Advertisement

ನಾಶಿಕ್‌ ಸಮೀಪ ಮುಕ್ತ ಪ್ರದೇಶದಲ್ಲಿ ಪಾರ್ಟಿ: 16 ಮಂದಿ ಬಂಧನ

04:33 PM Mar 19, 2018 | Team Udayavani |

ನಾಶಿಕ್‌ : ಇಗತಪುರಿ ಸಮೀಪ ತಲೇಗಾಂವ್‌ – ಶಿವಾರ್‌ ಎಂಬಲ್ಲಿ ಹೊಟೇಲ್‌ ಒಂದರ ಹೊರಗೆ ಮಧ್ಯ ರಾತ್ರಿಯ ವೇಳೆ ಮುಕ್ತ ಬಯಲಲ್ಲಿ ತಾರಕ ಧ್ವನಿಯಲ್ಲಿ  ಸಂಗೀತವನ್ನು ನುಡಿಸಿ ಮದ್ಯಪಾನ ಸೇವಿಸಿ ನರ್ತಿಸುತ್ತಾ ಪಾರ್ಟಿ ಮಾಡುತ್ತಿದ್ದ  ಆರು ಮಹಿಳೆಯರು ಸೇರಿದಂತೆ 16 ಜನರ ಗುಂಪೊಂದನ್ನು ಪೊಲೀಸರು ಬಂಧಿಸಿದ್ದಾರೆ.

Advertisement

ನಿನ್ನೆ ಭಾನುವಾರ ಸ್ಥಳೀಯ ಹೊಟೇಲ್‌ ಒಂದರ ಹೊರ ಭಾಗದಲ್ಲಿ ಮುಕ್ತ ಪ್ರದೇಶದಲ್ಲಿ ಮಧ್ಯ ರಾತ್ರಿಯ ವೇಳೆ ಈ ಗುಂಪು ಮದ್ಯ ಸೇವಿಸಿ ಪಾರ್ಟಿ ಮಾಡುತ್ತಿದ್ದಾಗ ಇವರ ಗುಲ್ಲು, ತಾರಕ ಸಂಗೀತವನ್ನು ಸಹಿಸಲಾಗದೆ ಸ್ಥಳೀಯರು ಪೊಲೀಸರಿಗೆ ದೂರು ನೀಡಿದ್ದರು. ಆ ಪ್ರಕಾರ ಸ್ಥಳಕ್ಕೆ ಧಾವಿಸಿ ಬಂದ ಪೊಲೀಸರು ಪಾರ್ಟಿ ನಡೆಸುತ್ತಿದ್ದ 16 ಮಂದಿಯನ್ನು ಬಂಧಿಸಿದರು ಎಂದು ವರದಿಯಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next