Advertisement

ದ.ಕ.ರೈಲ್ವೇ ಅಭಿವೃದ್ಧಿಗೆ 5 ವರ್ಷಗಳಲ್ಲಿ  1,500 ಕೋ.ರೂ.

12:30 AM Feb 22, 2019 | Team Udayavani |

ಮಂಗಳೂರು: ಆಮೆಗತಿ ಯಲ್ಲಿದ್ದ ರೈಲ್ವೇ ಅಭಿವೃದ್ಧಿ ಕಾರ್ಯಗಳಿಗೆ ಪ್ರಧಾನಿ ಮೋದಿ ಅಧಿಕಾರ ಪಡೆದ ಅನಂತರ ಅಶ್ವಗತಿ ನೀಡಿದ್ದಾರೆ. 5 ವರ್ಷಗಳಲ್ಲಿ ದ.ಕ. ಜಿಲ್ಲೆಯ ವಿವಿಧ ರೈಲ್ವೇ ಅಭಿವೃದ್ಧಿ ಯೋಜನೆಗಳಿಗೆ ಕೇಂದ್ರ ಸರಕಾರ 1,500 ಕೋ.ರೂ. ಅನುದಾನ ಒದಗಿಸಿದೆ ಎಂದು ಸಂಸದ ನಳಿನ್‌ ಕುಮಾರ್‌ ಕಟೀಲು ಹೇಳಿದ್ದಾರೆ. 

Advertisement

ಬೆಂಗಳೂರು- ಬೆಂಗಳೂರು ನಡುವೆ ವಾರದಲ್ಲಿ 3 ಬಾರಿ ಸಂಚರಿಸುವ ಯಶವಂತಪುರ- ಮಂಗಳೂರು ಎಕ್ಸ್‌ಪ್ರೆಸ್‌ ರೈಲಿಗೆ ನಗರದ ಸೆಂಟ್ರಲ್‌ ರೈಲ್ವೇ ನಿಲ್ದಾಣದಲ್ಲಿ ಗುರುವಾರ ಹಸಿರು ನಿಶಾನೆ ತೋರಿ ಅವರು ಮಾತನಾಡಿದರು. 

ಕುಂಭ ಮೇಳದ ಹಿನ್ನೆಲೆಯಲ್ಲಿ ರೈಲುಗಳ ಕೊರತೆ ಇರುವುದರಿಂದ ಸದ್ಯ ಈ ರೈಲು ವಾರದಲ್ಲಿ 3 ದಿನ ಸಂಚರಿ ಸಲಿದೆ. ಮಾರ್ಚ್‌ ಬಳಿಕ ಪ್ರತಿದಿನ ಸಂಚರಿಸಲಿದೆ, ಜತೆಗೆ ಪ್ರಯಾಣಿಕರಿಗೆ ಅನುಕೂಲ ವಾಗುವಂತೆ ಸಮಯ ಬದಲಾವಣೆ ಮಾಡಲು ರೈಲ್ವೇ ಇಲಾಖೆ ಒಪ್ಪಿಗೆ ಸೂಚಿಸಿದೆ ಎಂದರು.

