Advertisement
ಹಿಂದೆ ಕಂಬಳದ ವಿರುದ್ಧ ಪಿತೂರಿ ಉಂಟಾದಾಗ ಕಂಬಳ ಉಳಿಯಬೇಕು ಎಂದು ಹೋರಾಡಿದ್ದೆವು, ಆ ಹೋರಾಟವೇ ಮಂಗಳೂರು ಕಂಬಳಕ್ಕೆ ಸ್ಫೂರ್ತಿ. ಎಲ್ಲರಿಗೂ ಕಂಬಳ ನೋಡುವ ಅವಕಾಶ ಹಾಗೂ ತುಳುನಾಡಿನ ಇತಿಹಾಸ, ಪರಂಪರೆ, ಸಂಪ್ರದಾಯಗಳನ್ನು ಅರಿಯ ಬಹುದು ಎಂಬುದೇ ನಮ್ಮ ಉದ್ದೇಶ ಎಂದು ಮಂಗಳೂರು ಕಂಬಳ ಸಮಿತಿಯ ಅಧ್ಯಕ್ಷ ಕ್ಯಾಪ್ಟನ್ ಬೃಜೇಶ್ ಚೌಟ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
Related Articles
ಕನೆಹಲಗೆ, ಅಡ್ಡ ಹಲಗೆ, ಹಗ್ಗ ಹಿರಿಯ, ನೇಗಿಲು ಹಿರಿಯ, ಹಗ್ಗ ಕಿರಿಯ ಮತ್ತು ನೇಗಿಲು ಕಿರಿಯ ಹೀಗೆ 6 ವಿಭಾಗಗಳಲ್ಲಿ ಬಹುಮಾನಗಳಿದ್ದು, ಸುಮಾರು 150 ಜೋಡಿ ಕೋಣಗಳು ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದು ಚೌಟ ತಿಳಿಸಿದರು. ಕಂಬಳದ ಬಗ್ಗೆ ವಿದ್ಯಾರ್ಥಿಗಳು, ಯುವಜನರಲ್ಲಿ ಅರಿವು ಮೂಡಿಸಲು ವಿವಿಧ ಸ್ಪರ್ಧೆಗಳನ್ನೂ ಆಯೋ ಜಿಸಲಾಗಿದೆ. ಈ ಬಾರಿ ಕೋಣಗಳನ್ನು ಕರೆಗೆ ಇಳಿಸಲು ಟೈಮರ್ ಅಳವಡಿಸಿದ್ದು, 24 ಗಂಟೆಯೊಳಗಾಗಿ ಕಂಬಳ ಮುಗಿಸಲು ಸಿದ್ಧತೆ ಮಾಡಲಾಗಿದೆ ಎಂದು ಸಮಿತಿಯ ಗೌರವ ಸಲಹೆಗಾರ ವಿಜಯ್ ಕುಮಾರ್ ಕಂಗಿನಮನೆ ವಿವರಿಸಿದರು.
ಸಮಿತಿ ಪ್ರಧಾನ ಕಾರ್ಯದರ್ಶಿ ಸುಜಿತ್ ಪ್ರತಾಪ್, ಸಂಚಾಲಕ ಸಾಂತ್ಯಗುತ್ತು ಸಚಿನ್ ಶೆಟ್ಟಿ, ಕೋಶಾಧಿಕಾರಿ ತಲಪಾಡಿ ದೊಡ್ಡಮನೆ ಪ್ರೀತಮ್ ರೈ, ಉಪಾಧ್ಯಕ್ಷರಾದ ಸಂಜಯ್ ಪ್ರಭು, ಈಶ್ವರ್ ಪ್ರಸಾದ್ ಶೆಟ್ಟಿ, ಅಜಿತ್ ಬೋಪಯ್ಯ ಉಪಸ್ಥಿತರಿದ್ದರು.
Advertisement
ಕಂಬಳ ಕಾವೇರುವುದು ರಾತ್ರಿಹೊರ ಜಿಲ್ಲೆಗಳ ಕಂಬಳಾಸಕ್ತರು ಕಂಬಳ ಪ್ರಕ್ರಿಯೆಯ ಸೂಕ್ತ ಮಾಹಿತಿ ಇಲ್ಲದ ಕಾರಣ ಸಾಮಾನ್ಯವಾಗಿ ಮಧ್ಯಾಹ್ನದ ವೇಳೆಗೆ ಆಗಮಿಸುತ್ತಾರೆ. ಆದರೆ ಆಗ ವಿಶೇಷ ಏನೂ ಇರದು. ರಾತ್ರಿ ವೇಳೆಗೆ ಕಂಬಳದ ನಿರ್ಣಾಯಕ ಓಟಗಳು ನಡೆಯುವುದರಿಂದ ಅದೇ ಸೂಕ್ತ ಸಮಯ ಎಂದು ಕ್ಯಾ| ಬೃಜೇಶ್ ಚೌಟ ತಿಳಿಸಿದ್ದಾರೆ.