Advertisement
ಶ್ರೀ ಗುರುದೇವ ಸೇವಾ ಬಳಗ ಪುಣೆಯ ಘಟಕವು ಸ್ಥಾಪನೆಗೊಂಡು 15 ವರ್ಷಗಳು ಕಳೆದಿವೆ. ಸ್ವಾಮೀಜಿಯವರ ಮುಖಾಂತರ, ಸಮಾಜಮುಖೀ ಸೇವಾ ಕಾರ್ಯಗಳು, ಬಡ ಜನರ ಉನ್ನತಿಗೆ ಸಹಕಾರ, ಶಿಕ್ಷಣ, ಆಯು ರ್ವೇದ ಔಷಧೋಪಚಾರ, ಧಾರ್ಮಿಕ, ಕಲಾ ಸೇವೆಗಳು ಇನ್ನಿತರ ಜನೋಪಯೋಗಿ ಸೇವಾ ಕಾರ್ಯಗಳು ನಮ್ಮ ತಾಯ್ನಾಡಿನಲ್ಲಿ ನಿರಂತರ ವಾಗಿ ನಡೆಯುತ್ತಿದೆ. ಈ ಕಾರ್ಯಗಳಿಗೆ ಪುಣೆಯ ಬಳಗದ ಮುಖಾಂತರ ಗುರು ಭಕ್ತರು ಹಲವಾರು ವರ್ಷಗಳಿಂದ ಸಹಕರಿಸುತ್ತಿದ್ದಾರೆ. ಒಡಿಯೂರು ಶ್ರೀಗಳ ಮೂಲಕ ಸಮಾಜ ಸೇವೆಯನ್ನು ಮನಃಪೂರ್ವಕವಾಗಿ ಮಾಡಿ ಕೊಂಡು ಬಂದಿದ್ದೇವೆ. ಈ ರೀತಿಯ ಸೇವೆ ಯಿಂದ ತೃಪ್ತಿಯನ್ನು ಪಡೆದಿದ್ದೇವೆ. ಇದು ಪ್ರತಿಷ್ಠೆಯ ಮಾತಲ್ಲ, ಸ್ವಾಮೀಜಿಯವರಿಗೆ ಸಮಾಜದ ಬಗ್ಗೆ ಇರುವ ತುಡಿತವನ್ನು ಶ್ರೀಕ್ಷೇತ್ರ ದಲ್ಲಿ ಕಾಣಬಹುದು. ಇಂತಹ ಕಾರ್ಯಗಳಲ್ಲಿ ಇನ್ನಷ್ಟು ಬಂಧುಗಳು ಪಾಲುದಾರರಾಗಬೇಕು. ಪುಣೆಯ ಎಲ್ಲ ತುಳು ಕನ್ನಡಿಗರ ಸಹಕಾರ ಇಂಥ ಕಾರ್ಯಗಳಿಗೆ ಸಿಗಬೇಕು ಎನ್ನುವುದೇ ನಮ್ಮ ಆಶಯವಾಗಿದೆ ಎಂದು ಅವರು ಹೇಳಿದರು.
Related Articles
Advertisement
ಬಳಗದ ಗೌರವ ಕಾರ್ಯದರ್ಶಿ ಎನ್. ರೋಹಿತ್ ಶೆಟ್ಟಿ ಅವರು ಸ್ವಾಗತಿಸಿ ಬಳಗದ 15ನೇ ವಾರ್ಷಿಕೋತ್ಸವದ ತಯಾರಿಯ ಬಗ್ಗೆ ಹಾಗು ಕಾರ್ಯಕ್ರಮದ ರೂಪುರೇಷೆಗಳು ಮತ್ತು ಸದಸ್ಯರು ನಿರ್ವಹಿಸಲಿರುವ ಜವಾಬ್ದಾರಿಗಳ ಬಗ್ಗೆ ಸಭೆಗೆ ತಿಳಿಸಿ, ಪುಣೆಯಲ್ಲಿ ಸ್ವಾಮೀಜಿಯವರ ನಾಲ್ಕು ದಿನಗಳ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿ ಎಲ್ಲರ ಸಹಕಾರ ಬಯಸಿದರು.
ಬಳಗದ ಪ್ರಮುಖರಾದ ಸಲಹೆಗಾರ ಉಷಾ ಕುಮಾರ್ ಶೆಟ್ಟಿ ಅವರು ಕಾರ್ಯಕ್ರಮದ ಖರ್ಚು ವಿವರವನ್ನು ಸಭೆಯಲ್ಲಿ ಮಂಡಿಸಿದರು. ಸಭೆಯಲ್ಲಿ ವಾರ್ಷಿಕೋತ್ಸವದ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಲಾಯಿತು. ಬಳಗದ ಪ್ರಮುಖರಾದ ಕೋಶಾಧಿಕಾರಿ ರಂಜಿತ್ ಶೆಟ್ಟಿ, ಉಮೇಶ್ ಶೆಟ್ಟಿ ಸ್ಲಿàಪ್ ವೆಲ್, ಸುಧಾಕರ ಶೆಟ್ಟಿ, ನಾಗರಾಜ್ ಶೆಟ್ಟಿ ಹಡಪ್ಸರ್, ಪ್ರಮೋದ್ ರಾವುತ್, ವಿಠuಲ್ ಶೆಟ್ಟಿ, ವಜ್ರಮಾತಾ ಮಹಿಳಾ ವಿಕಾಸ ಕೇಂದ್ರದ ಪ್ರಮುಖರಾದ ಜಯಲಕ್ಷಿ¾à ಪಿ. ಶೆಟ್ಟಿ, ಶೋಭಾ ಯು. ಶೆಟ್ಟಿ, ಪುಷ್ಪಾ ಎಲ್. ಪೂಜಾರಿ, ವೀಣಾ ಪಿ. ಶೆಟ್ಟಿ, ವೀಣಾ ಡಿ. ಶೆಟ್ಟಿ, ಸುಮನಾ ಎಸ್. ಹೆಗ್ಡೆ, ಸಂಧ್ಯಾ ಶೆಟ್ಟಿ, ರಜನಿ ಹೆಗ್ಡೆ, ಶ್ವೇತಾ ಎಚ್. ಮೂಡಬಿದಿರೆ ಹಾಗೂ ಇತರೆ ಸದಸ್ಯರು ತಮ್ಮ ಸಲಹೆಗಳನ್ನು ನೀಡಿದರು. ರೋಹಿತ್ ಶೆಟ್ಟಿ ವಂದಿಸಿದರು. ಚಿತ್ರ-ವರದಿ: ಹರೀಶ್ ಮೂಡಬಿದ್ರೆ ಪುಣೆ