Advertisement

ಚಾಮರಾಜನಗರ: ಜಿಲ್ಲೆಯಲ್ಲಿ ಇಂದು 17 ಪ್ರಕರಣಗಳು ದೃಢ ; ಬೆಂಗಳೂರಿಂದ ಬಂದ 7 ಮಂದಿಗೆ ಪಾಸಿಟಿವ್

08:37 PM Jul 15, 2020 | Hari Prasad |

ಚಾಮರಾಜನಗರ: ಜಿಲ್ಲೆಯಲ್ಲಿ ಇಂದು 17 ಹೊಸ ಕೋವಿಡ್ 19 ಪ್ರಕರಣಗಳು ವರದಿಯಾಗಿದೆ.

Advertisement

ಇದರಲ್ಲಿ 7 ಪ್ರಕರಣಗಳು ಬೆಂಗಳೂರಿನಿಂದ ಜಿಲ್ಲೆಗೆ ಹಿಂದಿರುಗಿ ಬಂದಿರುವವರದ್ದಾಗಿವೆ.

5 ಮಂದಿ ಕೋವಿಡ್ 19 ಸೋಂಕಿತರು ಇಂದು ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ.

ಇದರೊಂದಿಗೆ ಜಿಲ್ಲೆಯಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ ದ್ವಿಶತಕ ದಾಟಿದ್ದು, 205 ಪ್ರಕರಣಗಳಾಗಿವೆ. ಇವರಲ್ಲಿ 116 ಮಂದಿ ಬಿಡುಗಡೆಯಾಗಿದ್ದು, 86 ಸಕ್ರಿಯ ಪ್ರಕರಣಗಳಿವೆ. ಇದರಲ್ಲಿ ಮೂವರು ಐಸಿಯುನಲ್ಲಿದ್ದಾರೆ. ಇಂದು 1208 ಮಾದರಿಗಳನ್ನು ಪರೀಕ್ಷೆಗೊಳಪಡಿಸಲಾಗಿದ್ದು, ಅದರಲ್ಲಿ 1190 ನೆಗೆಟಿವ್ ಆಗಿವೆ.  ಇನ್ನೂ 1310 ಮಾದರಿಗಳ ಫಲಿತಾಂಶವನ್ನು ನಿರೀಕ್ಷಿಸಲಾಗುತ್ತಿದೆ.

ಇಂದು ವರದಿಯಾಗಿರುವ 17 ಪ್ರಕರಣಗಳಲ್ಲಿ, ಕೊಳ್ಳೇಗಾಲ ತಾಲೂಕಿನ 9, ಚಾಮರಾಜನಗರ ತಾಲೂಕಿನ 5, ಗುಂಡ್ಲುಪೇಟೆ ತಾಲೂಕಿನ 2, ಹನೂರು ತಾಲೂಕಿನ 1 ಪ್ರಕರಣಗಳಿವೆ.

Advertisement

ಕೊಳ್ಳೇಗಾಲ ತಾಲೂಕು: 16 ವರ್ಷದ ಬಾಲಕಿ ಪಾಳ್ಯ, 16 ವರ್ಷದ ಬಾಲಕ ಇಕ್ಕಡಹಳ್ಳಿ, 45 ವರ್ಷದ ವ್ಯಕ್ತಿ ಹರಳೆ, 35 ವರ್ಷದ ಮಹಿಳೆ ಕೊಳ್ಳೇಗಾಲ, 45 ವರ್ಷದ ಹೆಣ್ಣು, ಮಲ್ಲಹಳ್ಳಿ ಮಾಳ, 30 ವರ್ಷದ ಯುವತಿ ಹರಳೆ, 12 ವರ್ಷದ ಬಾಲಕ ಹರಳೆ, 65 ವರ್ಷದ ವೃದ್ಧೆ ಹರಳೆ, 35 ವರ್ಷದ ವ್ಯಕ್ತಿ ಹರಳೆ.

ಚಾಮರಾಜನಗರ ತಾಲೂಕು: 25 ವರ್ಷದ ಯುವತಿ ಅಂಕುಶರಾಯನಪುರ, 29 ವರ್ಷದ ಯುವಕ ವಿ.ಸಿ. ಹೊಸೂರು, 45 ವರ್ಷದ ವ್ಯಕ್ತಿ ಬಾಗಳಿ, 45 ವರ್ಷದ ವ್ಯಕ್ತಿ ನಾಗವಳ್ಳಿ. 58 ವರ್ಷದ ವ್ಯಕ್ತಿ, ಚಾಮರಾಜನಗರ.

ಗುಂಡ್ಲುಪೇಟೆ ತಾಲೂಕು: 65 ವರ್ಷದ ವೃದ್ಧೆ, ಜಾಕೀರ್ ಹುಸೇನ್ ನಗರ, ಗುಂಡ್ಲುಪೇಟೆ. 45 ವರ್ಷದ ವ್ಯಕ್ತಿ, ಗುಂಡ್ಲುಪೇಟೆ.

ಹನೂರು ತಾಲೂಕು: 44 ವರ್ಷದ ವ್ಯಕ್ತಿ, ಬಂಡಳ್ಳಿ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next