Advertisement

ರಾಜ್ಯದ 150 ಐಟಿಐಗಳು ಮೇಲ್ದರ್ಜೆಗೆ

09:43 PM Sep 25, 2021 | Team Udayavani |

ಬ್ರಹ್ಮಾವರ: ಯುವಕರಿಗೆ ಕಲಿಕೆ, ಉದ್ಯೋಗ, ಭವಿಷ್ಯ ನೀಡಿ ಭಾರತದ ಸದೃಢ ಪ್ರಜೆಯನ್ನಾಗಿಸುವುದು ಪ್ರಧಾನಿ ನರೇಂದ್ರ ಮೋದಿ ಅವರ ಕಲ್ಪನೆ. ಹೊಸ ಶಿಕ್ಷಣ ನೀತಿಯಲ್ಲಿ ಶಾಲೆಯಿಂದಲೇ ಕೌಶಲ ಹೆಚ್ಚಿಸುವ ಕಾರ್ಯ ಆಗಲಿದೆ.

Advertisement

ರಾಜ್ಯದ 150 ಐಟಿಐ ಕೇಂದ್ರಗಳನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಮೇಲ್ದರ್ಜೆಗೇರಿಸುವ ಯೋಜನೆ ಇದೆ ಎಂದು ಉನ್ನತ ಶಿಕ್ಷಣ, ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನ ಹಾಗೂ ಕೌಶಲಾಭಿವೃದ್ದಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಸಚಿವ ಡಾ| ಸಿ.ಎನ್‌. ಅಶ್ವತ್ಥನಾರಾಯಣ ಹೇಳಿದರು.

ಶನಿವಾರ ಉಪ್ಪೂರಿನಲ್ಲಿ ಸರಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ(ಜಿಟಿಟಿಸಿ) ಉದ್ಘಾಟಿಸಿ ಅವರು ಮಾತನಾಡಿದರು.

ಕೃಷಿ ಸಚಿವೆ ಶೋಭಾ ಕರಂದ್ಲಾಜೆ ಕಾರ್ಯಕ್ರಮ ಉದ್ಘಾಟಿಸಿ, ಹೊಸ ಯಂತ್ರೋಪಕರಣಗಳೊಂದಿಗೆ ಹೊಸ ತಂತ್ರಜ್ಞಾನದೊಂದಿಗೆ ನವೀನ ಯುಗಕ್ಕೆ ಕಾಲಿಡುತ್ತಿದ್ದೇವೆ. ಇಂತಹ ಸಂದರ್ಭದಲ್ಲಿ ಜ್ಞಾನ, ಅನುಭವದ ಉನ್ನತೀಕರಣಕ್ಕೆ ಜಿಟಿಟಿಸಿ ತರಬೇತಿ ಸಹಕಾರಿ ಎಂದರು. ನೌಕಾಯಾನ, ಮೀನುಗಾರಿಕೆಗೆ ಸಂಬಂಧಿಸಿದ ತರಬೇತಿಗಳನ್ನೂ ಅಳವಡಿಸಲಾಗುವುದು ಎಂದರು.

ಇದನ್ನೂ ಓದಿ:ಚಾರ್ಮಾಡಿ ಘಾಟ್ ನಲ್ಲಿ ಪೆಟ್ರೋಲ್ ಟ್ಯಾಂಕರ್ ಪಲ್ಟಿ:ಪೆಟ್ರೋಲ್ ಸೋರಿಕೆ

Advertisement

ಶಾಸಕ ಕೆ. ರಘುಪತಿ ಭಟ್‌ ಅಧ್ಯಕ್ಷತೆ ವಹಿಸಿ, ಸ್ವ ಉದ್ಯೋಗ ಬಯಸುವ ಪ್ರತಿಭಾನ್ವಿತರಿಗೆ ಜಿಟಿಟಿಸಿ ಭಾಗ್ಯದ ಬಾಗಿಲು ತೆರೆದಂತೆ. ಕೌಶಲ ಆಧಾರಿತ ಶಿಕ್ಷಣದ ಮೂಲಕ ಭಾರತವು ಮುಂದಿನ ದಿನಗಳಲ್ಲಿ ಮಾನವ ಸಂಪನ್ಮೂಲ ಪೂರೈಕೆಯ ರಾಷ್ಟ್ರವಾಗಲಿದೆ ಎಂದರು.

ಕರಾವಳಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಟೊಯೊಟಾ ಕಂಪೆನಿ ಅಧಿಕಾರಿ ರೋಶನ್‌ ಆರ್‌., ಪಂಚಾಯತ್‌ ಅಧ್ಯಕ್ಷ ಕೃಷ್ಣರಾಜ್‌ ಕೋಟ್ಯಾನ್‌ ಮತ್ತಿತರರು ಉಪಸ್ಥಿತರಿದ್ದರು.

ಮೈಸೂರು ಜಿಟಿಟಿಸಿ ವ್ಯವಸ್ಥಾಪಕ ಲಿಂಗರಾಜ ಸಣ್ಣಮನಿ ಸ್ವಾಗತಿಸಿ, ವ್ಯವಸ್ಥಾಪಕ ನಿರ್ದೇಶಕ ರಾಘವೇಂದ್ರ ಪ್ರಸ್ತಾವನೆಗೈದರು. ಪ್ರಶಾಂತ್‌ ಶೆಟ್ಟಿ ಹಾವಂಜೆ ನಿರೂಪಿಸಿ, ಪ್ರಾಂಶುಪಾಲ ಮಂಜುನಾಥ ನಾಯಕ್‌ ವಂದಿಸಿದರು.

ಉದ್ಯೋಗ ಖಚಿತ
ಪಾಲಿಟೆಕ್ನಿಕ್‌ ಮತ್ತು ಜಿಟಿಟಿಸಿ ಕೋರ್ಸ್‌ ಗಳಿಗೆ ಭಾರೀ ಬೇಡಿಕೆ ಇದೆ. ಇಲ್ಲಿ ಕಲಿತ ಪ್ರತಿಯೊಬ್ಬರಿಗೆ ಉದ್ಯೋಗ ಖಚಿತ ಎಂದು ಸಚಿವ ಅಶ್ವತ್ಥ‌ನಾರಾಯಣ ಅವರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next