ವಿವಿಧ ಕಾಮಗಾರಿ
ಮಂಗಳೂರು ಜಂಕ್ಷನ್‌ನಿಂದ ತೋಕೂರು ವರೆಗೆ 327 ಕೋ.ರೂ. ವೆಚ್ಚದಲ್ಲಿ ಹಳಿ ದ್ವಿಪಥ, 18.93 ಕೋ.ರೂ. ವೆಚ್ಚದಲ್ಲಿ ನೇತ್ರಾವತಿ ಸೇತುವೆಯಿಂದ ಸೆಂಟ್ರಲ್‌ ರೈಲು ನಿಲ್ದಾಣದ ವರೆಗೆ ಹಳಿ ದ್ವಿಪಥ, ಮಂಗಳೂರು ಸೆಂಟ್ರಲ್‌ನಿಂದ ಜಂಕ್ಷನ್‌ವರೆಗೆ ಹಳಿ ದ್ವಿಪಥ, ಜಪ್ಪು-ಕುಡುಪಾಡಿ ಕೆಳ ಸೇತುವೆ, ಪಡೀಲ್‌-ಬಜಾಲ್‌ ಕೆಳ ಸೇತುವೆ, ಮಹಾಕಾಳಿಪಡು³ ಮೇಲು ಸೇತುವೆ ಕಾಮಗಾರಿಗೆ 25 ಕೋ.ರೂ.ಗೆ ಮಂಜೂರಾತಿ, 500 ಕೋ.ರೂ. ವೆಚ್ಚದಲ್ಲಿ ಸಕಲೇಶಪುರ-ಸುಬ್ರಹ್ಮಣ್ಯ ರೋಡ್‌ ರೈಲ್ವೇ ಹಳಿ ದ್ವಿಪಥ ಕಾಮಗಾರಿ ಸಹಿತ ವಿವಿಧ ರೈಲ್ವೇ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ ಎಂದರು. 

ನೈಋತ್ಯ ರೈಲ್ವೇ ಮೈಸೂರು ವಿಭಾಗದ ವತಿಯಿಂದ 22 ಕೋ.ರೂ.ಗಳ ಕಾಮಗಾರಿ ಪ್ರಗತಿ ಯ ಲ್ಲಿದ್ದು, 6 ಕೋ.ರೂ.ಗಳ ಕಾಮಗಾರಿ ಪೂರ್ಣಗೊಂಡಿದೆ. ಹಾಸನ -ಮಂಗಳೂರು ಭಾಗದಲ್ಲಿ ಮಾನವ ರಹಿತ ಲೆವೆಲ್‌ ಕ್ರಾಸಿಂಗ್‌, ಮೇಲ್ಸೇತುವೆ ನಿರ್ಮಾಣ ಪ್ರಗತಿ ಯಲ್ಲಿವೆ. ಮಂಗಳೂರು ರೈಲ್ವೇ ವಿಭಾಗ ಹಾಗೂ ಮಂಗಳೂರು ರೈಲು ನಿಲ್ದಾಣಕ್ಕೆ ಅಂ.ರಾ. ಸ್ಥಾನಮಾನ ನೀಡುವುದಕ್ಕೆ ಕಾನೂನು ತೊಡಕಿದ್ದು, ಪರಿಹರಿಸಿ ಕಾರ್ಯಾರಂಭಿಸಲು ಉದ್ದೇಶಿಸಲಾಗಿದೆ ಎಂದರು. 

Advertisement

ತಿರುಪತಿಯಿಂದ ಹಾಸನದ ವರೆಗೆ ಸಂಚರಿಸುತ್ತಿರುವ ನಿತ್ಯ ರೈಲನ್ನು ಮಂಗಳೂರು ಸೆಂಟ್ರಲ್‌ವರೆಗೆ ವಿಸ್ತರಿ ಸಲು ಇಲಾಖೆ ಒಪ್ಪಿಗೆ ನೀಡಿದೆ ಹಾಗೂ ಹಗಲು ಮಂಗಳೂರು -ಬೆಂಗಳೂರು ಮಧ್ಯೆ ಇಂಟರ್‌ಸಿಟಿ ರೈಲು ಓಡಾಟ (ಚಯರ್‌ ಕಾರ್‌) ನಡೆಸಲು ಕೂಡ ಮುಂದಾಗಿದೆ ಎಂದರು.
 
