Advertisement
ಇದು ಕಂಡು ಬಂದಿದ್ದು ಬುಧವಾರ ತೋಟಗಾರಿಕೆ ವಿಜ್ಞಾನಗಳ ವಿಶ್ವ ವಿದ್ಯಾಲಯದ ಸಭಾಂಗಣದಲ್ಲಿ. ಬಿಎಸ್ಸಿ ತೋಟಗಾರಿಕೆಯಲ್ಲಿ ಇಡೀ ವಿವಿಗೆ ಪ್ರಥಮ ಸ್ಥಾನ ಪಡೆದ ಆ ಯುವತಿ, ಬರೋಬ್ಬರಿ 16 ಚಿನ್ನದ ಪದಕ ಕೊರಳಿಗೇರಿಸಿಕೊಂಡಿದ್ದಳು. ಈ ಯುವತಿ ಸಾಧನೆಗೆ ಸ್ವತಃ ರಾಜ್ಯಪಾಲ ಥಾವರಚಂದ್ ಗೆಹಲೋತ್ ಬೆನ್ನು ತಟ್ಟಿದ್ದಾರೆ.
Related Articles
Advertisement
ತೋಟಗಾರಿಕೆ ಶಿರಸಿ ಕಾಲೇಜಿಗೆ ಪ್ರವೇಶ ಪಡೆದ ವಿದ್ಯಾರ್ಥಿನಿ ಉಮ್ಮೆಸಾರಾ ವಿವಿಯ ಶಿಷ್ಯವೇತನಕ್ಕೂ ಆಯ್ಕೆಯಾಗಿದ್ದರು. ಆದರೆ, ಬಿಎಸ್ಸಿ ತೋಟಗಾರಿಕೆ ವಿಜ್ಞಾನ ಪೂರ್ಣಗೊಳಿಸಲು, ಗುಲ್ಲಂಪೇಟದ ಕೆನರಾ ಬ್ಯಾಂಕ್‌ನಲ್ಲಿ ಒಟ್ಟು 1 ಲಕ್ಷ ಶೈಕ್ಷಣಿಕ ಸಾಲ ಮಾಡಿದ್ದು, ಇನ್ನೂ 89 ಸಾವಿರ ಸಾಲ ಬಾಕಿ ಇದೆ.
ಇಟಲಿ ಶಿಕ್ಷಣಕ್ಕೆ ಹಣದ ಕೊರತೆ:16 ಚಿನ್ನದ ಪದಕ ಕೊರಳಿಗೇರಿಸಿಕೊಂಡ ಈ ಚಿನ್ನದ ಹುಡುಗಿ ಉಮ್ಮೆಸಾರಾಗೆ ತೋಟಗಾರಿಕೆ ಎಂಎಸ್ಸಿ ಕಲಿತು, ಸುಸ್ಥಿರ ಕೃಷಿಯಲ್ಲಿ ಸಂಶೋಧಕಿಯಾಗಬೇಕೆಂಬ ದೊಡ್ಡ ಗುರಿ ಇದೆ. ಇಟಲಿಯ ಪಡುವಾ ವಿಶ್ವ ವಿದ್ಯಾಲಯ ನಡೆಸುವ ಆನ್‌ಲೈನ್ ಪ್ರವೇಶ ಪರೀಕ್ಷೆಯಲ್ಲಿ ಜಾಗತಿಕ ಮಟ್ಟದಲ್ಲಿ 87ನೇ ರ್‍ಯಾಂಕ್ ಕೂಡ ಪಡೆದಿದ್ದಾಳೆ. ಇಟಲಿ ವಿವಿಗೆ ಪ್ರವೇಶ ಪಡೆಯಲು ಅರ್ಹತೆ ಪಡೆದಿದ್ದು, ಅಲ್ಲಿಗೆ ಹೋಗಿ ಎಂಎಸ್ಸಿ ಸುಸ್ಥಿರ ಕೃಷಿ ಅಧ್ಯಯನ ಮಾಡಲು ಸುಮಾರು 8ರಿಂದ 10 ಲಕ್ಷ ಹಣ ಬೇಕು. ಇದಕ್ಕಾಗಿ ಅದೇ ಕೆನರಾ ಬ್ಯಾಂಕ್‌ನಲ್ಲಿ ಶೈಕ್ಷಣಿಕ ಸಾಲ ಕೇಳಿದ್ದು ಅದು ರಿಜೆಕ್ಟ್ ಆಗಿದೆ. ನಾಲ್ಕು ಎಕರೆ ಹೊಲ ಒತ್ತೆ ಇಟ್ಟುಕೊಂಡು ಸಾಲ ಕೊಡಿ ಎಂದು ತಂದೆ ಹಸ್ಮತ್ ಅಲಿ ಕೇಳಿದ್ದು, ರೈತರಿಗೆ ಅಷ್ಟೊಂದು ಸಾಲ ಕೊಡಲು ಬರಲ್ಲ ಎಂದು ಬ್ಯಾಂಕ್‌ನವರು ಹೇಳಿದ್ದಾರೆ. ಹೀಗಾಗಿ ಮುಂದೇನು ಮಾಡಬೇಕೆಂಬ ಚಿಂತೆಯಲ್ಲಿ ಈ ವಿದ್ಯಾರ್ಥಿನಿಯ ಕುಟುಂಬವಿದೆ.
ಶ್ರೀಶೈಲ ಕೆ. ಬಿರಾದಾರ