Advertisement

150 ಟ್ರಂಚ್‌ ನಿರ್ಮಿಸಿದ ಕೂಲಿ ಕಾರ್ಮಿಕರು

01:34 PM Apr 25, 2021 | Team Udayavani |

ಕನಕಗಿರಿ: ತಾಲೂಕಿನ ಹುಲಿಹೈದರ್‌ಗ್ರಾಮ ಪಂಚಾಯತ್‌ ವ್ಯಾಪ್ತಿಯಹೊಸಗುಡ್ಡ ಗ್ರಾಮದ ಅರಣ್ಯಪ್ರದೇಶದಲ್ಲಿ ಎಸ್‌ ಎಂಸಿ (ಮಣ್ಣುಮತ್ತು ತೇವಾಂಶ ಸಂರಕ್ಷಣೆ)ಕಾಮಗಾರಿಯಡಿ 150 ಟ್ರಂಚ್‌ಗಳನ್ನುನಿರ್ಮಾಣ ಮಾಡಿದ್ದು, ಮಳೆಯಾದರೆಹೆಚ್ಚಿನ ಅನುಕೂಲವಾಗಲಿದೆ ಎಂದುತಾಪಂ ಇಒ ಡಾ| ಡಿ. ಮೋಹನ್‌ಹೇಳಿದರು.

Advertisement

ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿಮಾತನಾಡಿದ ಅವರು, ಇದೇ ಏಪ್ರಿಲ್‌ತಿಂಗಳಲ್ಲಿ ಈ ಅರಣ್ಯ ಪ್ರದೇಶದಲ್ಲಿಉದ್ಯೋಗ ಖಾತ್ರಿ ಯೋಜನೆಯಡಿ15 ಅಡಿ ಉದ್ದ, 6 ಅಡಿ ಅಗಲ ಹಾಗೂ3 ಅಡಿ ಆಳವಿರುವ ಒಟ್ಟು 150ಟ್ರಂಚ್‌ಗಳನ್ನು ಕೂಲಿ ಕಾರ್ಮಿಕರುತೆಗೆದಿದ್ದಾರೆ.

ಹೊಸಗುಡ್ಡ ಗ್ರಾಮದ110 ಜನ ಕೂಲಿ ಕಾರ್ಮಿಕರು, 11ದಿನಗಳ ಕಾಲ ಕೆಲಸ ನಿರ್ವಹಿಸಿ1210 ಮಾನವ ದಿನಗಳನ್ನು ಸೃಜನೆಮಾಡಿದ್ದಾರೆ. ಮಳೆ ಬಂದರೆ ಈಟ್ರಂಚ್‌ಗಳ ಮೂಲಕ ನೀರುಇಂಗಲಿದೆ.

ಇದರಿಂದ ಮಣ್ಣು ಮತ್ತುತೇವಾಂಶ ಸಂರಕ್ಷಣೆಗೆ ಸಹಕಾರಿಆಗಲಿದೆ ಎಂದರು.ಅರಣ್ಯ ಪ್ರದೇಶವೂ ಬಹಳಗಟಿxಯಾಗಿದ್ದು, ಕಲ್ಲಿನಿಂದ ಕೂಡಿದೆ.ಇಂತಹ ಪ್ರದೇಶದಲ್ಲೂ ನರೇಗಾ ಕೂಲಿಕಾರ್ಮಿಕರು ಯಾವುದಕ್ಕೂ ಹಿಂದೇಟುಹಾಕದೇ ನಿಗದಿತ ದಿನಗಳಲ್ಲಿ ನಿಗದಿತಕೆಲಸವನ್ನು ಅಚ್ಚುಕಟ್ಟಾಗಿ ಮಾಡಿ ಸೈಎನಿಸಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next