Advertisement

ಮಾಲೇಗಾಂವ್‌ ದಾಳಿ: 16 ತಲವಾರು, ಪಿಸ್ತೂಲು ವಶ, ನಾಲ್ವರ ಸೆರೆ

01:04 PM Mar 20, 2019 | udayavani editorial |

ನಾಶಿಕ್‌ : ಜಿಲ್ಲೆಯ ಮಾಲೇಗಾಂವ್‌ ಪಟ್ಟಣದಲ್ಲಿ ಇಂದು ಬುಧವಾರ ಪೊಲೀಸರು ಎರಡು ಪ್ರದೇಶಗಳಲ್ಲಿ ದಾಳಿ ನಡೆಸಿ 16 ತಲವಾರುಗಳು, ಒಂದು ನಾಡ ಪಿಸ್ತೂಲು ಮತ್ತು ಒಂದು ಸಜೀವ ಬುಲೆಟ್‌ ವಶಪಡಿಸಿಕೊಂಡರು. 

Advertisement

ಇದನ್ನು ಅನುಸರಿಸಿ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದರು. 

ಮಾಲೇಗಾಂವ್‌ ಕ್ರೈಮ್‌ ಬ್ರಾಂಚ್‌ ಪೊಲೀಸರು ಹಕೀಂ ನಗರ ಮತ್ತು ಮೊಮಿನ್‌ಪುರ ಪ್ರದೇಶದಲ್ಲಿ  ಇಂದು ಬೆಳಗ್ಗೆ  ದಾಳಿ ನಡೆಸಿದ್ದರು. ಬಂಧಿತ ಆರೋಪಿಗಳನ್ನು ಮೊಹಮ್ಮದ್‌ ಯಾಸಿನ್‌ ಮೊಹಮ್ಮದ್‌ ಶಕೀಲ್‌ (19) ಕಾಸಿ, ಅನ್ಸಾರಿ (20), ಬಶೀರ್‌ ಅಹ್ಮದ್‌ (22) ಮತ್ತು ಇಮ್ರಾನ್‌ ಖಾನ್‌ ಅಲಿಯಾಸ್‌ ಶೆಟ್ಟಿ (26) ಎಂದು ಗುರುತಿಸಲಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next