ಮೇಲ್ಸೇತುವೆ ವರ್ಷದೊಳಗೆ ಪೂರ್ಣ
250 ಕೋ.ರೂ. ವೆಚ್ಚದಲ್ಲಿ ಕುಳಾçಯಲ್ಲಿ ಮೀನುಗಾರಿಕೆ ಜೆಟ್ಟಿ, ಕುಲಶೇಖರ-ಕಾರ್ಕಳ ಹೆದ್ದಾರಿಗೆ ಸಪ್ಟೆಂಬರ್‌ನಲ್ಲಿ ಟೆಂಡರ್‌, ಕಟೀಲು -ಮೂಲ್ಕಿ-ಮುಡಿಪು ರಸ್ತೆ ನಿರ್ಮಾಣ ಭೂ ಸ್ವಾಧೀ® ‌ ಪ್ರಕ್ರಿಯೆ ಆರಂಭವಾಗಿದೆ. ತಲಪಾಡಿಯಿಂದ ಗೋವಾವರೆಗೆ ಬಿಒಟಿ ಆಧಾರದಲ್ಲಿ ಮೇಲ್ಸೇ ತುವೆ ನಿರ್ಮಾಣಕ್ಕೆ ನವ ಯುಗ ಕಂಪನಿಗೆ ಗುತ್ತಿಗೆ ನೀಡ ಲಾಗಿತ್ತು. ಪಂಪ್‌ವೆಲ್‌ ಕಾಮಗಾರಿ ವಿಳಂಬಕ್ಕೆ ವೃತ್ತ ತೆರವಿಗೆ ಮಂಗಳೂರು ಪಾಲಿಕೆ ವಿಳಂಬಿಸಿದ್ದೇ ಕಾರಣ. ಫೆ. 26ರಂದು ಹೆದ್ದಾರಿ ಇಲಾಖೆ ಜಂಟಿ ಕಾರ್ಯದರ್ಶಿ ಸಮೀಕ್ಷೆ ನಡೆಯ ಲಿದ್ದು, ವರ್ಷದೊಳಗೆ ಪೂರ್ಣ ಗೊಳಿಸ ಲಾಗುವುದು ಎಂದರು. 

ಶಾಸಕ ಡಿ. ವೇದವ್ಯಾಸ ಕಾಮತ್‌, ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಮೇಯರ್‌ ಭಾಸ್ಕರ ಕೆ., ನೈಋತ್ಯ ರೈಲ್ವೇ ವಿಭಾಗೀಯ ಪ್ರಬಂಧಕಿ ಅಪರ್ಣಾ ಗರ್ಗ್‌, ಪಾಲಾ^ಟ್‌ ರೈಲ್ವೆ ವಿಭಾಗದ ವಿಭಾಗೀಯ ಸಹಾಯಕ ಪ್ರಬಂಧಕ ಸಾಯಿಬಾಬ ಉಪಸ್ಥಿತರಿದ್ದರು. 

3 ಯೋಜನೆಗಳಿಗೆ ಶಿಲಾನ್ಯಾಸ
ಕಬಕ ಪುತ್ತೂರು ರೈಲು ನಿಲ್ದಾಣದಲ್ಲಿ 1.61 ಕೋ.ರೂ. ವೆಚ್ಚದಲ್ಲಿ ಪ್ಲ್ಯಾಟ್‌ಫಾರಂ 1, 2ರ ವಿಸ್ತರಣೆ ಮತ್ತು ಎತ್ತರ ಮಾಡುವ ಕಾಮಗಾರಿ ಹಾಗೂ ಬಂಟ್ವಾಳ ರೈಲು ನಿಲ್ದಾಣದಲ್ಲಿ 4.33 ಕೋ.ರೂ. ವೆಚ್ಚದಲ್ಲಿ ಪ್ಲ್ರಾಟ್‌ಫಾರಂ 1ರ ವಿಸ್ತರಣೆ ಮತ್ತು ಎತ್ತರ ಮಾಡುವ ಕಾಮಗಾರಿಗೆ ಗುರುವಾರ ಸಂಸದ ನಳಿನ್‌ ಕುಮಾರ್‌ ಕಟೀಲು ಶಂಕುಸ್ಥಾಪನೆ ನೆರವೇರಿಸಿದರು. ಜತೆಗೆ ಸುಬ್ರಹ್ಮಣ್ಯ ರೋಡ್‌ ನಿಲ್ದಾಣದಲ್ಲಿ 2.46 ಕೋ.ರೂ. ವೆಚ್ಚದ ಪಾದಚಾರಿ ಮೇಲ್ಸೇತುವೆ ನಿರ್ಮಾಣಕ್ಕೂ ಶಿಲಾನ್ಯಾಸ ನೆರವೇರಿಸಲಾಯಿತು.  

