:12 PM Jan 20, 2018 | Team Udayavani |

ಕರಾಚಿ : ಪಾಕ್‌ ಸಮುದ್ರ ವ್ಯಾಪ್ತಿಯಲ್ಲಿ ಅಕ್ರಮ ಮೀನುಗಾರಿಕೆ ನಡೆಸಿದರೆನ್ನಲಾದ 17 ಭಾರತೀಯ ಬೆಸ್ತರನ್ನು ಪಾಕಿಸ್ಥಾನ ಬಂಧಿಸಿದ್ದು ಅವರ ಮೂರು ಬೋಟ್‌ಗಳನ್ನು ವಶಪಡಿಸಿಕೊಂಡಿದೆ.  ಇಲ್ಲಿನ ನ್ಯಾಯಾಲಯ ಬಂಧಿತರನ್ನು ಕಸ್ಟಡಿಗೆ ರಿಮಾಂಡ್‌ ಮಾಡಿದೆ. 

Advertisement

ಬಂಧಿತ ಬೆಸ್ತರಲ್ಲಿ ಹೆಚ್ಚಿನವರು ಗುಜರಾತ್‌ ರಾಜ್ಯದವರು. ಇವರನ್ನು ಪಾಕ್‌ ಸಮುದ್ರ ಭದ್ರತಾ ದಳದವರು ಬಂಧಿಸಿ ಕರಾಚಿ ಪೊಲೀಸರಿಗೆ ಒಪ್ಪಿಸಿದರು.

ಕಳೆದ ವಷ ಡಿ.28ರಂದು ಪಾಕಿಸ್ಥಾನ 145 ಮಂದಿ ಭಾರತೀಯ ಬೆಸ್ತರನ್ನು ಬಂಧ ಮುಕ್ತ ಗೊಳಿಸಿತ್ತು. ಅದಾಗಿ ಈಗ 17 ಬೆಸ್ತರು ಬಂಧಿತರಾಗಿದ್ದಾರೆ. 

2016ರ ಡಿಸೆಂಬರ್‌ ಮತ್ತು 2017ರ ಜನವರಿ ನಡುವೆ 12 ದಿನಗಳ ಅವಧಿಯಲ್ಲಿ ಪಾಕಿಸ್ಥಾನ 438 ಭಾರತೀಯ ಬೆಸ್ತರನ್ನು ಬಂಧಮುಕ್ತಗೊಳಿಸಿತ್ತು. 

Advertisement

Udayavani is now on Telegram. Click here to join our channel and stay updated with the latest news.

Next