Advertisement

ಮಂಗಳೂರು:ಕಾರಿನ ಮೇಲೆ ಬಸ್‌ ಪಲ್ಟಿ;ಚಾಲಕ ಗಂಭೀರ 

03:32 PM Aug 01, 2018 | |

ಮಂಗಳೂರು: ನಗರದ ಹೊರವಲಯದ ಅಡ್ಯಾರ್‌ ಬಳಿ ಖಾಸಗಿ ಬಸ್ಸೊಂದರ ಟೈರ್‌ ಪಂಕ್ಚರ್‌ ಪರಿಣಾಮ ನಿಯಂತ್ರಣ ತಪ್ಪಿ ಕಾರಿನ ಮೇಲೆ ಪಲ್ಟಿಯಾದ ಘಟನೆ ಬುಧವಾರ ಬೆಳಗ್ಗೆ ನಡೆದಿದೆ. ಅವಘಡದಲ್ಲಿ ಕಾರು ಚಾಲಕ ಗಂಭೀರವಾಗಿ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. 

Advertisement

ನಿಯಂತ್ರಣದ ತಪ್ಪಿದ ಬಸ್‌ ಮೊದಲು ಡಿವೈಡರ್‌ಗೆ ಢಿಕ್ಕಿಯಾಗಿ ಕಾರಿನ ಮೇಲೆ ಬಿದ್ದಿದೆ. 16 ಮಂದಿ ಬಸ್‌ ಪ್ರಯಾಣಿಕರು ಸಣ್ಣ ಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. 

ಬಸ್‌ ಮಂಗಳೂರಿನಿಂದ, ಬಿ.ಸಿ.ರೋಡ್‌ನ‌ತ್ತ ಪ್ರಯಾಣ ಬೆಳೆಸಿತ್ತು. ಕಂಕನಾಡಿ  ಠಾಣೆಯಲ್ಲಿ  ಪ್ರಕರಣ ದಾಖಲಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next