Advertisement

ಇನ್ನೂ 150 ಕಿ.ಮೀ. ವೈಟ್‌ಟಾಪಿಂಗ್‌

11:27 AM Feb 14, 2018 | Team Udayavani |

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಕೈಗೊಂಡಿರುವ ವೈಟ್‌ ಟಾಪಿಂಗ್‌ ಮತ್ತಷ್ಟು ರಸ್ತೆಗಳಿಗೆ ವಿಸ್ತರಣೆಯಾಗಲಿದ್ದು, ರಾಜ್ಯ
ಬಜೆಟ್‌ನಲ್ಲಿ 150 ಕಿ.ಮೀ. ರಸ್ತೆ ಮಾರ್ಗದಲ್ಲಿ ಯೋಜನೆ ಜಾರಿ ಘೋಷಣೆಯಾಗಲಿದೆ. ಸುಮಾರು ಒಂದು ಸಾವಿರ ಕೋಟಿ ರೂ. ಮೊತ್ತದ ಯೋಜನೆ ಜಾರಿ ಪ್ರಸ್ತಾವನೆ ನಗರಾಭಿವೃದ್ಧಿ ಇಲಾಖೆಗೆ ಬಿಬಿಎಂಪಿಯಿಂದ ಸಲ್ಲಿಕೆಯಾಗಿದ್ದು, ಬಜೆಟ್‌ನಲ್ಲಿ ಘೋಷಣೆ
ಯಾಗಲಿದೆ ಎಂದು ಹೇಳಲಾಗಿದೆ.

Advertisement

ಮಳೆಗಾಲ ಸಂದರ್ಭದಲ್ಲಿ ಪದೇ ಪದೇ ರಸ್ತೆಗಳಲ್ಲಿ ಗುಂಡಿ ಬೀಳುವ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಸಲುವಾಗಿ ರೂಪಿಸಿರುವ ವೈಟ್‌ ಟಾಂಪಿಗ್‌ ಯೋಜನೆ ಬಗ್ಗೆ ಉತ್ತಮ ಅಭಿಪ್ರಾಯ ಇರುವುದರಿಂದ ಮತ್ತಷ್ಟು ರಸ್ತೆಗಳಿಗೆ ವಿಸ್ತರಿಸಲು ಬಿಬಿಎಂಪಿ ಮುಂದಾಗಿದೆ. ಇದಕ್ಕಾಗಿ ರಾಜ್ಯ ಸರ್ಕಾರದ ನೆರವು ಕೋರಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಿಬಿಎಂಪಿ ಅಧಿಕಾರಿಗಳೊಂದಿಗೆ ಬಜೆಟ್‌ ಪೂರ್ವ ಸಭೆ ನಡೆಸಿ, ನಗರದಲ್ಲಿ ಮೇಲ್ಸೇತುವೆ, ಅಂಡರ್‌ ಪಾಸ್‌, ಗ್ರೇಟ್‌ ಸಪರೇಟರ್‌, ಟೆಂಡರ್‌ ಶೂರ್‌ ರಸ್ತೆಗಳ ಅಭಿವೃದ್ಧಿಗೆ ಈ ಸಾಲಿನ ಬಜೆಟ್‌ನಲ್ಲಿ ಮತ್ತಷ್ಟು ಅನುದಾನ ಕೋರಿ ಬಿಬಿಎಂಪಿ ಪ್ರಸ್ತಾವನೆ ಸಲ್ಲಿಸಿದೆ. ಅದರಲ್ಲಿ ವಿಶೇಷವಾಗಿ ನಗರದಲ್ಲಿ 150 ಕಿ.ಮೀ. ಉದ್ದದ ರಸ್ತೆಗಳನ್ನು ವೈಟ್‌ ಟಾಪಿಂಗ್‌ ಯೋಜನೆಯಡಿ ಕೈಗೊಳ್ಳುವುದು ಸೇರಿದೆ ಎಂದು ಹೇಳಲಾಗಿದೆ.

ಬಿಬಿಎಂಪಿ ಇದೀಗ ಒಂದು ಸಾವಿರ ಕೋಟಿ ವೆಚ್ಚದಲ್ಲಿ ಮತ್ತೆ 150 ಕಿಲೋ ಮಿಟರ್‌ ರಸ್ತೆ ಅಭಿವೃದ್ಧಿಗೆ ಯೋಜನೆ ರೂಪಿಸಿದೆ. ನಗರದ ಹೊರ ವರ್ತುಲ ರಸ್ತೆಗಳು ಹಾಗೂ ರಾಷ್ಟ್ರೀಯ ಹೆದ್ದಾರಿಗಳಲ್ಲಿ ವೈಟ್‌ ಟಾಪಿಂಗ್‌ಗೆ ರಸ್ತೆಗಳನ್ನು ಗುರುತಿಸಲಾಗಿದೆ. 

