Advertisement

ಮಾರಮ್ಮದೇವಿ ಹುಂಡಿಯಲ್ಲಿ 16 ಲಕ್ಷ ಸಂಗ್ರಹ

04:13 PM May 17, 2019 | pallavi |

ಶ್ರೀರಂಗಪಟ್ಟಣ: ಪ್ರಸಿದ್ಧ ಆರತಿ ಉಕ್ಕಡದ ಅಹಲ್ಯದೇವಿ ಮಾರಮ್ಮನ ದೇವಾಲಯದಲ್ಲಿನ ಭಕ್ತರ ಕಾಣಿಕೆ ಹುಂಡಿ ಎಣಿಕೆ ಕಾರ್ಯ ದೇಗುಲ ಆಡಳಿತಾಧಿಕಾರಿ ತಹಶೀಲ್ದಾರ್‌ ನಾಗಪ್ರಶಾಂತ್‌ ಸಮ್ಮುಖದಲ್ಲಿ ನೆರವೇರಿತು.

Advertisement

ದೇವಾಲಯದ ಒಟ್ಟು 8 ಹುಂಡಿ ಎಣಿಕೆ ಮಾಡಲಾಗಿದ್ದು, 8 ಹುಂಡಿಗಳಲ್ಲಿ ಒಟ್ಟು ಮೊತ್ತ 16,52,186 ರೂ. ಸಂಗ್ರಹ ವಾಗಿದೆ. ನಿಮಿಷಾಂಬ ದೇವಾಲಯದ ಅಧೀಕ್ಷ ದಿನೇಶ್‌ ಸೇರಿದಂತೆ ಕಂದಾಯ ನಿರೀಕ್ಷಕರು, ಗ್ರಾಮ ಲೆಕ್ಕಿಗರು, ಸ್ತ್ರೀಶಕ್ತಿ ಮಹಿಳೆಯರು ಹಾಗೂ ದೇವಾಲಯದ ಸಿಬ್ಬಂದಿ ಎಣಿಕೆ ಕಾರ್ಯದಲ್ಲಿ ಭಾಗವಹಿಸಿದ್ದರು. ಕಾವೇರಿ ಗ್ರಾಮೀಣ ಬ್ಯಾಂಕಿನ ದೇವಾಲಯದ ಖಾತೆಗೆ ಹಣ ಜಮಾ ಮಾಡಲಾಗಿದೆ ಎಂದು ತಹಶೀಲ್ದಾರ್‌ ನಾಗಪ್ರಶಾಂತ್‌ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next