Advertisement
ಸದಸ್ಯ ಶಂಕರ್ ಖಟಾವ್‌ಕರ್, ಕಟ್ಟಡ ಪರವಾನಿಗೆ ಪಡೆಯಲು ಇರುವ ತೊಂದರೆ ನಿವಾರಿಸಿದರೆ ಆದಾಯ ಹೆಚ್ಚಾಗುತ್ತದೆ. ಬೀದಿ ದೀಪ ಕೊರತೆಯಿಂದ ನಗರದ ಬಹುಭಾಗ ಕತ್ತಲಲ್ಲಿದೆ. ಹೊಸ ಅಧಿಕಾರಿಗಳ ಆಗಮನದಿಂದ ಕಂದಾಯ ಶಾಖೆ ಸಿಬ್ಬಂದಿ ಜನರಿಗೆ ಸ್ಪಂದಿಸುತ್ತಿದ್ದಾರೆ ಎಂದರು.
Related Articles
Advertisement
ಬಿ.ಕೆ.ಸೈಯದ್ ರಹಮಾನ್, ಇಲ್ಲಿರುವ ವಿದ್ಯುತ್ ಎಂಜಿನಿಯರ್ ಶ್ವೇತಾ ಏನೂ ಉಪಯೋಗವಿಲ್ಲ. ಕಚೇರಿಗೆ ಬರುವುದೇ ಅಪರೂಪ ಎಂದಾಗ ಧ್ವನಿಗೂಡಿಸಿದ ನಗೀನಾ ಸುಭಾನ್‌ಸಾಬ್, ಕಚೇರಿಗೆ ಬಂದರೂ ಮೊಬೈಲ್‌ನಲ್ಲಿ ಕಾಲಕಳೆಯುತ್ತಾರೆ ಎಂದು ಆರೋಪಿಸಿದರು.
ಆರಂಭದಲ್ಲೇ ಸದಸ್ಯ ಸೈಯದ್ ಏಜಾಜ್, ಬಜೆಟ್ ಸಭೆಗೆ 7 ದಿನ ಮುಂಚೆ ನೋಟಿಸ್ ನೀಡಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿ ಸಭೆ ಬಹಿಷ್ಕರಿಸಿ ಹೊರನಡೆದರು. ಉಪಾಧ್ಯಕ್ಷೆ ಅಂಜಿನಮ್ಮ, ಪೌರಾಯುಕ್ತೆ ಎಸ್.ಲಕ್ಷ್ಮಿ, ರತ್ನಮ್ಮ, ಹಜರತ್ ಅಲಿ, ಎಂ.ಅಲ್ತಾಫ್, ವಿರುಪಾಕ್ಷಿ, ಅಂಬುಜಾ ರಾಜೊಳ್ಳಿ, ಪ್ರತಿಭಾ ಪಾಟೀಲ್, ನಗೀನಾ ಸುಭಾನ್‌ಸಾಬ್ ಇತರರಿದ್ದರು. ಸಭೆಗೂ ಮುನ್ನ ಹುತಾತ್ಮ ಯೋಧರಿಗೆ ಒಂದು ನಿಮಿಷ ಮೌನಾಚರಿಸಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಪ್ರಮುಖ ವೆಚ್ಚಗಳುಕೊಳವೆ ಬಾವಿ, ಕಿರು ನೀರು, ಶುದ್ಧ ಕುಡಿಯುವ ನೀರು ಘಟಕಕ್ಕೆ 2.20 ಕೋ.ರೂ., ಘನತ್ಯಾಜ್ಯ ನಿರ್ವಹಣೆಗೆ 1 ಕೋ., ಬೀದಿ ದೀಪಕ್ಕೆ 1 ಕೋ., ಪಿಡಬ್ಲ್ಯೂಡಿ ಸಹಯೋಗದಲ್ಲಿ ಹಳೆ ಪಿ.