Advertisement

ವೃದ್ಧಾಶ್ರಮಗಳಿಗೆ ನೀಡುವ ಅನುದಾನ 15 ಲಕ್ಷ ರೂ.ಗೆ ಏರಿಕೆ: ಸಿಎಂ

10:37 PM Oct 01, 2021 | Team Udayavani |

ಬೆಂಗಳೂರು: ಸರಕಾರ ನಡೆಸುತ್ತಿರುವ ವೃದ್ಧಾಶ್ರಮಗಳಿಗೆ ರಾಜ್ಯ ಸರಕಾರ 8 ಲಕ್ಷ ರೂ. ನೀಡುತ್ತಿದ್ದು, ಇದನ್ನು 15 ಲಕ್ಷ ರೂ.ಗೆ ಏರಿಕೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

Advertisement

ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ನಿರ್ದೇಶನಾಲಯ ಶುಕ್ರವಾರ ರವೀಂದ್ರ ಕಲಾಕ್ಷೇತ್ರದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಕಾನೂನು, ಸಾಹಿತ್ಯ, ಶಿಕ್ಷಣ, ಕ್ರೀಡೆ, ಕಲೆ ಹಾಗೂ ಸಮಾಜ ಸೇವಾ ಕ್ಷೇತ್ರಗಳಲ್ಲಿ ಸಾಧನೆಗೈದ ಹಿರಿಯ ನಾಗರಿಕರನ್ನು ಸಮ್ಮಾನಿಸಿ ಅವರು ಮಾತನಾಡಿದರು.

ಇದನ್ನೂ ಓದಿ:ರಾಜ್ಯ ಹೈಕೋರ್ಟ್‌ಗೆ ಅ.11ರಿಂದ ದಸರಾ ರಜೆ

ಸರಕಾರ ಹಿರಿಯ ನಾಗರಿಕರಿಗೆ  ಊರುಗೋಲಾಗಿ ನಿಲ್ಲಲಿದೆ ಹಾಗೂ   ಸಂವೇದನಾಶೀಲವಾಗಿ ಹಿರಿಯ ನಾಗರಿಕರ ಸಮಸ್ಯೆಗಳಿಗೆ ಸ್ಪಂದಿಸಲಿದೆ. ಅವರ ವೈಯಕ್ತಿಕ ಬದುಕಿಗೆ ಆತ್ಮಸ್ಥೈರ್ಯ, ಜೀವಂತಿಕೆ ತುಂಬುವ ಹಲವು ಕಾರ್ಯಕ್ರಮಗಳನ್ನು  ರೂಪಿಸಲಿದೆ ಎಂದು ಹೇಳಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

More
Next