ಢಾಕಾ: ಬಸ್ ಪಲ್ಟಿಯಾಗಿ ಕಂದಕಕ್ಕೆ ಉರುಳಿದ ಪರಿಣಾಮ ಕನಿಷ್ಠ 16 ಮಂದಿ ಮೃತಪಟ್ಟು,30 ಮಂದಿ ಗಾಯಗೊಂಡಿರುವ ಘಟನೆ ಬಾಂಗ್ಲಾದೇಶದ ಮದರಿಪುರದ ಶಿಬ್ಚಾರ್ ಉಪಜಿಲಾದಲ್ಲಿ ಭಾನುವಾರ ( ಮಾ. 19 ರಂದು ನಡೆದಿದೆ.
ಮದರಿಪುರದ ಶಿಬ್ಚಾರ್ ಉಪಜಿಲಾದಲ್ಲಿರುವ ಕುತುಬ್‌ಪುರ್ ಪ್ರದೇಶದಲ್ಲಿ ಢಾಕಾಗೆ ತೆರಳುತ್ತಿದ್ದ ಬಸ್ ಪದ್ಮಾ ಸೇತುವೆಯ ಸಮೀಪವಿರುವ ರಸ್ತೆಯಿಂದ ಪಲ್ಟಿಯಾಗಿ ಕಂದಕಕ್ಕೆ ಉರುಳಿದೆ. ಘಟನೆಯಲ್ಲಿ ಕನಿಷ್ಠ 16 ಮಂದಿ ಮೃತಪಟ್ಟಿದ್ದಾರೆ. 30 ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಇದನ್ನೂ ಓದಿ: ಲಾರಿ – ಓಮ್ನಿ ಅಪಘಾತ: ಮಗು ಸೇರಿದಂತೆ 6 ಮಂದಿ ದಾರುಣ ಅಂತ್ಯ
ಅಗ್ನಿಶಾಮಕ ದಳ ಮತ್ತು ಪೊಲೀಸರು ಸ್ಥಳೀಯರ ಸಹಕಾರದಿಂದ ರಕ್ಷಣಾ ಕಾರ್ಯಾಚರಣೆಯನ್ನು ಮಾಡಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲಾಗಿದೆ ಪೊಲೀಸರು ಹೇಳಿದ್ದಾರೆ.
Related Articles
ʼಎಮದ್ ಪರಿಬಾಹನ್ʼ ಬಸ್ಸಿನ ಚಾಲಕ ನಿಯಂತ್ರಣ ಕಳೆದುಕೊಂಡ ಪರಿಣಾಮ ಬಸ್ ಕಂದಕಕ್ಕೆ ಉರುಳಿ ಬಿದ್ದಿದೆ ಎಂದು ವರದಿಯೊಂದು ತಿಳಿಸಿದೆ.