ಈಗಾಗಲೇ ಮೊದಲ ಹಂತದಲ್ಲಿ 900 ಕೋಟಿ ರೂ. ವೆಚ್ಚದಲ್ಲಿ 96 ಕಿ.ಮೀ. ಉದ್ದದ ರಸ್ತೆಗಳನ್ನು ವೈಟ್‌ ಟಾಪಿಂಗ್‌ ಅಡಿಯಲ್ಲಿ
ಅಭಿವೃದ್ಧಿ ಪಡಿಸಲಾಗುತ್ತಿದೆ. ನಗರೋತ್ಥಾನ ಯೋಜನೆಯಡಿ 93.47 ಕಿ.ಮೀ ಉದ್ದದ 29 ರಸ್ತೆಗಳು ಮತ್ತು ಆರು ಜಂಕ್ಷನ್‌ಗಳಲ್ಲಿ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದೆ.

Advertisement

ಡಿಜಿಟಲ್‌ ಡೋರ್‌ ಸಂಖ್ಯೆ
ಬೆಂಗಳೂರು:
ಬಿಬಿಎಂಪಿಯು ನಗರದಲ್ಲಿರುವ ಪ್ರತಿ ಆಸ್ತಿಗಳಿಗೂ ಡಿಜಿಟಲ್‌ ಡೋರ್‌ ಸಂಖ್ಯೆ ನೀಡಲು ಮುಂದಾಗಿದ್ದು, ಏಪ್ರಿಲ್‌ನಿಂದ ಹೊಸ ಸಂಖ್ಯೆ ನೀಡಲು ಚಿಂತಿಸಿದೆ. ಪಾಲಿಕೆ ವ್ಯಾಪ್ತಿಯಲ್ಲಿರುವ ಎಲ್ಲ ಆಸ್ತಿಗಳನ್ನು ಗುರುತಿಸಿ ಸೂಕ್ತ ತೆರಿಗೆ ಸಂಗ್ರಹಿಸುವ ಸಲುವಾಗಿ ಸಮಗ್ರ ಮಾಹಿತಿಯಿರುವ ಡಿಜಿಟಲ್‌ ಡೋರ್‌ ಸಂಖ್ಯೆ ನೀಡಲು ಸಿದ್ಧತೆ ನಡೆಸಿದೆ. 

ಯೋಜನೆ ಅನುಷ್ಠಾನಕ್ಕೆ ತಗುಲುವ ವೆಚ್ಚ, ಯೋಜನೆ ಜಾರಿ ವಿಧಾನ ರೂಪಿಸುವ ಜವಾಬ್ದಾರಿ ಯನ್ನು ಖಾಸಗಿ ಸಂಸ್ಥೆಗೆ ವಹಿಸಿದೆ. ಸಂಸ್ಥೆ ನೀಡುವ ವರದಿ ಆಧರಿಸಿ ಪ್ರತಿ ಆಸ್ತಿ, ಕಟ್ಟಡಕ್ಕೂ ಏಕರೂಪದ ಪ್ರತ್ಯೇಕ ಡಿಜಿಟಲ್‌ ಸಂಖ್ಯೆ ನೀಡಲು ನಿರ್ಧರಿಸಿದೆ. ಪ್ರತಿ ಆಸ್ತಿಗೂ ಅಕ್ಷರ ಸಹಿತ 7ರಿಂದ 11 ಸಂಖ್ಯೆಯ ಡಿಜಿ ಟಲ್‌ ಸಂಖ್ಯೆ ನೀಡಲಾಗುತ್ತದೆ. ಆ ಸಂಖ್ಯೆ ಆಧರಿಸಿ ಆಸ್ತಿಯ ವಿಳಾಸ ವನ್ನು ಜಿಐಎಸ್‌ ಮ್ಯಾಪಿಂಗ್‌ ಮೂಲಕ ನಮೂದಿಸಲಾಗುತ್ತದೆ. ಇದರಿಂದ ವೆಬ್‌ಸೈಟ್‌ನಲ್ಲಿ ಡಿಜಿಟಲ್‌ ಸಂಖ್ಯೆ ನಮೂದಿಸಿದರೆ ಅದು ಯಾರ ಆಸ್ತಿ, ಯಾವ ಸ್ಥಳದಲ್ಲಿದೆ ಎಂಬ ಸಮಗ್ರ ಮಾಹಿತಿ ತಿಳಿಯಲಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಎಲ್ಲ ಆಸ್ತಿಗಳಿಗೆ ಡಿಜಿಟಲ್‌ ಡೋರ್‌ ಸಂಖ್ಯೆ ನೀಡುವ ಸಂಬಂಧ ಯೋಜನಾ ವೆಚ್ಚ ಹಾಗೂ ಅನುಷ್ಠಾನದ ಬಗ್ಗೆ ವರದಿ ನೀಡುವ ಜವಾಬ್ದಾರಿಯನ್ನು ಖಾಸಗಿ ಸಂಸ್ಥೆಗೆ ವಹಿಸಲಾಗಿದೆ. ಶೀಘ್ರವಾಗಿ ವರದಿ ಪಡೆದು ಡಿಜಿಟಲ್‌ ಡೋರ್‌ ಸಂಖ್ಯೆ ನೀಡಿಕೆಗೆ ಚಾಲನೆ ನೀಡಲು ಪ್ರಯತ್ನಿಸಲಾಗುವುದು ಎಂದು ಮೇಯರ್‌ ಆರ್‌.ಸಂಪತ್‌ರಾಜ್‌ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next