Advertisement

16 ವರ್ಷಬಳಿಕ ತಾಯಿ ಮಡಿಲು ಸೇರಿದ ಮಗ!

12:50 PM Nov 21, 2021 | Team Udayavani |

ಮೂಡಲಗಿ: ಶ್ರೀಶೈಲ ಪಾದಯಾತ್ರೆಗೆ ಹೋಗಿದ್ದಾಗ ನಾಪತ್ತೆಯಾಗಿದ್ದ ಮಗ ಹದಿನಾರು ವರ್ಷಗಳ ಬಳಿಕ ತಾಯಿ ಮಡಿಲು ಸೇರಿದ ಘಟನೆ ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಹಳ್ಳೂರ ಗ್ರಾಮದಲ್ಲಿ ನಡೆದಿದೆ.

Advertisement

ಬಸವರಾಜ ಬಾಳಪ್ಪ ಗಡ್ಡಿ ಎಂಬ ಯುವಕ ನ.15ರಂದು ಸಿನಿಮೀಯ ರೀತಿಯಲ್ಲಿ ಹೆತ್ತವರ ಮಡಿಲು ಸೇರಿದ್ದಾನೆ. 2005ರ ಮಾರ್ಚ್‌ ತಿಂಗಳಲ್ಲಿ ಶ್ರೀಶೈಲ ಪಾದಯಾತ್ರೆಗೆ ಹೋಗಿದ್ದು, ಮರಳಿ ಬಾರದ ಮಗನ ಪತ್ತೆಗಾಗಿ ತಂದೆ-ತಾಯಿ ಇರುವ ಅಲ್ಪ ಸ್ವಲ್ಪ ಆಸ್ತಿ ಅಡವಿಟ್ಟು ಸಾಲ ಮಾಡಿ ಬಾಗಲಕೋಟೆ, ರಾಯಚೂರು ಸೇರಿ ಹಲವೆಡೆ ಹುಡುಕಿದ್ದರು. ಪ್ರಯೋಜನ ಆಗಿರಲಿಲ್ಲ. ಬಾಳಪ್ಪ ಹಾಗೂ ಮಹಾದೇವಿ ದಂಪತಿಗೆ ಒಬ್ಬನೇ ಮಗ ಹಾಗೂ ಮೂವರು ಪುತ್ರಿಯರು. ಅದರಲ್ಲಿ ಓರ್ವ ಪುತ್ರಿ ಅಂಗವಿಕಲೆ. ಅಣ್ಣ ನಾಪತ್ತೆಯಾದ ಹಿನ್ನೆಲೆ ಮನನೊಂದು ಆತನ ಬರುವಿಕೆಗಾಗಿ ಕಾದು ಕಾದು 2007ರಲ್ಲಿ ತೀರಿಕೊಂಡಳು. ಮಗ ನಾಪತ್ತೆ ಹಾಗೂ ಪುತ್ರಿ ಮೃತಪಟ್ಟಿದ್ದರಿಂದ ಮಾನಸಿಕವಾಗಿ ನೊಂದ ತಂದೆ ಬಾಳಪ್ಪ 2015ರಲ್ಲಿ ಮೃತಪಟ್ಟಿದ್ದರು.

ಮಗನ ಸುಳಿವು

ಹಳ್ಳೂರ ಗ್ರಾಮದ ಯಲ್ಲಪ್ಪ ಸನದಿ ಎಂಬ ಸಂಬಂಧಿ ತಾಲೂಕಿನ ನಾಗನೂರ ಗ್ರಾಮದವರು. ನಾಗನೂರಿನ ಸಂಬಂಧಿಕರು ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಜಾಲಿಹಾಳ ಗ್ರಾಮದವರು. ಯಾವುದೋ ವಿಚಾರಕ್ಕೆ ಚರ್ಚಿಸುವ ಸಂದರ್ಭದಲ್ಲಿ ಮುಂಡರಗಿ ತಾಲೂಕಿನ ಜಾಲಿಹಾಳ ಗ್ರಾಮದ ಭೀರಪ್ಪ ಫಕೀರಪ್ಪ ಹರಕಿ ಎಂಬುವರ ಮನೆಯಲ್ಲಿ ಯುವಕನಿರುವ ಮಾಹಿತಿ ಗೊತ್ತಾಗಿದೆ. ತಕ್ಷಣವೇ ತಾಯಿ ಕರೆದುಕೊಂಡು ಜಾಲಿ ಹಾಳ ಗ್ರಾಮದ ಭೀರಪ್ಪ ಅವರ ಮನೆ ಮುಂದೆ ಹೋದ ಸಂದರ್ಭ ಬಸವರಾಜ (33) ತಾಯಿಯನ್ನು ಗುರುತು ಹಿಡಿದು ಅಪ್ಪಿಕೊಂಡು ಕಣ್ಣೀರಿಟ್ಟು ಅವರ ಮಡಿಲು ಸೇರಿದ್ದಾನೆ. ಆದರೆ ಬಸವರಾಜ ಭೀರಪ್ಪ ಫಕೀರಪ್ಪ ಹರಕಿಯವರ ಮನೆಯಲ್ಲಿ 16 ವರ್ಷದಿಂದ ಮನೆ ಮಗನಾಗಿದ್ದ.

ಇದನ್ನೂ ಓದಿ:ಶೀಘ್ರ ಪರಿಹಾರ ಬಿಡುಗಡೆ: ರೇಣುಕಾಚಾರ್ಯ

Advertisement

ಕುಟುಂಬದವರ ಜತೆ ಪ್ರೀತಿ- ವಿಶ್ವಾಸದಿಂದಿದ್ದ ಎನ್ನಲಾಗಿದೆಕಣ್ಮುಂದೆಯೇ 16 ವರ್ಷದಿಂದ ಮಗನನ್ನು ಕಾಣದೇ ಎಷ್ಟೆಲ್ಲ ನೋವುಗಳು ಆ ಕುಟುಂಬಕ್ಕೆ ಆಗಿರಬೇಕು. ದೇವರ ದಯೆಯಿಂದ ಮುಪ್ಪಿನ ವಯಸ್ಸಿನಲ್ಲಿ ನಾಪತ್ತೆಯಾದ ಮಗ ಮತ್ತೆ ಸಿಕ್ಕಿದ್ದಾನೆ. ಇನ್ನು ಮಗನ ಮದುವೆ ಆಗಿಲ್ಲ, ಹೀಗಿರುವಾಗ ಆದಷ್ಟೂ ಶೀಘ್ರ ಮದುವೆ ಮಾಡಿ ಸೊಸೆ ಕಾಣುವ ಮಂದಹಾಸ ಆ ತಾಯಿ ಮುಖದಲ್ಲಿ ಮೂಡಿದೆ. -ಈರಪ್ಪ ಬನ್ನೂರ, ತಾಯಿ ಸಂಬಂಧಿಕರು

Advertisement

Udayavani is now on Telegram. Click here to join our channel and stay updated with the latest news.

Next