ಕಲಬುರಗಿ: ಕೊರೊನಾ ಸೋಂಕಿತರಿಗೆ ಹಾಸಿಗೆಗಳ ಸಮಸ್ಯೆಯಾಗದಂತೆನೋಡಿಕೊಳ್ಳುವ ನಿಟ್ಟಿನಲ್ಲಿ ಜಿಮ್ಸ್ ಆಸ್ಪತ್ರೆಆವರಣದ ನವಜಾತ ಶಿಶು ಮಕ್ಕಳ ಆರೈಕೆಕೇಂದ್ರ (ಎಸ್‌ಎನ್‌ಸಿಯು) ಕಟ್ಟಡದಲ್ಲಿ 150ಐಸಿಯು ಬೆಡ್‌ಗಳ ವ್ಯವಸ್ಥೆ ಮಾಡಲಾಗುತ್ತಿದ್ದು,ಒಂದು ವಾರದಲ್ಲಿ ಈ ಐಸಿಯು ಬೆಡ್‌ಗಳು ರೋಗಿಗಳಿಗೆ ಲಭ್ಯವಾಗಲಿದೆ ಎಂದುಜಿಲ್ಲಾಧಿಕಾರಿ ವಾಸಿರೆಡ್ಡಿ ವಿಜಯಾ ಜ್ಯೋತ್ನಾÕತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದಅವರು, ಈಗಾಗಲೇ ಎಸ್‌ಎನ್‌ಸಿಯು ಕಟ್ಟಡಪರಿಶೀಲಿಸಲಾಗಿದೆ. ವಿದ್ಯುತ್ ಸಂಪರ್ಕಇನ್ನಿತರ ವ್ಯವಸ್ಥೆ ಮಾಡುವಂತೆ ಸೂಚಿಸಲಾಗಿದೆ.ಜತೆಗೆ ಜಿಮ್ಸ್ ಮತ್ತು ಹಳೆ ಜಿಲ್ಲಾಸ್ಪತ್ರೆ, ಟ್ರಾಮಾಸೆಂಟರ್‌ನ್ನು ಕೊರೊನಾ ಸೋಂಕಿತರ ಚಿಕಿತ್ಸೆಗೆಮೀಸಲಿಡಲಾಗಿದೆ. ಇಲ್ಲಿ ಶೇ.90 ಬೆಡ್‌ಗಳಲ್ಲಿ ರೋಗಿಗಳು ದಾಖಲಾಗಿದ್ದಾರೆ. ಇನ್ನುಶೇ.10 ಬೆಡ್ ಖಾಲಿಯಿವೆ. ಹೀಗಾಗಿ ಅನಗತ್ಯಆತಂಕಪಡುವ ಅಗತ್ಯವಿಲ್ಲ ಎಂದರು.
ಸೋಂಕಿತರ ಸಂಖ್ಯೆ ಹೆಚ್ಚಳಆಗುತ್ತಿರುವುದರಿಂದ ವೈದ್ಯಕೀಯತುರ್ತು ಸ್ಥಿತಿ ನಿಭಾಯಿಸಲು ಜಿಲ್ಲಾಡಳಿತಸಿದ್ಧತೆ ಮಾಡಿಕೊಂಡಿದೆ. ಜನರಿಗೆಸಮಸ್ಯೆಯಾಗದಂತೆ ಎಲ್ಲ ವ್ಯವಸ್ಥೆಮಾಡಲಾಗುವುದು. ಜನರು ಯಾವುದೇಕಾರಣಕ್ಕೂ ಗಾಬರಿ ಮತ್ತು ಆತಂಕಕ್ಕೆಒಳಗಾಗಬಾರದು. ಎಲ್ಲ ಸೋಂಕಿತರಿಗೂಐಸಿಯು ಬೆಡ್ ಮತ್ತು ರೆಮ್‌ಡೆಸಿವಿಯರ್‌ಇಂಜೆಕ್ಷನ್ ಅಗತ್ಯವಿಲ್ಲ. ಸೌಮ್ಯವಾದರೋಗದ ಲಕ್ಷಣಗಳಿದ್ದವರಿಗೆ ವೈದ್ಯರುನೋಡಿಕೊಂಡು ಸರಳ ಚಿಕಿತ್ಸೆ ಮೇಲೆಯೇಗುಣಮುಖರನ್ನಾಗಿ ಮಾಡುತ್ತಾರೆ.
ಉಸಿರಾಟದ ಸಮಸ್ಯೆ ಉಂಟಾದವರಿಗೆಮಾತ್ರ ಐಸಿಯು ಬೆಡ್ ಬೇಕಾಗುತ್ತದೆ.ಆದರೂ, ಜನರು ಜಾಗೃತರಾಗಿರಬೇಕುಎಂದು ಹೇಳಿದರು.ಗ್ರಾಮೀಣ ಭಾಗದಲ್ಲಿಯೂ ಸೋಂಕಿತರುಕಂಡು ಬರುತ್ತಿರುವುದರಿಂದ ಎಲ್ಲತಾಲೂಕು ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲುವ್ಯವಸ್ಥೆ ಮಾಡಲಾಗಿದೆ. ಸ್ಥಿತಿ ಗಂಭೀರವಾಗಿಇರುವವರು ಮತ್ತು ಉಸಿರಾಟದಸಮಸ್ಯೆ ಎದುರಿಸುವವರನ್ನು ಮಾತ್ರಕಲಬುರಗಿಗೆ ಕಳುಹಿಸಿಕೊಡಲು ತಾಲೂಕುವೈದ್ಯಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.ಅಲ್ಲದೆ ವೈದ್ಯರು ಕಾಳಜಿ ವಹಿಸಿ ಕೆಲಸಮಾಡುತ್ತಿದ್ದಾರೆ.
ಹೋಂ ಐಸೋಲೇಷನ್‌ನಲ್ಲಿರುವ ಸೋಂಕಿತರ ಬಗ್ಗೆ ನಿರಂತರ ಮಾಹಿತಿಸಂಗ್ರಹಿಸುವ ಕೆಲಸ ಮಾಡಲಾಗುತ್ತಿದೆ.ಆರೋಗ್ಯ ಸಿಬ್ಬಂದಿ, ಶಿಕ್ಷಕರು ಮತ್ತು ಸ್ವಯಂಸೇವಕರು ಸೇರಿಕೊಂಡು ನಿತ್ಯ ಎರಡು ಸಲಕರೆ ಮಾಡಿ ಮಾಹಿತಿ ಸಂಗ್ರಹಿಸುತ್ತಿದ್ದಾರೆಎಂದು ವಿವರಿಸಿದರು.