Advertisement

Crime: 4 ತಿಂಗಳಿನಲ್ಲಿ 1646 ಅಪರಾಧ ಪ್ರಕರಣ

03:01 PM May 26, 2024 | Team Udayavani |

ರಾಮನಗರ: ಜಿಲ್ಲೆಯಲ್ಲಿ ನಾಲ್ಕು ತಿಂಗಳ ಅವಧಿಯಲ್ಲಿ 1646 ಅಪರಾಧ ಪ್ರಕರಣಗಳ ದಾಖಲಾಗಿವೆ.

Advertisement

ಹೌದು.., ಪೊಲೀಸ್‌ ಇಲಾಖೆಯ ಜನವರಿಯಿಂದ ಏಪ್ರಿಲ್‌ ತಿಂಗಳ ವರೆಗೆ ನಡೆದಿರುವ ಅಪರಾಧ ಪ್ರಕರಣಗಳಿಗೆ ಸಂಬಂಧಿಸಿದಂತೆ ಬಿಡುಗಡೆ ಮಾಡಿರುವ ವರದಿಯಲ್ಲಿ ಈ ಸಂಗತಿ ಖಚಿತವಾಗಿದೆ.

ಬೆಂಗಳೂರು ನಗರಕ್ಕೆ ಹೊಂದಿಕೊಂಡಂತೆ ಇರುವ ರಾಮನಗರ ಜಿಲ್ಲೆ ಸಾಕಷ್ಟು ಬೆಳ ವಣಿಗೆ ಹೊಂದುತ್ತಿದ್ದು, ಇದರ ಜೊತೆಗೆ ಅಪರಾಧ ಪ್ರಕರಣಗಳು ಬೆಳೆಯುತ್ತಿವೆ. ನಾಲ್ಕು ತಿಂಗಳ ಅವಧಿಯಲ್ಲಿ ಅಪರಾಧ ಪ್ರಕರಣಗಳು ಒಂದೂವರೆ ಸಾವಿರದ ಗಡಿದಾಟಿರುವುದೇ ಇದಕ್ಕೆ ಉದಾಹರಣೆ.

ಜಿಲ್ಲೆಯಲ್ಲಿ ಜನವರಿಯಿಂದ ಏಪ್ರಿಲ್‌ವರೆಗೆ 1351 ಐಪಿಸಿ ಕಾಯಿದೆಗಳಡಿಯಲ್ಲಿ ಅಪರಾಧ ಪ್ರಕರಣಗಳು ದಾಖಲಾಗಿವೆ. ಇನ್ನು ಪೋಕ್ಸೋ ಸೇರಿದಂತೆ ವಿವಿಧ ವಿಶೇಷ ಕಾಯಿದೆಯಡಿಯಲ್ಲಿ 295 ಪ್ರಕರಣಗಳು ದಾಖಲಾಗಿವೆ. ಒಟ್ಟು 1646 ಅಪರಾಧ ಪ್ರಕರಣಗಳು ಜಿಲ್ಲೆಯ ವಿವಿಧ ಪೊಲೀಸ್‌ ಠಾಣೆಗಳ ವ್ಯಾಪ್ತಿಯಲ್ಲಿ ದಾಖಲಾಗಿವೆ.

ಏಪ್ರಿಲ್‌ ತಿಂಗಳಲ್ಲಿ 411 ಪ್ರಕರಣ: ಜಿಲ್ಲೆಯಲ್ಲಿ ಕಳೆದ ಏಪ್ರೀಲ್‌ ತಿಂಗಳಲ್ಲಿ 385 ಐಪಿಸಿ ಕಾಯಿದೆಯಡಿಯ ಪ್ರಕರಣಗಳು, 26 ವಿಶೇಷ ಕಾಯಿದೆಯಡಿಯ ಅಪರಾಧ ಪ್ರಕರಣಗಳು ದಾಖಲಾಗಿದ್ದು, ಒಟ್ಟು 411 ಪ್ರಕರಣಗಳು ದಾಖಲಾಗಿವೆ. ಪ್ರತಿ ತಿಂಗಳು ಸರಾಸರಿ 400ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗುತ್ತಿರುವುದು ಪೊಲೀಸ್‌ ಇಲಾಖೆಯ ವರದಿಯಿಂದ ಬಹಿರಂಗಗೊಂಡಿದೆ.

Advertisement

4 ತಿಂಗಳಲ್ಲಿ 16 ಕೊಲೆ: ಜನವರಿಯಿಂದ ಏಪ್ರಿಲ್‌ವರೆಗಿನ ಅವ ಯಲ್ಲಿ ಜಿಲ್ಲೆಯಲ್ಲಿ 16 ಕೊಲೆ ಪ್ರಕರಣಗಳು ದಾಖಲಾಗಿವೆ. ಏಪ್ರಿಲ್‌ ತಿಂಗಳಿನಲ್ಲಿ 5 ಕೊಲೆ ಪ್ರಕರಣಗಳು ವರದಿಯಾಗಿವೆ. 2023ರಲ್ಲಿ 37 ಕೊಲೆ ಪ್ರಕರಣಗಳು ದಾಖಲಾಗಿದ್ದವು. ಜಿಲ್ಲೆಯಲ್ಲಿ ನಾಲ್ಕು ತಿಂಗಳ ಅವಧಿಯಲ್ಲಿ 24 ಕೊಲೆ ಯತ್ನದ ಪ್ರಕರಣಗಳು ನಡೆದಿದ್ದು, ಏ.ತಿಂಗಳಲ್ಲಿ 8 ಪ್ರಕರಣಗಳು ದಾಖಲಾಗಿವೆ. 2023ರಲ್ಲಿ 76 ಕೊಲೆ ಯತ್ನ ಪ್ರಕರಣಗಳು ವರದಿಯಾಗಿತ್ತು.

