Advertisement

15 ನಿಮಿಷದಲ್ಲಿ ಆರು ರಾಗಿ ಮುದ್ದೆ ಗುಳುಂ!

06:55 AM Jul 02, 2018 | Team Udayavani |

ಮಂಡ್ಯ: ತಾಲೂಕಿನ ಮಂಗಲ ಗ್ರಾಮದಲ್ಲಿ ಭಾನುವಾರ ಆಯೋಜಿಸಿದ್ದ “ನಾಟಿ ಕೋಳಿ ಸಾಂಬಾರ್‌ ನೊಂದಿಗೆ ರಾಗಿಮುದ್ದೆ ಉಣ್ಣುವ ಸ್ಪರ್ಧೆ’ಯಲ್ಲಿ 60 ವರ್ಷದ ಅರಕೆರೆ ಈರೇಗೌಡ 15 ನಿಮಿಷದಲ್ಲಿ 6 ಮುದ್ದೆ ಗುಳುಂ ಮಾಡಿ ಪ್ರಥಮ ಬಹುಮಾನ(5000 ರೂ.) ಪಡೆದರು.

Advertisement

ಸುರೇಶ ಐದು ಮುಕ್ಕಾಲು ಮುದ್ದೆ ತಿಂದು 3000 ರೂ.(ದ್ವಿತೀಯ), ರಾಮಮೂರ್ತಿ ಐದು ಮುದ್ದೆ ಉಂಡು 2000 ರೂ.ನೊಂದಿಗೆ ತೃತೀಯ ಬಹುಮಾನ ಪಡೆದರು. ಪುರುಷರಿಗೆ ಸರಿಸಮನಾಗಿ ಏಕೈಕ ಮಹಿಳೆ ಜಯಮ್ಮ ಎರಡು ಮುದ್ದೆ ತಿಂದು ಪೈಪೋಟಿ ನೀಡಿದರು. 

ರಾಮನಗರ, ತಿ.ನರಸೀಪುರ, ಹೆಚ್‌.ಡಿ.ಕೋಟೆ, ಬೆಂಗಳೂರು, ಬೆಂಗಳೂರು ಗ್ರಾ.,ತರೀಕೆರೆ, ಹಾಸನ, ಹುಣಸೂರು, ಬನ್ನೂರು, ಶ್ರೀರಂಗಪಟ್ಟಣ, ಚನ್ನಪಟ್ಟಣ ಸೇರಿದಂತೆ ರಾಜ್ಯದ ವಿವಿಧೆಡೆಯಿಂದ 60 ಮಂದಿ ಸ್ಪರ್ಧಿಗಳು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next