ಇಂದಿನಿಂದ ಸಂಚಾರ ಆರಂಭ
ಯಶವಂತಪುರ-ಮಂಗಳೂರು ಎಕ್ಸ್‌ಪ್ರೆಸ್‌ ರೈಲಿಗೆ ಗುರುವಾರ ಚಾಲನೆ ನೀಡಲಾಯಿತಾದರೂ ಸಂಚಾರ ಶುಕ್ರವಾರದಿಂದ ಆರಂಭವಾಗಲಿದೆ. ಶುಕ್ರವಾರ ರಾತ್ರಿ 7 ಗಂಟೆಗೆ ಮಂಗಳೂರು ಸೆಂಟ್ರಲ್‌ನಿಂದ ಹೊರಡುವ ರೈಲು ಶನಿವಾರ ಬೆಳಗ್ಗೆ 5ಕ್ಕೆ ಯಶವಂತಪುರ ತಲುಪಲಿದೆ. ರವಿವಾರ, ಮಂಗಳವಾರ ಮತ್ತು ಗುರುವಾರ ಬೆಂಗಳೂರಿನಿಂದ ಸಂಜೆ 4.30ಕ್ಕೆ ರೈಲು ಹೊರಡಲಿದೆ. ಶ್ರವಣಬೆಳಗೊಳ- ಹಾಸನವಾಗಿ ಸಕಲೇಶಪುರಕ್ಕೆ ರಾತ್ರಿ 9.05ಕ್ಕೆ ತಲುಪಲಿದೆ. ರಾತ್ರಿ 12.25ಕ್ಕೆ ಸುಬ್ರಹ್ಮಣ್ಯ, 1.13ಕ್ಕೆ ಕಬಕ ಪುತ್ತೂರು, 1.43ಕ್ಕೆ ಬಂಟ್ವಾಳ ಹಾಗೂ 3.13ಕ್ಕೆ ಮಂಗಳೂರು ಜಂಕ್ಷನ್‌ ಹಾಗೂ ಮುಂಜಾನೆ 4ಕ್ಕೆ ಮಂಗಳೂರು ಸೆಂಟ್ರಲ್‌ ತಲುಪುತ್ತದೆ. ಸೋಮವಾರ, ಬುಧವಾರ ಹಾಗೂ ಶುಕ್ರವಾರ ಮಂಗಳೂರು ಸೆಂಟ್ರಲ್‌ನಿಂದ ರಾತ್ರಿ 7ಕ್ಕೆ ಹೊರಡಲಿದ್ದು, 7.14ಕ್ಕೆ ಮಂಗಳೂರು ಜಂಕ್ಷನ್‌, 7.48ಕ್ಕೆ ಬಂಟ್ವಾಳ, 8.16ಕ್ಕೆ ಕಬಕ ಪುತ್ತೂರು, 9ಕ್ಕೆ ಸುಬ್ರಹ್ಮಣ್ಯ, 11.35ಕ್ಕೆ ಸಕಲೇಶಪುರ ತಲುಪಿ ಹಾಸನ, ಶ್ರವಣಬೆಳಗೊಳವಾಗಿ ಮುಂಜಾನೆ 5 ಗಂಟೆಗೆ ಯಶವಂತಪುರ ತಲುಪಲಿದೆ.   

Advertisement

Udayavani is now on Telegram. Click here to join our channel and stay updated with the latest news.

Next