49 ಮನೆಗಳವು, 159 ಕಳ್ಳತನ: ಈ ವರ್ಷದ ಮೊದಲ ನಾಲ್ಕು ತಿಂಗಳ ಅವ ಯಲ್ಲಿ ಕಳ್ಳತನ ಪ್ರಕರಣಗಳು ಹೆಚ್ಚಿರುವುದು ಪೊಲೀಸ್‌ ಇಲಾಖೆಯ ಅಂಕಿಅಂಶಗಳಿಂದ ಬಹಿರಂಗವಾಗಿದೆ. ನಾಲ್ಕು ತಿಂಗಳ ಅವ ಧಿಯಲ್ಲಿ 49 ಮನೆಕಳ್ಳತನ, 159 ಕಳ್ಳತನ ಪ್ರಕರಣಗಳು ದಾಖಲಾಗಿವೆ. 2023ರಲ್ಲಿ 184 ಮನೆ ಕಳವು ನಡೆದಿತ್ತು. ಇನ್ನು ನಾಲ್ಕು ತಿಂಗಳ ಅವ ಧಿಯಲ್ಲಿ 7 ಡಕಾಯಿತಿ,14 ರಾಬರಿಗಳು ನಡೆದಿವೆ. 2023ರಲ್ಲಿ 22 ಡಕಾಯಿತಿ, 39 ರಾಬರಿ ಪ್ರಕರಣಗಳು ದಾಖಲಾಗಿದ್ದವು.

ಮಹಿಳೆ ಮತ್ತು ಮಕ್ಕಳ ಮೇಲಿನ ದೌರ್ಜನ್ಯಗಳು: ಜಿಲ್ಲೆಯಲ್ಲಿ ಮಹಿಳೆಯರು ಮತ್ತು ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳಿಗೆ ಸಂಬಂಸಿದಂತೆ ನಾಲ್ಕು ತಿಂಗಳ ಅವ ಧಿಯಲ್ಲಿ 2 ಅತ್ಯಾಚಾರ ಪ್ರಕರಣಗಳು, 44 ಪೋಕ್ಸೋ ಪ್ರಕರಣ, 36 ಅಪ್ರಾಪ್ತರ ಮೇಲಿನ ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ.

2023ರಲ್ಲಿ119 ಪೋಕ್ಸೋ ಕಾಯಿದೆಯಡಿ ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳು, 104 ಅಪ್ರಾಪ್ತರ ಮೇಲಿನ ಅತ್ಯಾಚಾರ ಪ್ರಕರಣಗಳು ದಾಖಲಾಗಿದ್ದವು.

ಸೈಬರ್‌ ಕ್ರೈಂ ಪ್ರಮಾಣ ಸಹ ಹೆಚ್ಚಳ: 2023ರಲ್ಲಿ ಇಡೀ ವರ್ಷದಲ್ಲಿ ಜಿಲ್ಲಾದ್ಯಂತ 159 ಸೈಬರ್‌ ಕ್ರೈಂ ಪ್ರಕರಣಗಳು ದಾಖ ಲಾಗಿದ್ದವು. ಆದರೆ, ಈ ವರ್ಷ ನಾಲ್ಕು ತಿಂಗಳ ಅವ ಧಿಯಲ್ಲೇ 61 ಸೈಬರ್‌ ಕ್ರೈಂ ಪ್ರಕರಣಗಳು ದಾಖಲಾಗಿವೆ. ಇನ್ನು ಏಪ್ರಿಲ್‌ ತಿಂಗಳೊಂದರಲ್ಲೇ 21 ಸೈಬರ್‌ ಕ್ರೈಂ ಪ್ರಕರಣಗಳು ದಾಖಲಾಗಿದ್ದು, ಆನ್‌ಲೈನ್‌ನಲ್ಲಿ ವಂಚನೆಗೊಳಗಾಗುವ ಮಂದಿಯ ಸಂಖ್ಯೆ ದಿನೇ ದಿನೆ ಹೆಚ್ಚುತ್ತಿದೆ.

132 ಮಾರಣಾಂತಿಕ ಅಪಘಾತ: ಜಿಲ್ಲೆಯಲ್ಲಿ ಕಳೆದ ನಾಲ್ಕು ತಿಂಗಳ ಅವಧಿಯಲ್ಲಿ 578 ಅಪ ಘಾತಗಳು ಸಂಭವಿಸಿವೆ. ಇದರಲ್ಲಿ 137 ಮಾರಣಾಂತಿಕ ಅಪಘಾತಗಳು, 441 ಮಾರಣಾಂತಿ ಕವಲ್ಲದ ಅಪಘಾತಗಳು. ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್‌ ಹೈವೇನಲ್ಲಿ ಅಪಘಾತಗಳ ಪ್ರಮಾಣ ಕಡಿಮೆಯಾಗಿವೆಯಾದರೂ ಇತರ ರಸ್ತೆಗಳಲ್ಲಿ ಅಪಘಾತದ ಪ್ರಮಾಣ ಹೆಚ್ಚಾಗಿರುವುದು ಇದರಿಂದ ಬೆಳಕಿಗೆ ಬಂದಿದೆ. ಇನ್ನು ಏಪ್ರಿಲ್‌ ತಿಂಗಳೊಂದರಲ್ಲೇ 33 ಮಾರಣಾಂತಿಕ ಅಪಘಾತಗಳು, 137 ಮಾರಣಾಂತಿಕವಲ್ಲದ ಅಪಘಾತಗಳು ನಡೆದಿವೆ.

ಸು.ನಾ.ನಂದಕುಮಾರ್‌

Advertisement

Udayavani is now on Telegram. Click here to join our channel and stay updated with the latest news.

Next