ಬಿ. ರಸ್ತೆ ವಿಭಜಕದಲ್ಲಿ ಬೀದಿ ದೀಪ ಹಾಗೂ ಪ್ರಮುಖ ವೃತ್ತಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಕೆಗಾಗಿ 1.45 ಕೋ., ರಸ್ತೆ ಚರಂಡಿ, ಪಾದಚಾರಿ ಮೇಲು ಸೇತುವೆಗಳಿಗಾಗಿ 10 ಕೋ., ಊರಮ್ಮ ದೇವಸ್ಥಾನದಿಂದ ಬಾಹರ್ ಮಕಾನ್ ನಡುವೆ ಮೇಲು ಸೇತುವೆಗಾಗಿ 2.50 ಕೋ., ಪಾರ್ಕ್ ಅಭಿವೃದ್ಧಿಗೆ 1 ಕೋ. ರೂ., ನಗರಸಭೆ ಹೊಸ ಕಟ್ಟಡ, ವಾಣಿಜ್ಯ ಮಳಿಗೆಗಳ ದುರಸ್ತಿಗೆ 2.40 ಕೋಟಿ ರೂ., ಸಾಮೂಹಿಕ ಶೌಚಾಲಯಕ್ಕಾಗಿ 30 ಲಕ್ಷ ರೂ., ವಿವಿಧ ಜನಾಂಗಗಳ ಸ್ಮಶಾನಗಳ ಕಾಂಪೌಂಡ್ ಹಾಗೂ ಮುಕ್ತಿಧಾಮ ವಾಹನ ಖರೀದಿಗೆ 20 ಲಕ್ಷ ರೂ., ಶೇ.24.10 ಯೋಜನೆಯಲ್ಲಿ ಎಸ್ಸಿ, ಎಸ್ಟಿ ವರ್ಗದವರ ಕಲ್ಯಾಣಕ್ಕಾಗಿ 75 ಲಕ್ಷ ರೂ., ಶೇ.7.25ರಲ್ಲಿ ಇತರೆ ಬಡ ಜನಾಂಗದವರ ಅಭಿವೃದ್ಧಿಗೆ 21 ಲಕ್ಷ ರೂ., ಶೇ.3ರಲ್ಲಿ ವಿಕಲಚೇತನರಿಗೆ 15 ಲಕ್ಷ ರೂ., ಕ್ರೀಡಾ ಚಟುವಟಿಕೆಗಾಗಿ 1 ಲಕ್ಷ ರೂ. ಸೇರಿದಂತೆ ಒಟ್ಟು 50.83 ಕೋಟಿ ರೂ. ವೆಚ್ಚ ನಿರೀಕ್ಷಿಸಲಾಗಿದೆ. ಪ್ರಮುಖ ಆದಾಯಗಳು
ಆಸ್ತಿ ತೆರಿಗೆ 3.64 ಕೋಟಿ ರೂ., ನೀರಿನ ಶುಲ್ಕ 6 ಲಕ್ಷ ರೂ., ವಾಣಿಜ್ಯ ಸಂಕೀರ್ಣದ ಬಾಡಿಗೆ 40 ಲಕ್ಷ ರೂ., ನೀರಿನ ಕಂದಾಯ .151 ಕೋ, ಉದ್ಯಮ ಪರವಾನಿಗೆಯ 7.5 ಲಕ್ಷ., ಎಸ್‌ಎಫ್‌ಸಿ, ನಲ್ಮ್, ವಿಶೇಷ ಅನುದಾನ, 14ನೇ ಹಣಕಾಸು ಯೋಜನೆ, ಬರಪರಿಹಾರ, ಕಚೇರಿ ಕಟ್ಟಡಕ್ಕಾಗಿ 1 ಕೋ.ರೂ. ಸೇರಿದಂತೆ ವಿವಿಧ ಮೂಲಗಳಿಂದ ಒಟ್ಟು 52.50 ಕೋ. ರೂ. ಆದಾಯ ನಿರೀಕ್ಷಿಸಲಾಗಿದೆ.