Advertisement

 ಭೀಕರ ಅಪಘಾತ:ಯುಪಿಯಲ್ಲಿ ಬಸ್‌ ಪಲ್ಟಿಯಾಗಿ 17 ಮಂದಿ ದುರ್ಮರಣ 

10:46 AM Jun 13, 2018 | Team Udayavani |

ಮೈನ್‌ಪುರಿ:ಇಲ್ಲಿನ ತೀರ್ಥ್ ಪುರ್‌ನಲ್ಲಿ ಬುಧವಾರ ಬೆಳ್ಳಂಬೆಳಗ್ಗೆ   ಬಸ್ಸೊಂದು ರಸ್ತೆ ಡಿವೈಡರ್‌ಗೆ ಢಿಕ್ಕಿಯಾಗಿ ಪಲ್ಟಿಯಾಗಿ ಸಂಭವಿಸಿದ ಭೀಕರ ಅವಘಡದಲ್ಲಿ 17 ಮಂದಿ ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿದ್ದು,20ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.

Advertisement

ಬಸ್‌ನಲ್ಲಿ 60 ರಿಂದ 70 ಮಂದಿ ಇದ್ದು ಜೈಪುರ್‌ನಿಂದ ಫ‌ರುಕಾಬಾದ್‌ಗೆ ತೆರಳುತ್ತಿದ್ದರು ಎಂದು ತಿಳಿದು ಬಂದಿದೆ. 

ಮೃತರ ಪೈಕಿ 16 ಮಂದಿ ಪುರುಷರು ಮತ್ತು ಓರ್ವ ಮಹಿಳೆಯಾಗಿದ್ದು,ಹೆಚ್ಚಿನವರು ಇಟ್ಟಿಗೆ ಗೂಡುಗಳಲ್ಲಿ ಕೆಲಸ ಮಾಡುತ್ತಿದ್ದ ಕೂಲಿ ಕಾರ್ಮಿಕರು ಎಂದು ತಿಳಿದು ಬಂದಿದೆ. 

ಗಾಯಾಳುಗಳಿಗೆ ಸೈಫಾಯ್‌ನ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಮೂವರು ಗಂಭೀರ ಗಾಯಾಳುಗಳನ್ನು ಆಗ್ರಾದ ಆಸ್ಪತ್ರೆಗೆ ದಾಖಲಿಸಲಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next